More

    ದಿ ಟಾಪ್​ ಟೆನ್ಸ್​ ಜಗತ್ತಿನ ಸಾರ್ವಕಾಲಿಕ ಅತ್ಯುತ್ತಮ ನಿರ್ದೇಶಕರ ಪಟ್ಟಿಯಲ್ಲಿ ಉಪೇಂದ್ರ … ಎಷ್ಟನೇ ಸ್ಥಾನ ಗೊತ್ತಾ?

    ಬೆಂಗಳೂರು: ಈ ಹಿಂದೆ IMDBಯ ಜಗತ್ತಿನ ಸಾರ್ವಕಾಲಿಕ ಅತ್ಯುತ್ತಮ ನಿರ್ದೇಶಕರ ಪಟ್ಟಿಯಲ್ಲಿ ಉಪೇಂದ್ರ 17ನೇ ಸ್ಥಾನ ಪಡೆದಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಅಂಥದ್ದೇ ಇನ್ನೊಂದು ಅಂತಾರಾಷ್ಟ್ರೀಯ ಸಮೀಕ್ಷೆಯೊಂದು ನಡೆಯುತ್ತಿದ್ದು, ಅದರಲ್ಲೂ ಉಪೇಂದ್ರ ಸ್ಥಾನ ಪಡೆದಿದ್ದಾರೆ ಎಂಬುದು ವಿಶೇಷ.

    ಇದನ್ನೂ ಓದಿ: ‘ಪ್ರಜೆಯೇ ಪ್ರಭು’ ಎನ್ನುತ್ತಿದ್ದಾರೆ ಪ್ರಿಯಾಂಕಾ ಉಪೇಂದ್ರ …

    ಹೌದು, ದಿ ಟಾಪ್​ ಟೆನ್ಸ್​ ಎಂಬ ವೆಬ್​ಸೈಟ್​, ಜಗತ್ತಿನ ಎಲ್ಲ ವಿಷಯಗಳ ಕುರಿತು ಸಮೀಕ್ಷೆ ಮಾಡಿ, ಅದರಲ್ಲಿ ಟಾಪ್​ ಹತ್ತು ವಿಷಯಗಳನ್ನು ಆಯ್ಕೆ ಮಾಡಿದೆ. 2022ರ ಬೆಸ್ಟ್​ 10 ಹಾಡುಗಳು, 2022 ಬೆಸ್ಟ್​ ವಿಡಿಯೋ ಗೇಮ್​ಗಳು, ಬೆಸ್ಟ್​ ಡಿಜಿಟಲ್​ ಕ್ಯಾಮೆರಾಗಳು … ಹೀಗೆ ಜನರಿಂದ ಸಮೀಕ್ಷೆ ಮಾಟಿ ಟಾಪ್​ 10 ಪಟ್ಟಿಯನ್ನು ಪ್ರಕಟಿಸುತ್ತಾ ಬಂದಿದೆ.

    ಈಗ ಅದು ಜಗತ್ತಿನ ಸಾರ್ವಕಾಲಿಕ ಅತ್ಯುತ್ತಮ ನಿರ್ದೇಶಕರ ಸಮೀಕ್ಷೆಯೊಂದನ್ನು ಮಾಡುತ್ತಿದ್ದು, ಯಾರು ಬೇಕಾದರೂ ವೋಟ್​ ಮಾಡಬಹುದಾಗಿದೆ. ವಿಶೇಷವೆಂದರೆ, ಅಂತಾರಾಷ್ಟ್ರೀಯ ಖ್ಯಾತಿಯ ನಿರ್ದೇಶಕರಿರುವ ಈ ಪಟ್ಟಿಯಲ್ಲಿ ಉಪೇಂದ್ರ 8ನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಸ್ಟೀವನ್​ ಸ್ಪೀಲ್​ಬರ್ಗ್​ ಇದ್ದು, ನಂತರದ ಸ್ಥಾನಗಳಲ್ಲಿ ಸ್ಟಾನ್ಲಿ ಕುಬ್ರಿಕ್​, ಕ್ವಿಂಟಿನ್​ ಟರಾಂಟಿನೋ, ಆಲ್ಫ್ರೆಡ್​ ಹಿಚ್​ಕಾಕ್​, ಕ್ರಿಸ್ಟೋಫರ್​ ನೊಲಾನ್​, ಮಾರ್ಟಿನ್​ ಸ್ಕಾರರ್ಸ್​, ಫ್ರಾನ್ಸಿಸ್​ ಫೋರ್ಡ್​ ಕಪೋಲ, ಉಪೇಂದ್ರ, ಜೇಮ್ಸ್​ ಕ್ಯಾಮರಾನ್​ ಮತ್ತು ಟಿಮ್​ ಬರ್ಟನ್​ ಇದ್ದಾರೆ.

    ಈ ಪಟ್ಟಿಯಲ್ಲಿ ಭಾರತದಿಂದ ಉಪೇಂದ್ರ ಬಿಟ್ಟರೆ ಇನ್ನೊಬ್ಬ ನಿರ್ದೇಶಕ ಇಲ್ಲ ಎನ್ನುವುದರ ಜತೆಗೆ ಹಿಚ್​ಕಾಕ್​, ಟರಾಂಟಿನೋ, ಸ್ಪೀಲ್​ಬರ್ಗ್​, ನೊಲಾನ್​, ಕಪೋಲ ಮುಂತಾದವರ ಜತೆಗೆ ಉಪೇಂದ್ರ ಅವರ ಹೆಸರು ಸಹ ದಾಖಲಾಗಿದೆ ಎನ್ನುವುದು ವಿಶೇಷ. ಅಷ್ಟೇ ಅಲ್ಲ, ಈ ಪಟ್ಟಿಯಲ್ಲಿ ಉಪೇಂದ್ರ ಅವರು ‘ಅವತಾರ್​’, ‘ಟೈಟಾನಿಕ್​’, ‘ಟ್ರೂ ಲೈಸ್​’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಜೇಮ್ಸ್​ ಕ್ಯಾಮರಾನ್​ ಅವರನ್ನು ಸಹ ಹಿಂದಿಕ್ಕಿದ್ದಾರೆ.

    ಉಪೇಂದ್ರ ಅವರು ಈ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿರಬಹುದು. ಆದರೆ, ಅತೀ ಹೆಚ್ಚು ಕಮೆಂಟ್​ಗಳನ್ನು ಪಡೆದ ಏಕೈಕ ನಿರ್ದೇಶಕರಾಗಿದ್ದಾರೆ. ಸ್ಪೀಲ್​ಬರ್ಗ್​, ನೋಲಾನ್​ರಂತಹ ನಿರ್ದೇಶಕರಿಗೆ ಇನ್ನೂರು, ಮುನ್ನೂರು ಕಮೆಂಟ್​ಗಳಿದ್ದರೆ, ಉಪೇಂದ್ರ ಅವರಿಗೆ 4700ಕ್ಕೂ ಹೆಚ್ಚ ಕಮೆಂಟ್​ಗಳಿದ್ದು, ಅವರು ಅದೆಷ್ಟು ಜನಪ್ರಿಯ ಎಂಬುದನ್ನು ಸೂಚಿಸುತ್ತದೆ.

    ಇದನ್ನೂ ಓದಿ: ಜಪಾನ್​ನಲ್ಲಿ ರಜನಿಕಾಂತ್​ ಚಿತ್ರವನ್ನು ಹಿಂದಿಕ್ಕಿ ಹೊಸ ದಾಖಲೆ ಬರೆದ ‘RRR’

    ಈ ಸಮೀಕ್ಷೆಯಲ್ಲಿ ಯಾರು ಬೇಕಾದರೂ ಭಾಗವಹಿಸಿ ವೋಟ್​ ಮಾಡಬಹುದಾಗಿದೆ. ಸುಮ್ಮನೆ ದಿ ಟಾಪ್​ ಟೆನ್ಸ್ನ ಈ ಲಿಂಕ್ ಕ್ಲಿಕ್​ ಮಾಡಿ ತಮ್ಮ ವೋಟ್​ಗಳನ್ನು ಹಾಕಬಹುದು.

    ‘ಕಾಂತಾರ 2’ ಚಿತ್ರದ ಬಿಡುಗಡೆ ಯಾವಾಗ? ರಿಷಭ್​ ಶೆಟ್ಟಿ ಹೇಳ್ತಾರೆ ಕೇಳಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts