More

    ‘ಕಾಂತಾರ 2’ ಚಿತ್ರದ ಬಿಡುಗಡೆ ಯಾವಾಗ? ರಿಷಭ್​ ಶೆಟ್ಟಿ ಹೇಳ್ತಾರೆ ಕೇಳಿ …

    ಬೆಂಗಳೂರು: ಯಾವಾಗ ಅಣ್ಣಪ್ಪ ಪಂಜುರ್ಲಿ ಕೋಲದ ಸಂಧರ್ಭದಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರು, ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಪ್ರಮೋದ್ ಶೆಟ್ಟಿ, ರಿಷಬ್ ಪತ್ನಿ ಪ್ರಗತಿ ಶೆಟ್ಟಿ ಸೇರಿದಂತೆ ‘ಕಾಂತಾರಾ’ ಕಲಾವಿದರು ಮತ್ತು ತಂತ್ರಜ್ನರು ಭಾಗಿಯಾಗಿದ್ದರೋ, ಆಗಿನಿಂದ ‘ಕಾಂತಾರ 2’ ಚಿತ್ರದ ಬಗ್ಗೆ ಬರೀ ಕನ್ನಡ ಚಿತ್ರರಂಗದಲ್ಲಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲೇ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ.

    ಇದನ್ನೂ ಓದಿ: ರಿಷಭ್​ ಶೆಟ್ಟಿ ಕಂಡರೆ ಹೊಟ್ಟೆಕಿಚ್ಚಂತೆ! ಕಾಂತಾರ ಯಶಸ್ಸಿನ ಬಗ್ಗೆ ನವಾಜುದ್ದೀನ್​ ಸಿದ್ದಿಖಿ ಆಡಿದ ಮಾತುಗಳಿವು…

    ಅಣ್ಣಪ್ಪ ಪಂಜುರ್ಲಿ ಕೋಲಕ್ಕೆ ರಿಷಭ್​ ಶೆಟ್ಟಿ ಮತ್ತು ತಂಡದವರು ಪ್ರಾರ್ಥನೆ ಸಲ್ಲಿಸುವುದಕ್ಕೆ ಹೋಗಿದ್ದಾಗಿ ಹೇಳಿಕೊಂಡಿದ್ದರೂ, ಅವರು ಹೋಗಿದ್ದು, ‘ಕಾಂತಾರ 2’ ಚಿತ್ರಕ್ಕೆ ಅನುಮತಿ ಕೇಳುವದಕ್ಕೆಂದು ಈಗಾಗಲೇ ಸುದ್ದಿಯಾಗಿದೆ. ಅಷ್ಟೇ ಅಲ್ಲ, ‘ಮೊದಲು ಚಿತ್ರಮಾಡುವಾಗ ಹತ್ತು ಬಾರಿ ಯೋಚನೆ ಮಾಡಿದ್ದೀರಿ. ಈ ಬಾರಿ ನೂರು ಬಾರಿ ಯೋಚನೆ ಮಾಡಿ ಚಿತ್ರ ಮಾಡಬೇಕು. ಹಳೆಯ ತಂಡವನ್ನೇ ಉಪಯೋಗಿಸಿ ಮುಂದುವರಿಯಿರಿ. ಶುದ್ಧಾಚಾರದೊಂದಿಗೆ ಚಿತ್ರವನ್ನು ಮುಂದುವರಿಸಿರಿ. ಮಾಡಿದ ಪ್ರಯತ್ನಕ್ಕೆ ಜಯ ಸಿಗುವಂತೆ ಮಾಡುತ್ತೇನೆ’ ಎಂದು ‘ಕಾಂತಾರ’ ಚಿತ್ರತಂಡಕ್ಕೆ ಅಣ್ಣಪ್ಪ ಪಂಜುರ್ಲಿ ದೈವ ಅಭಯ ನೀಡಿದೆ ಎಂದು ಹೇಳಲಾಗುತ್ತಿದೆ.

    ಹಾಗಾಗಿ, ‘ಕಾಂತಾರ 2’ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿರುವುದಷ್ಟೇ ಅಲ್ಲ, ಚಿತ್ರದ ಪ್ರಾರಂಭ ಮತ್ತು ಬಿಡುಗಡೆ ಯಾವಾಗ ಎಂಬ ಪ್ರಶ್ನೆ ಎಲ್ಲರಲ್ಲೂ ಮನೆ ಮಾಡಿದೆ. ಈ ಪ್ರಶ್ನೆಯನ್ನು ರಿಷಭ್​ ಅವರ ಮುಂದಿಟ್ಟರೆ, ಸದ್ಯಕ್ಕೆ ‘ಕಾಂತಾರ’ ಚಿತ್ರದ ಮುಂದುವರೆದ ಭಾಗ ಮಾಡುವ ಯಾವುದೇ ಪ್ಲಾನ್​ ಇಲ್ಲ ಎಂದು ಹೇಳಿಕೊಂಡಿದ್ದಾರೆ.

    ಈ ಕುರಿತು ಮಾತನಾಡಿರುವ ಅವರು, ‘ಸದ್ಯಕ್ಕೆ ‘ಕಾಂತಾರ 2’ ಚಿತ್ರದ ಬಗ್ಗೆ ಯಾವುದೇ ಪ್ಲಾನ್​ ಇಲ್ಲ. ನಾವು ಆ ಚಿತ್ರದ ಬಗ್ಗೆ ಇನ್ನೂ ಯೋಚಿಸಿಲ್ಲ. ನಾವು ಅಣ್ಣಪ್ಪ ಪಂಜುರ್ಲಿ ಕೋಲಕ್ಕೆ ಹೋಗಿದ್ದು ಪ್ರಾರ್ಥನೆ ಸಲ್ಲಿಸುವುದಕ್ಕೆ ಹೊರತು, ಬೇರೆ ಯಾವುದೇ ಕಾರಣಕ್ಕೆ ಅಲ್ಲ. ‘ಕಾಂತಾರ 2’ ಚಿತ್ರದ ಬಗ್ಗೆ ಈಗಿನಿಂದಲೇ ಊಹಾಪೋಹ ಬೇಡ. ನನ್ನ ಮುಂದಿನ ಚಿತ್ರ ಯಾವುದು ಎಂದು ತೀರ್ಮಾನವಾಗಿಲ್ಲ. ಅದು ‘ಕಾಂತಾರ 2′ ಚಿತ್ರವೋ ಅಥವಾ ಬೇರೆ ಯಾವುದೋ ಚಿತ್ರವೋ, ಆ ಬಗ್ಗೆ ನಾವು ಅಧಿಕೃತ ಪ್ರಕಟಣೆ ನೀಡುತ್ತೇವೆ. ಸುಮ್ಮನೆ ಏನೇನೋ ಕಲ್ಪಿಸಿಕೊಳ್ಳುವುದು ಬೇಡ’ ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: ವಸಿಷ್ಠ ಅಭಿನಯದ ‘ಲವ್​ ಲಿ’ ಸಿನಿಮಾ ಸೆಟ್​ಗೆ ಹರಿಪ್ರಿಯಾ ಎಂಟ್ರಿ …

    ‘ಕಾಂತಾರ’ ಚಿತ್ರವನ್ನು ಹೊಂಬಾಳೆ ಫಿಲಂಸ್​ನ ವಿಜಯ್​ ಕುಮಾರ್​ ಕಿರಗಂದೂರು ನಿರ್ಮಿಸಿದ್ದು, ರಿಷಭ್​ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಿಷಭ್​, ಸಪ್ತಮಿ ಗೌಡ, ಅಚ್ಯುತ್​ ಕುಮಾರ್​, ಕಿಶೋರ್​ ಮುಂತಾದವರು ಅಭಿನಯಿಸಿದ್ದು, ಅಜನೀಶ್​ ಲೋಕನಾಥ್​ ಸಂಗೀತ ಸಂಯೋಜಿಸಿದ್ದಾರೆ.

    ಕಾಂತಾರ-2 ಮಾಡಲು ಅನುಮತಿ ಕೋರಿದ ಚಿತ್ರತಂಡ; ಶರತ್ತು ಹಾಕಿದ ದೈವ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts