More

    VIDEO| ಲಾಕ್​ಡೌನ್​ ಉಲ್ಲಂಘಿಸಿದವನಿಗೆ ಡ್ಯಾನ್ಸ್​ ಮಾಡಲು ಹೇಳಿ ಎಡವಟ್ಟು ಮಾಡ್ಕೊಂಡ ಪೊಲೀಸರು!

    ಲಖನೌ: ವ್ಯಕ್ತಿಯೊಬ್ಬ ಬಾಲಿವುಡ್ ಡ್ಯಾನ್ಸರ್​ ಸಪ್ನ ಚೌಧರಿ ಅವರ ಪ್ರಖ್ಯಾತ “ತೇರಿ ಆಖ್ಯಾ ಕಾ ಯೋ ಕಾಜಲ್​” ಹಾಡಿಗೆ ಸೊಂಟ ಬಳುಕಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಗಿರಕಿ ಹೊಡೆಯುತ್ತಿದೆ.​

    ಟ್ವಿಟರ್​ ಬಳಕೆದಾರ ಓಮರ್​ ರಶೀದ್​ ಎಂಬುವರು ವಿಡಿಯೋ ತುಣುಕನ್ನು ಶೇರ್​ ಮಾಡಿಕೊಂಡಿದ್ದು, ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಡ್ಯಾನ್ಸ್​ ಮಾಡುತ್ತಿರುವುದನ್ನು ಅನೇಕ ಪೊಲೀಸರು ನೋಡುತ್ತಿದ್ದಾರೆ. ಅಲ್ಲದೆ, ವ್ಯಕ್ತಿಯ ಹಿಂದೆ ನಿಂತಿರುವ ಪೇದೆಗಳು ಲೇವಡಿ ಮಾಡುತ್ತಾ, ವಿಡಿಯೋ ರೆಕಾರ್ಡಿಂಗ್​ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಅಷ್ಟಕ್ಕೂ ಆ ವ್ಯಕ್ತಿ ಮಾಡಿದ ತಪ್ಪಾದರೂ ಯಾವುದೆಂದರೆ ಕರೊನಾ ಲಾಕ್​ಡೌನ್​ ಮಾರ್ಗಸೂಚಿಯನ್ನು ಉಲ್ಲಂಘಿಸಿದ್ದು.

    ಇದನ್ನೂ ಓದಿ: ವಿದ್ಯುತ್ ಬಿಲ್ ನೀಡಲು ತೆರಳಿದ ಮನೆ ಮಾಲೀಕರು ನವ ದಂಪತಿಯ ಸ್ಥಿತಿ ಕಂಡು ಕಂಗಾಲಾಗಿದ್ದೇಕೆ?

    ಇದು ನಡೆದಿದ್ದು ಉತ್ತರ ಪ್ರದೇಶದ ಇಟಾವಾ ನಗರದ ಪೊಲೀಸ್​ ಠಾಣೆಯಲ್ಲಿ. ವ್ಯಕ್ತಿಯನ್ನು ಡ್ಯಾನ್ಸ್​ ಮಾಡಿಸಿ ಖುಷಿಪಟ್ಟ ಪೇದೆಗಳೂ ಸಹ ತಲೆದಂಡ ಅನುಭವಿಸಿದ್ದು, ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ.

    ಇತ್ತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ಜತೆಗೆ ಚರ್ಚೆಯನ್ನು ಹುಟ್ಟುಹಾಕಿದೆ. ಕೆಲವರು ಪೊಲೀಸರ ಕ್ರಮವನ್ನು ಖಂಡಿಸಿದರೆ, ಇನ್ನು ಕೆಲವರು ವ್ಯಕ್ತಿಯ ನೃತ್ಯ ನೋಡಿ ಫಿದಾ ಆಗಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿ: ಸುಳ್ಳು ಹೇಳಿ ಬಾಯ್​ಫ್ರೆಂಡ್​ ನೋಡಲು ಹೋದ ಕೇರಳ ಬ್ಯೂಟಿಷಿಯನ್ ದುರಂತ ಅಂತ್ಯವಾಗಿದ್ದು ಹೇಗೆ?​

    ಇನ್ನೊಂದು ವರ್ಷ ಕರೊನಾ ಹೊಸ ರೂಲ್ಸ್​: ಫಾಲೋ ಮಾಡದಿದ್ರೆ ಬೀಳತ್ತೆ ದಂಡ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts