More

    ಹೇರ್​ ಪ್ರಾಡಕ್ಟ್​ನಿಂದ ಗರ್ಭಾಶಯದ ಕ್ಯಾನ್ಸರ್​: ಖಾಸಗಿ ಕಂಪನಿ ವಿರುದ್ಧ ದಾವೆ ಹೂಡಿದ ಮಹಿಳೆ

    ವಾಷಿಂಗ್ಟನ್​: ಖಾಸಗಿ ಕಂಪನಿ ಮಾರಾಟ ಮಾಡುವ ಕೂದಲು ನೇರಗೊಳಿಸುವ ರಾಸಾಯನಿಕವನ್ನು ಬಳಸಿದ್ದರ ಪರಿಣಾಮ ಗರ್ಭಾಶಯದ ಕ್ಯಾನ್ಸರ್​ ಬಂದಿದೆ ಎಂದು ಆರೋಪಿಸಿ ಅಮೆರಿಕ ಮೂಲದ ಮಹಿಳೆಯೊಬ್ಬಳು ಕಂಪನಿ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿರುವ ಪ್ರಕರಣ ವರದಿಯಾಗಿದೆ.

    ಶುಕ್ರವಾರ (ಅ.21) ಕೋರ್ಟ್​ನಲ್ಲಿ ಮೊಕದ್ದಮ್ಮೆ ದಾಖಲಿಸಿರುವುದಾಗಿ ಸಂತ್ರಸ್ತ ಮಹಿಳೆಯ ಪರ ವಕೀಲರು ತಿಳಿಸಿದ್ದಾರೆ.

    ದಾವೆ ಹೂಡಿರುವ ಮಹಿಳೆಯ ಹೆಸರು ಜೆನ್ನಿ ಮಿಚೆಲ್​. ಎರಡು ದಶಕಗಳಿಂದ ಖಾಸಗಿ ಕಂಪನಿಯ ಹೇರ್​​ ಪ್ರಾಡಕ್ಟ್​ ಅನ್ನು ಬಳಸುತ್ತಿದ್ದಾಗಿ ಹೇಳಿಕೊಂಡಿದ್ದಾರೆ. ಇದೇ ಉತ್ಪನ್ನ ಗರ್ಭಾಶಯದ ಕ್ಯಾನ್ಸರ್​ಗೆ ಕಾರಣವಾಗಿದೆ ಎಂದಿರುವ ಮಿಚೆಲ್​, ಅನಿವಾರ್ಯತೆಯಿಂದಾಗಿ ಗರ್ಭಕೋಶವನ್ನು ತೆಗೆಸುವ ಚಿಕಿತ್ಸೆಗೆ ಒಳಗಾಗಬೇಕಾಯಿತು ಎಂದು ತಿಳಿಸಿದ್ದಾರೆ.

    ವರ್ಷಕ್ಕೆ ನಾಲ್ಕಕ್ಕಿಂತ ಹೆಚ್ಚು ಬಾರಿ ಹೇರ್​ ಪ್ರಾಡಕ್ಟ್​ ಬಳಸುವ ಮಹಿಳೆಯರು, ಪ್ರಾಡಕ್ಟ್​ ಬಳಸದವರಿಗಿಂತ ಗರ್ಭಾಶಯದ ಕ್ಯಾನ್ಸರ್​ಗೆ ತುತ್ತಾಗುವ ಸಾಧ್ಯತೆ ಎರಡು ಪಟ್ಟು ಹೆಚ್ಚಿದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಅಂದಹಾಗೆ ಗರ್ಭಾಶಯದ ಕ್ಯಾನ್ಸರ್ ತುಂಬಾ ಅಪರೂಪ, ಆದರೆ ಅಮೆರಿದಲ್ಲಿ ವಿಶೇಷವಾಗಿ ಕಪ್ಪು ಮಹಿಳೆಯರಲ್ಲಿ ಇದರ ಸಂಭವವು ಹೆಚ್ಚುತ್ತಿದೆ ಎಂದು ವರದಿಯಾಗಿದೆ.

    ಶುಕ್ರವಾರ ಖಾಸಗಿ​ ಕಂಪನಿಯ ಅಮೆರಿಕ ಶಾಖೆಯ ವಿರುದ್ಧ ಸಂತ್ರಸ್ತೆ ದಾವೆ ಹೂಡಿದ್ದಾರೆ. ಅಂದಹಾಗೆ ಖಾಸಗಿಯು ಫ್ಯಾನ್ಸ್​ ಮೂಲದ ದೈತ್ಯ ಕಾಸ್ಮೆಟಿಕ್​ ಕಂಪನಿಯಾಗಿದೆ. ದಾವೆಗೆ ಸಂಬಂಧಿಸಿದಂತೆ ಖಾಸಗಿ ಕಂಪನಿ ಈವರೆಗೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. (ಏಜೆನ್ಸೀಸ್​)

    ನಿಂತಿದ್ದ ಟ್ರಕ್​ಗೆ ಬಸ್​ ಡಿಕ್ಕಿ: ದೀಪಾವಳಿ ಆಚರಿಸಲು ಊರಿಗೆ ಬರ್ತಿದ್ದ 15 ಕಾರ್ಮಿಕರು ದುರ್ಮರಣ

    ದೀಪಾವಳಿ ಗಿಫ್ಟ್​: ಈ ರಾಜ್ಯದಲ್ಲಿ ಅ.27ರವರೆಗೆ ಸಂಚಾರ ನಿಯಮ ಉಲ್ಲಂಘಿಸಿದ್ರು ಯಾವುದೇ ದಂಡ ವಿಧಿಸಲ್ಲ!

    ವಿದ್ಯಾರ್ಥಿಗಳಿಗೆ ಅಶ್ಲೀಲ ವಿಡಿಯೋಗಳನ್ನು ಕಳಿಸಿದ ಆರೋಪ: ಉಪನ್ಯಾಸಕನ ವಿರುದ್ಧ FIR, ಕಾಲೇಜಿನಿಂದ ಸಸ್ಪೆಂಡ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts