More

    ಇದು ಎಐ ಅಲ್ಲ ಯುಐ!; Uಪೇಂದ್ರ Iಮ್ಯಾಜಿನರಿ ಯೂನಿವರ್ಸ್‌ಗೆ ಸ್ವಾಗತ…

    ಬೆಂಗಳೂರು: ಉಪೇಂದ್ರ ನಟಿಸಿ, ನಿರ್ದೇಶಿಸಿರುವ ಬಹುನಿರೀಕ್ಷಿತ ಚಿತ್ರ ‘ಯುಐ’. 2015ರಲ್ಲಿ ‘ಉಪ್ಪಿ 2’ ರಿಲೀಸ್ ಆಗಿದ್ದು, ಎಂಟು ವರ್ಷಗಳ ನಂತರ ಉಪೇಂದ್ರ ಮತ್ತೆ ಆ್ಯಕ್ಷನ್-ಕಟ್ ಹೇಳುತ್ತಿರುವ ಕಾರಣ ‘ಯುಐ’ ಬಗ್ಗೆ ಎಲ್ಲಿಲ್ಲದ ಕುತೂಹಲವಿದೆ. ಸೋಮವಾರ (ಜ. 8) ಶಿವರಾಜಕುಮಾರ್ ಮತ್ತು ನಟ ಅಲ್ಲು ಅರ್ಜುನ್ ತಂದೆ, ತೆಲುಗು ನಿರ್ಮಾಪಕ ಅಲ್ಲು ಅರವಿಂದ್ ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದರು.

    ನಟ, ನಿರ್ದೇಶಕ ಉಪೇಂದ್ರ, ‘ಮನುಷ್ಯ ಸಾಮಾನ್ಯವಾಗಿ ಮೂರು ಹಂತಗಳಲ್ಲಿ ಯೋಚಿಸುತ್ತಾನೆ. ಒಂದರಲ್ಲಿ ನಾನು ಸರಿಯಿದ್ದೇನೆ, ಉಳಿದವರ‌್ಯಾರೂ ಸರಿಯಿಲ್ಲ, ಮತ್ತೊಂದರಲ್ಲಿ ಎಲ್ಲರೂ ಸರಿಯಿದ್ದಾರೆ, ನಾನು ಸರಿಯಾಗಬೇಕು ಅಂತ. ಇನ್ನೊಂದರಲ್ಲಿ ನಾನೂ ಸರಿಯಿದ್ದೀನಿ, ಎಲ್ಲರೂ ಸರಿಯಿದ್ದಾರೆ ಅಂತ. ಇದೆಲ್ಲ ಹಂತಗಳನ್ನೂ ದಾಟಿ ಮಾಡಿದ ಸಿನಿಮಾ ‘ಯುಐ’. ಚಿತ್ರದ ಬಗ್ಗೆ ನಾನು ಮಾಡನಾಡುವುದಿಲ್ಲ. ಅದನ್ನು ನೋಡಿ ನೀವೆಲ್ಲರೂ ಮಾತನಾಡಬೇಕು’ ಎಂದು ಹೇಳಿಕೊಂಡರು. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ರೀಷ್ಮಾ ನಾಣಯ್ಯ ಮತ್ತು ನಿಧಿ ಸುಬ್ಬಯ್ಯ ಉಪೇಂದ್ರ ಜತೆ ಕಾಣಿಸಿಕೊಳ್ಳಲಿದ್ದಾರೆ. ರೀಷ್ಮಾ, ‘ನನ್ನ ಸಿನಿಮಾ ಕರಿಯರ್‌ನಲ್ಲೇ ಇದು ಸ್ಪೆಷಲ್ ಸಿನಿಮಾ. ಉಪೇಂದ್ರ ಸರ್ ಜತೆ ಕೆಲಸ ಮಾಡುವ ಅವಕಾಶ ಸಿಗುತ್ತೆ ಅಂತಂದುಕೊಂಡಿರಲಿಲ್ಲ’ ಎಂದು ಸಂತಸ ವ್ಯಕ್ತಪಡಿಸಿದರು. ಮತ್ತೊಬ್ಬ ನಾಯಕಿ ನಿಧಿ, ‘ನಾನು ಉಪೇಂದ್ರ ಸರ್ ನಿರ್ದೇಶನದಲ್ಲಿ ನಟಿಸುತ್ತೇನೆ ಅಂತ ಕನಸಿನಲ್ಲೂ ಊಹಿಸಿರಲಿಲ್ಲ. ತುಂಬ ಖುಷಿಯಾಗುತ್ತಿದೆ. ಪಾತ್ರದ ಬಗ್ಗೆ ಸಮಯ ಬಂದಾಗ ಹೇಳುತ್ತೇನೆ’ ಎಂದರು.

    ಇದು ಎಐ ಅಲ್ಲ ಯುಐ!; Uಪೇಂದ್ರ Iಮ್ಯಾಜಿನರಿ ಯೂನಿವರ್ಸ್‌ಗೆ ಸ್ವಾಗತ…

    ಎಂಟು ಭಾಷೆಗಳಲ್ಲಿ ಸಿನಿಮಾ
    ‘ಎಐ ಎಂದರೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಹಾಗೇ ಯುಐ ಎಂದರೆ ಯೂನಿವರ್ಸಸ್ ಇಂಟೆಲಿಜೆನ್ಸ್’ ಎಂದು ಚಿತ್ರದ ಶೀರ್ಷಿಕೆಗೆ ತಮ್ಮದೇ ವ್ಯಾಖ್ಯಾನ ನೀಡಿದ ತೆಲುಗು ನಿರ್ಮಾಪಕ ಅಲ್ಲು ಅರವಿಂದ್, ‘ಕನ್ನಡದಲ್ಲಿ ಹೇಗೆ ದೊಡ್ಡ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಮಾಡುವಿರೋ, ಅಷ್ಟೇ ದೊಡ್ಡ ಮಟ್ಟದಲ್ಲಿ ತೆಲುಗಿನಲ್ಲೂ ರಿಲೀಸ್ ಮಾಡೋಣ ಎಂದಿದ್ದೇನೆ’ ಎಂದು ಚಿತ್ರತಂಡಕ್ಕೆ ಬೆಂಬಲ ಸೂಚಿಸಿದರು. ಹಾಗೇ ಚಿತ್ರ ಪ್ಯಾನ್ ಇಂಡಿಯಾ ಎಂಟು ಭಾಷೆಗಳಲ್ಲಿ ರಿಲೀಸ್ ಆಗಲಿದೆ ಎಂಬ ಗುಟ್ಟು ಬಿಟ್ಟುಕೊಟ್ಟರು.

    ‘ಓಂ 2’ ಮಾಡಲು ರೆಡಿ!
    ಶಿವರಾಜಕುಮಾರ್, ‘ಉಪೇಂದ್ರ ಅವರ ಮೇಕಿಂಗ್ ಸ್ಟೈಲ್, ಸಿನಿಮಾಗಳಲ್ಲಿನ ವಿಷಯಗಳು, ಆಲೋಚನೆ, ಫಿಲಾಸಫಿ ಎಲ್ಲವೂ ನನಗಿಷ್ಟ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಜತೆಗೆ ‘ಓಂ 2’ ಬಗ್ಗೆ ಮಾತನಾಡಿದ ಅವರು, ‘ಮುಂದಿನ ವರ್ಷವೇ ಮಾಡಬೇಕು ಅಂತಲ್ಲ, 10 ವರ್ಷಗಳ ನಂತರ ಸಿನಿಮಾ ಮಾಡಿದರೂ ಶಿವಣ್ಣ ಹಾಗೇ ಇರ್ತಾನೆ’ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts