More

    ಪ್ರೀತಿಯ ಬಲೆಯಲ್ಲಿ ಬಿದ್ದ ಮಹಿಳಾ IPS ಅಧಿಕಾರಿಗೆ ಮದ್ವೆ ನಂತ್ರ ಬಿಗ್​ ಶಾಕ್​! ಡಿವೋರ್ಸ್​​ ಆದ್ರೂ ತಪ್ಪದ ಸಂಕಷ್ಟ

    ಲಖನೌ: ಖತರ್ನಾಕ್​ ವ್ಯಕ್ತಿಯೊಬ್ಬ ಐಆರ್​ಎಸ್​ ಅಧಿಕಾರಿಯ ಸೋಗಿನಲ್ಲಿ ಮ್ಯಾಟ್ರಿಮೋನಿಯಲ್​ ವೆಬ್​ಸೈಟ್​ ಮೂಲಕ ಮಹಿಳಾ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್​ಪಿ)ಯನ್ನು ಪರಿಚಯಿಸಿಕೊಂಡು, ಪ್ರೀತಿಯ ಬಲೆಯಲ್ಲಿ ಬೀಳಿಸಿ, ಮದುವೆಯಾಗುವ ಮೂಲಕ ಲಕ್ಷಾಂತರ ರೂಪಾಯಿ ಪೀಕಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಶ್ರೇಷ್ಠಾ ಠಾಕೂರ್​ ಮೋಸ ಹೋದ ಮಹಿಳಾ ಅಧಿಕಾರಿ. 2012ನೇ ಬ್ಯಾಚ್​ನ ಐಪಿಎಸ್​ ಅಧಿಕಾರಿಯಾಗಿರುವ ಶ್ರೇಷ್ಠಾ, ಮ್ಯಾಟ್ರಿಮೋನಿಯಲ್​ ವೆಬ್​ಸೈಟ್​ನಲ್ಲಿ ಪರಿಚಯವಾದ ರೋಹಿತ್​ ರಾಜ್​ ಎಂಬುವರನ್ನು 2018ರಲ್ಲಿ ಮದುವೆಯಾದರು. ತಮ್ಮ ಪೊಲೀಸಿಂಗ್​ ಕೌಶಲಗಳ ಮೂಲಕವೇ ಲೇಡಿ ಸಿಂಗಂ ಎಂದು ಶ್ರೇಷ್ಠಾ ಖ್ಯಾತಿಯಾಗಿದ್ದಾರೆ.

    2008ನೇ ಬ್ಯಾಚ್​ನ ಐಆರ್​ಎಸ್​ ಅಧಿಕಾರಿ ಮತ್ತು ರಾಂಚಿಯಲ್ಲಿ ಡೆಪ್ಯುಟಿ ಕಮಿಷನರ್​ ಆಗಿ ಕೆಲಸ ಮಾಡುತ್ತಿದ್ದೇನೆ ಎಂದು ರೋಹಿತ್​ ರಾಜ್​ ನಂಬಿಸಿದ್ದ. ಆತನ ಮಾತುಗಳನ್ನು ನಂಬಿ ಶ್ರೇಷ್ಠಾ ಮದುವೆಯಾಗಿದ್ದರು. ಆದರೆ, ರೋಹಿತ್​ ಅಸಲಿ ಕತೆ ಮದುವೆ ಬಳಿಕ ಗೊತ್ತಾಯಿತು.

    ಮದುವೆಗೂ ಮುನ್ನ ಶ್ರೇಷ್ಠಾ ಕುಟುಂಬದಿಂದ ತನಿಖೆ ನಡೆಸಿದಾಗ ರೋಹಿತ್ ರಾಜ್ ನಿಜವಾಗಿಯೂ IRS ಅಧಿಕಾರಿ ಎಂದು ತಿಳಿದುಬಂದಿದೆ. ಆದಾಗ್ಯೂ, ಮದುವೆಯಾದ ಕೆಲವು ತಿಂಗಳುಗಳ ಬಳಿಕ ತನ್ನ ಪತಿ ಐಆರ್​ಎಸ್​ ಅಧಿಕಾರಿಯಲ್ಲ ಎಂಬುದನ್ನು ಶ್ರೇಷ್ಠಾ ತಿಳಿದುಕೊಂಡರು. ವಿಷಯದ ಗಂಭೀರತೆಯನ್ನು ಅರ್ಥಮಾಡಿಕೊಂಡ ಶ್ರೇಷ್ಠಾ, ತನ್ನ ದಾಂಪತ್ಯವನ್ನು ಉಳಿಸಿಕೊಳ್ಳುವ ಸಲುವಾಗಿ ಎಲ್ಲವನ್ನು ಮರೆತು ರೋಹಿತ್​ರನ್ನು ಗಂಡನಾಗಿ ಸ್ವೀಕರಿಸಲು ನಿರ್ಧರಿಸಿದರು. ಆದಾಗ್ಯೂ, ಆಕೆಯ “ಗಂಡ” ತನ್ನ ಹೆಸರಿನಲ್ಲಿ ಇತರ ಜನರನ್ನು ವಂಚಿಸಲು ಪ್ರಾರಂಭಿಸಿದ್ದಾನೆ ಎಂದು ಗೊತ್ತಾದ ಬಳಿಕ ಸಂಬಂಧ ಕಡಿದುಕೊಳ್ಳಲು ನಿರ್ಧರಿಸಿದರು.

    ಗಂಡನ ವರ್ತನೆಯಿಂದ ಬೇಸತ್ತ ಶ್ರೇಷ್ಠಾ, ಮದುವೆಯಾದ ಎರಡು ವರ್ಷಗಳ ನಂತರ ರೋಹಿತ್ ರಾಜ್​ಗೆ ವಿಚ್ಛೇದನ ನೀಡಿದರು. ಆದರೂ ಅವಳ ಸಮಸ್ಯೆಗಳು ಮಾತ್ರ ಇನ್ನೂ ಮುಗಿದಿಲ್ಲ. ನಕಲಿ ರೋಹಿತ್ ರಾಜ್ ಜನರನ್ನು ವಂಚಿಸುವುದನ್ನು ಮುಂದುವರೆಸಿದ್ದು, ಶ್ರೇಷ್ಠಾ ಅವರು ಮಾಜಿ ಗಂಡನ ವಿರುದ್ಧ ಗಾಜಿಯಾಬಾದ್‌ನಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಹೆಚ್ಚಿನ ಮಾಹಿತಿಗಾಗಿ ತನಿಖೆ ಮುಂದುವರಿಸಿದ್ದಾರೆ. (ಏಜೆನ್ಸೀಸ್​)

    ಥಿಯೇಟರ್‌ನಲ್ಲಿ ಸಿನಿಮಾ ವೀಕ್ಷಿಸುತ್ತಿದ್ದ ಜನರ ಮಧ್ಯೆ ಇದ್ದಕ್ಕಿದ್ದಂತೆ ಆಗಮಿಸಿದ ನಟಿ; ಫ್ಯಾನ್ಸ್ ರಿಯಾಕ್ಷನ್ ಹೇಗಿತ್ತು ನೋಡಿ …

    ಪ್ರಧಾನಿ ಮೋದಿ ಕಟೌಟ್‌ ತಬ್ಬಿಕೊಂಡು ಅಶ್ಲೀಲ ನೃತ್ಯ; ಮಹಿಳೆಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡ ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts