More

    ಶ್ರೀ ರಾಮ ಮಂದಿರಕ್ಕಾಗಿ 28 ವರ್ಷದಿಂದ ನಿರಶನ; ದೇಗುಲದ ಪ್ರಸಾದ ಸ್ವೀಕರಿಸಿ ಉಪವಾಸ ಮುರಿದ ಶಬರಿ

    ನವದೆಹಲಿ: ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿಯಲ್ಲೇ ಶ್ರೀ ರಾಮ ಮಂದಿರ ನಿರ್ಮಾಣವಾಗಬೇಕೆಂಬ ಆಶಯದೊಂದಿಗೆ ಕಳೆದ 28 ವರ್ಷಗಳಿಂದ ಹಣ್ಣು ತಿಂದು, ಮೊಸರು, ಹಾಲು ಕುಡಿದು ನಡೆಸುತ್ತಿದ್ದ ತಮ್ಮ ನಿರಶನವನ್ನು 82ರ ವೃದ್ಧೆ ಕೈಬಿಟ್ಟಿದ್ದಾರೆ. ಮಂದಿರ ನಿರ್ಮಾಣಕ್ಕಾಗಿ ಆ.5ರಂದು ಶಿಲಾನ್ಯಾಸ ನೆರವೇರುವುದು ಖಚಿತವಾಗುತ್ತಿರುವಂತೆ ದೇಗುಲದಿಂದ ಬಂದ ಪ್ರಸಾದವನ್ನು ಸ್ವೀಕರಿಸಿ ತಮ್ಮ ನಿರಶನವನ್ನು ಅಂತ್ಯಗೊಳಿಸಿದರು.

    ಆಯೋಧ್ಯೆ ನಿವಾಸಿ ಉರ್ಮಿಳಾ ಚತುರ್ವೇದಿ ಈ ನಿರಶನ ಕೈಗೊಂಡಿದ್ದವರು. ರಾಮ ಜನ್ಮಭೂಮಿ ವಿವಾದ ತಾರಕ್ಕೇರಿ ದೇಶದ ವಿವಿಧೆಡೆಗಳಲ್ಲಿ ಗಲಾಟೆ-ಗಲಭೆಗಳು ಎದ್ದ ಹಿನ್ನೆಲೆಯಲ್ಲಿ 1992ರಿಂದ ಉರ್ಮಿಳಾ ಚತುರ್ವೇದಿ ನಿರಶನ ಕೈಗೊಂಡಿದ್ದರು. ಕೇವಲ ಹಣ್ಣು ತಿನ್ನುತ್ತಿದ್ದ ಅವರು ಮೊಸರು ಮತ್ತು ಹಾಲು ಕುಡಿದು, ದೇಗುಲ ನಿರ್ಮಾಣದ ಆಶಯದೊಂದಿಗೆ ನಿರಶನ ನಡೆಸುತ್ತಿದ್ದರು.

    ಇದನ್ನೂ ಓದಿ: ಮಹಿಳೆಯರ ಶೌಚಗೃಹ ಶುಚಿಗೊಳಿಸಿ ಅಧಿಕಾರಿಗಳಿಗೆ ಪಾಠ ಕಲಿಸಿದ ಸಚಿವ!

    ವಿವಾದಿತ ಸ್ಥಳದಲ್ಲೇ ದೇಗುಲ ನಿರ್ಮಾಣವಾಗುವುದು ನಿಶ್ಚಿತ. ನೀವು ನಿರಶನವನ್ನು ಕೊನೆಗೊಳಿಸಿ ಎಂದು ಕುಟುಂಬಸ್ಥರು ಮತ್ತು ಅಯೋಧ್ಯೆ ನಿವಾಸಿಗಳು ಎಷ್ಟೇ ಆಗ್ರಹಿಸಿದರೂ, ದೇಗುಲ ನಿರ್ಮಾಣವಾಗುವವರೆಗೂ ನಿರಶನ ನಿಲ್ಲಿಸುವುದಿಲ್ಲ ಎಂದು ಉರ್ಮಿಳಾ ಪಟ್ಟು ಹಿಡಿದಿದ್ದರು ಎನ್ನಲಾಗಿದೆ.

    ಇದೀಗ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಲು ಕೆಲವೇ ಗಂಟೆಗಳು ಬಾಕಿಯಿವೆ. 5ರ ಮಧ್ಯಾಹ್ನ 12.15.15ರ ಸುಮುಹೂರ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಇದಕ್ಕಾಗಿ ಅಯೋಧ್ಯೆ ನಗರಿ ನವವಧುವಿನಂತೆ ಶೃಂಗಾರಗೊಳ್ಳುತ್ತಿದೆ.

    3,024 ಕೋಟಿ ರೂ. ಯೋಜನೆಗಳಿಗೆ ಕೊಕ್ಕೆ; ಸಚಿನ್​ ಪೈಲಟ್​ ಬಂಡಾಯಕ್ಕೆ ಸಿಕ್ಕಿತು ಕಾರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts