More

    ಮಲಗಿದ್ರೆ ಸಾವು; ಕೂತಿದ್ರೆ ರೋಗ; ನಡೀತಿದ್ರೆ ಜೀವನ … ಮುಖ್ಯಮಂತ್ರಿಗಳಿಗೆ ಉಪೇಂದ್ರ ಕೊಟ್ಟ ಎರಡು ಸಲಹೆಗಳು

    ಸರ್ಕಾರಕ್ಕೆ ತಮ್ಮದೇ ರೀತಿಯಲ್ಲಿ ಸಲಹೆಗಳನ್ನು ಕೊಡುವ ಉಪೇಂದ್ರ, ಇದೀಗ ಲಾಕ್‌ಡೌನ್ ಕುರಿತಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಎರಡು ಸಲಹೆಗಳನ್ನು ಕೊಟ್ಟಿದ್ದಾರೆ. ಆ ಎರಡರಲ್ಲಿ ಯಾವುದಾದರೂ ಒಂದನ್ನು ಕಾರ್ಯರೂಪಕ್ಕೆ ತನ್ನಿ ಎಂದು ಹೇಳಿದ್ದಾರೆ. ಇಷ್ಟಕ್ಕೂ ಅವರ ಸಲಹೆಗಳೇನು. ಅದನ್ನು ಅವರ ಮಾತುಗಳಲ್ಲೇ ಕೇಳಿ …

    1) ಶೇಕಡ ನೂರು ಲಾಕ್‌ಡೌನ್ – ಸಂಪೂರ್ಣ ಸರ್ಕಾರಿ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದ ಯೋಜನೆಯಿಂದ ಬಳಸಿಕೊಂಡು ಅಗತ್ಯ ವಸ್ತುಗಳನ್ನು ಮನೆಮನೆಗೆ ತಲುಪಿಸಿ. ಇಲ್ಲವಾದರೆ ಹಾಲು, ತರಕಾರಿ, ಧಾನ್ಯಗಳನ್ನು ಒಂದು ಜಾಗದಲ್ಲಿ ಕೊಳ್ಳಲು ಬಿಟ್ಟರೆ ಜನ ಸೇರುತ್ತಾರೆ. ಬೇಕರಿ, ದಿನಸಿ ಮತ್ತು ಅಗತ್ಯ ವಸ್ತುಗಳಿಗಾಗಿ ಸಂತೆ, ಅಂಗಡಿ ತೆರೆದರೆ ಅಲ್ಲೂ ಜನ ಸೇರುತ್ತಾರೆ.

    2) ಜನರಿಗೇ ಜವಾಬ್ದಾರಿ ಕೊಟ್ಟು ಸಂಪೂರ್ಣವಾಗಿ ಲಾಕ್‌ಡೌನ್ ತೆರೆಯಿರಿ. ಅಂದರೆ ಅವರವರೇ ಜವಾಬ್ದಾರಿ ತೆಗೆದುಕೊಂಡು (ಸೋಶಿಯಲ್ ಡಿಸ್ಟೆನ್ಸಿಂಗ್), ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಅವರವರ ವ್ಯವಹಾರ ಮುಂದುವರಿಸುವುದು. ಜನರನ್ನು ಜನರು ಎಷ್ಟೇ ಮೂರ್ಖರು ಅಂದುಕೊಂಡರೂ (ಹೀಗೆ ನಾಯಕರು ಮಾಡಿಬಿಟ್ಟಿದ್ದಾರೆ), ಅವರವರ ಪ್ರಾಣಕ್ಕೆ, ಅವರ ಮಕ್ಕಳ ಪ್ರಾಣಕ್ಕೆ ಬೆಲೆ ಕೊಟ್ಟೇ ಕೊಡುತ್ತಾರೆ. ಲಾಕ್‌ಡೌನ್ ಮಾಡಿ, ಜನರನ್ನು ಹಾಲು ಮತ್ತು ರೇಷನ್ ಖರೀದಿಸುವುದಕ್ಕೆ ಬಿಟ್ಟು, ಜನ ಗುಂಪು ಸೇರಿದಾಗ ಅವರನ್ನು ಬಯ್ಯುವುದು ಎಷ್ಟು ಸರಿ?

    ಇಷ್ಟೆಲ್ಲಾ ಲಾಕ್‌ಡೌನ್ ಮಾಡಿಯೂ ನಮ್ಮ ದಡ್ಡ ಜನರು ಹೀಗೆ, ಇನ್ನು ಲಾಕ್‌ಡೌನ್ ತೆಗೆದರೆ ರೋಡಲ್ಲಿ ಹೆಗಳು ಬೀಳತ್ತೆ ಅಂತ ಹೇಳೋರಿಗೆ (ಹೆದರೋರಿಗೆ) ಒಂದು ಕಿವಿಮಾತು. ಹೀಗೆ ಲಾಕ್‌ಡೌನ್ ಮುಂದುವರೆಸಿದರೂ ಅದೇ ಪರಿಸ್ಥಿತಿ ಬರಬಹುದು, ಯೋಚನೆ ಮಾಡಿ …

    ಮಲಗಿದ್ರೆ ಸಾವು, ಕೂತಿದ್ರೆ ರೋಗ, ನಡೀತಿದ್ರೆ ಜೀವನ …

    ತಿಥಿ ಮಾಡಬೇಕಾಗಿರೋದು ಕರೊನಾಕ್ಕೆ … ಜನರಿಗೆ ಜಾಗೃತವಾಗಿರಲು ಕರೆ ನೀಡಿದ ಕ್ರೇಜಿ ಸ್ಟಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts