More

    ಏಪ್ರಿಲ್ ತಿಂಗಳನ್ನ ಮಾಯವಾದ ತಿಂಗಳು ಎಂದು ಘೋಷಿಸಿ … ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಉಪೇಂದ್ರ ಸಲಹೆ

    ಎರಡು ದಿನಗಳ ಹಿಂದಷ್ಟೇ ಉಪೇಂದ್ರ ಅವರು ರಾಜ್ಯ ಸರ್ಕಾರಕ್ಕೆ ಒಂದು ಸಲಹೆ ಕೊಟ್ಟಿದ್ದರು. ಒಂದೋ ಲಾಕ್‌ಡೌನ್ ಇನ್ನೂ ತೀವ್ರಗೊಳಿಸಿ ಅಥವಾ ಸಂಪೂರ್ಣ ರದ್ದುಗೊಳಿಸಿ ಎಂದು ಹೇಳಿದ್ದರು. ಈಗ ‘ರಿಯಲ್ ಸ್ಟಾರ್’ ಇನ್ನೂ ಒಂದು ಐಡಿಯಾ ಕೊಟ್ಟಿದ್ದಾರೆ.ಈ ಬಾರಿ ರಾಜ್ಯ ಸರ್ಕಾರಕ್ಕೆ ಮಾತ್ರವಲ್ಲ, ಕೇಂದ್ರ ಸರ್ಕಾರಕ್ಕೂ ಅವರೊಂದು ಸಲಹೆ ಕೊಟ್ಟಿದ್ದಾರೆ.

    ಇಷ್ಟಕ್ಕೂ ಉಪೇಂದ್ರ ಅವರ ಸಲಹೆ ಏನು ಗೊತ್ತಾ? ಏಪ್ರಿಲ್ ತಿಂಗಳನ್ನು ಮಾಯವಾದ ತಿಂಗಳು ಎಂದು ೋಷಿಸ ಬೇಕು ಎಂದು. ‘ಲಾಕ್‌ಡೌನ್ ಆದ ಏಪ್ರಿಲ್ ತಿಂಗಳನ್ನು ಎಲ್ಲರೂ 2020ನೇ ಸಾಲಿನ ‘ಮಾಯವಾದ ತಿಂಗಳು’ ಎಂದು ಅಧಿಕೃತವಾಗಿ ಘೋಷಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಮತ್ತು ಎಲ್ಲಾ ಜನರು ಅವರಿವರಿಗೆ ಬರುವ ಸಂಬಳ, ಬಾಡಿಗೆ, ವಿದ್ಯುತ್, ನೀರಿನ ಬಿಲ್, ಇಎಂಐನ ಬಡ್ಡಿ ಸೇರಿದಂತೆ ಎಲ್ಲವನ್ನೂ ಎಲ್ಲರೂ ಬಿಟ್ಟುಕೊಟ್ಟು, ಜನರು ಮತ್ತು ಸರ್ಕಾರಕ್ಕೆ ಆಗುವ ಹೊರೆಯನ್ನು ಇಳಿಸಿಕೊಳ್ಳಬಹುದಲ್ಲವೇ?’ ಎಂದು ಸಲಹೆ ನೀಡಿದ್ದಾರೆ ಉಪೇಂದ್ರ. ಅಷ್ಟೇ ಅಲ್ಲ, ಈ ಬಗ್ಗೆ ಅರ್ಥಶ್ಯಾಸಜ್ಞರು ಪ್ರತಿಕ್ರಯಿಸಬೇಕು ಎಂದು ಸಹ ಹೇಳಿದ್ದಾರೆ.

    ಇದಲ್ಲದೆ, ಶನಿವಾರ ನಡೆದ ವೀಡಿಯೋ ಕಾನ್ಫರೆನ್ಸಿಂಗ್ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಪ್ರಧಾನ ಮಂತ್ರಿ ಹಾಗೂ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳ ವೀಡಿಯೋ ಕಾನ್ಫರೆನ್ಸಿಂಗ್ ಬಹಳ ಇಷ್ಟವಾಯಿತು. ಕರೊನಾ ಸಮಸ್ಯೆ ಮುಗಿದ ನಂತರವೂ ಇದೇ ರೀತಿ ಹೆಚ್ಚು ತಂತ್ರಜ್ಞಾನ ಬಳಸಿ ಆಡಳಿತ ನಡೆಸುವಂತಾಗಲಿ. ಎಲ್ಲಾ ಮುಖ್ಯಮಂತ್ರಿಗಳು, ಹೀಗೇ ಪ್ರತಿ ಕ್ಷೇತ್ರದ ಸಚಿವರ ಜತೆ ಮಾತುಕಥೆ ನಡೆಸಿ, ಜನ ನೇರವಾಗಿ ತಮ್ಮ ಸಮಸ್ಯೆ ಹೇಳಿಕೊಂಡು ಪರಿಹಾರ ಸಿಗಲಿ. ಅದನ್ನು ಮಾಧ್ಯಮಗಳು ಹೀಗೇ ನೇರ ಪ್ರಸಾರ ಮಾಡಲಿ. ವಿಧಾನ ಸೌಧದ ಸಂಸ್ಕೃತಿ ಬದಲಾಗಲಿ’ ಎಂದು ಉಪೇಂದ್ರ ಹೇಳಿದ್ದಾರೆ.

    ಇರು ಅಪ್ಪಂಗೆ ಹೇಳ್ತಿನಿ ಅಂತ ಹರಿಪ್ರಿಯಾ ಹೇಳ್ತಿರೋದು ಯಾರಿಗೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts