ಈ​ ಸಿನಿಮಾ ಪ್ರತಿ ಟಿಕೆಟ್​ ದರದಲ್ಲಿ 5 ರೂ. ಶ್ರೀ ರಾಮನಿಗೆ; ಚಿತ್ರ ತಂಡ ಘೋಷಣೆಗೆ ಹರಿದು ಬಂತು ಮೆಚ್ಚುಗೆ ಸುರಿಮಳೆ

theater
Published on

-ನಾನು ಹನುಮ ಭಕ್ತ ಎಂದ ಮೆಗಾಸ್ಟಾರ್​ ಚಿರಂಜೀವಿ

ಹೈದರಾಬಾದ್: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ನಡೆಯಲಿದೆ. ಜ.12ರಂದು ತೆರೆಗೆ ಬರುತ್ತಿರುವ 'ಹನುಮಾನ್‌' ಸಿನಿಮಾದ ಪ್ರತಿ ಟಿಕೆಟ್‌ ಹಣದಲ್ಲಿ 5 ರೂಪಾಯಿಗಳನ್ನು ರಾಮ ಮಂದಿರಕ್ಕೆ ನೀಡಲು ನಿರ್ಧಾರ ಮಾಡಲಾಗಿದೆ ಮೆಗಾಸ್ಟಾರ್ ಚಿರಂಜೀವಿ ಅವರು ಘೋಷಣೆ ಮಾಡಿದರು.

ಸೋಮವಾರ ಅದ್ಧೂರಿಯಾಗಿ ಆಯೋಜಿಸಿದ್ದ ಹನುಮಾನ್‌ ಚಿತ್ರದ ಪ್ರೀ-ರಿಲೀಸ್ ಸಮಾರಂಭದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಈ ಕುರಿತು ಘೋಷಣೆ ಮಾಡಿದರು.ಈ ಸಮಾರಂಭದಲ್ಲಿ ಮಾತನಾಡಿದ ಚಿರಂಜೀವಿ ಅವರು, ರಾಮ ಮಂದಿರ ಉದ್ಘಾಟನೆಗೆ ಆಗಮಿಸುವಂತೆ ಆಹ್ವಾನ ನೀಡಿರುವುದು ಸಂಭ್ರಮ ತಂದಿದೆ. ಇಡೀ ಕುಟುಂಬ ಜ.22ರಂದು ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗವಹಿಸುತ್ತೇವೆ. ಪ್ಯಾನ್ ಇಂಡಿಯಾ ಸಿನಿಮಾ ಹನುಮಾನ್ ಜನವರಿ 12ರಂದು ತೆರೆಗೆ ಬರಲಿದೆ ಎಂದು ಹೇಳಿದರು.

ವರಲಕ್ಷಿ ಶರತ್ ಕುಮಾರ್, ವಿನಯ್ ರೈ, ರಾಜ್ ದೀಪಕ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗೆಟಪ್ ಶ್ರೀನು, ಸತ್ಯ ಒಳಗೊಂಡ ಸ್ಟಾರ್ ಕಲಾವಿದರ ತಾರಾಬಳಗ ಚಿತ್ರದಲ್ಲಿದೆ. ಪ್ರತಿಭಾವಂತ ಸಂಗೀತ ನಿರ್ದೇಶಕರಾದ ಗೌರಹರಿ, ಅನುದೀಪ್ ದೇವ್ ಮತ್ತು ಕೃಷ್ಣ ಸೌರಭ್ ಸಂಗೀತ ನಿರ್ದೇಶನ, ದಶರಧಿ ಶಿವೇಂದ್ರ ಕ್ಯಾಮೆರಾ ವರ್ಕ್, ಎಸ್. ಬಿ ರಾಜು ತಲರಿ ಸಂಕಲನ ಚಿತ್ರಕ್ಕಿದೆ.

ನಾನು ಕೂಡ ಹನುಮಂತನ ಭಕ್ತ. ಆಂಜನೇಯನ ಮೇಲೆ ಸಿನಿಮಾ ಮಾಡಿದರೆ, ನಾನು ಬರುವುದಿಲ್ಲವೇ, ಇನ್ನು ಈ ಸಿನಿಮಾದ ಹೀರೋ ತೇಜ ಸಜ್ಜಾನನ್ನ ನಾನು ಸಣ್ಣ ಮಗುವಿದ್ದಾಗನಿಂದಲೂ ನೋಡಿದ್ದೇನೆ. ಟೀಸರ್ ಮತ್ತು ಟ್ರೇಲರ್ ಚೆನ್ನಾಗಿದೆ. ಹನುಮಾನ್​ ಚಿತ್ರತಂಡಕ್ಕೆ ಶುಭವಾಗಲಿ ಎಂದು ಹೇಳಿದರು.

ಪ್ರತಿ ಟಿಕೆಟ್‌ನಿಂದ ಸಿಗುವ ಹಣದಲ್ಲಿ 5 ರೂಪಾಯಿಗಳನ್ನು ರಾಮ ಮಂದಿರಕ್ಕೆ ದೇಣಿಗೆ ನೀಡುವ ಚಿತ್ರತಂಡದ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net