More

    ಭಾರತದ ಕಡಲ ತೀರದಲ್ಲಿ ಹದ್ದಿನ ಕಣ್ಣಿಡಲಿವೆ ಅಮೆರಿಕಾದ 31 ಡ್ರೋನ್​ಗಳು!

    ವಾಷಿಂಗ್ಟನ್: ಭಾರತದೊಂದಿಗೆ ತನ್ನ ಬಾಂಧವ್ಯ ಅತ್ಯಂತ ಮೌಲ್ಯಯುತವಾಗಿದೆ ಎಂದು ಅಮೆರಿಕ ಹೇಳಿದೆ. ದೇಶಕ್ಕೆ 31 ಸಶಸ್ತ್ರ ಡ್ರೋನ್‌ಗಳನ್ನು ಒದಗಿಸಲಿದ್ದು, ಅವು ಕರಾವಳಿ ಮತ್ತು ಸಮುದ್ರದಲ್ಲಿ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲು ಸಹಕಾರಿಯಾಗಲಿವೆ ಎಂದು ಅದು ಹೇಳಿದೆ.

    ಇದನ್ನೂ ಓದಿ: ಇದು ‘ನವ ಭಾರತ’ ಹುಷಾರ್​.. ಕಡಲ್ಗಳ್ಳತನ, ಕಳ್ಳಸಾಗಾಣಿಕೆ ಸಹಿಸುವುದಿಲ್ಲ: ರಾಜನಾಥ್ ಸಿಂಗ್ 

    ಸುಮಾರು 4 ಶತಕೋಟಿ ಡಾಲರ್​ ಮೌಲ್ಯದ ಡ್ರೋನ್‌ಗಳನ್ನು ಭಾರತಕ್ಕೆ ಮಾರಾಟ ಮಾಡಲು ಒಪ್ಪಿಕೊಂಡಿರುವುದಾಗಿ ಅಮೆರಿಕಾ ಅಧ್ಯಕ್ಷರ ಕಚೇರಿಯು ಅಲ್ಲಿನ ಸಂಸತ್​ನ ಸಂಸತ್​ ಆಗಿರುವ ಕಾಂಗ್ರೆಸ್‌ಗೆ ತಿಳಿಸಿದ ಕೆಲವೇ ದಿನಗಳ ಬಳಿಕ ಈ ಪ್ರಕಟಣೆ ಹೊರಬಿದ್ದಿದೆ.

    ಇಂಡೋ-ಪೆಸಿಫಿಕ್‌ನಲ್ಲಿ ಶಾಂತಿ, ಸ್ಥಿರತೆ ಮತ್ತು ಮುಕ್ತ ಸಂಚರವನ್ನು ಕಾಪಾಡಿಕೊಳ್ಳುವುದು ಎರಡು ದೇಶಗಳ ಆದ್ಯತೆಯಾಗಿದೆ ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ಮ್ಯಾಥ್ಯೂ ಮಿಲ್ಲರ್ ತಿಳಿಸಿದರು.

    ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನು ಹತ್ಯೆಗೆ ಸಂಚು ರೂಪಿಸಿದ ವಿಚಾರದಲ್ಲಿ ಭಾರತ ಮತ್ತು ಅಮೆರಿಕ ನಡುವೆ ವಿವಾದವಿದೆ ಎಂಬ ಸುದ್ದಿ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ಎಂಕ್ಯೂ-9ಬಿ ಸಶಸ್ತ್ರ ಡ್ರೋನ್‌ಗಳ ಮಾರಾಟವನ್ನು ನಿಲ್ಲಿಸಲಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಅದೇ ಸಮಯದಲ್ಲಿ, ಬಿಡೆನ್ ಅವರ ಕಾರ್ಯಕಾರಿ ಸಮಿತಿಯು ಈ ಡ್ರೋನ್‌ಗಳ ಮಾರಾಟಕ್ಕೆ ಅನುಮೋದನೆ ನೀಡಿದೆ ಮತ್ತು ದೇಶದ ಕಾಂಗ್ರೆಸ್‌ಗೆ ಸೂಚನೆ ನೀಡಿದೆ. ಇದನ್ನು ಅಮೆರಿಕಾದ ರಕ್ಷಣಾ ಮತ್ತು ಭದ್ರತಾ ಸಹಕಾರ ಸಂಸ್ಥೆ ಹೇಳಿದೆ.

    ಅಪರೂಪದ ದಾಖಲೆ ಬರೆದ ಹನುಮಾನ್! ವಿವರ ಇಲ್ಲಿದೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts