More

    ಚೀನಾ ನಿರ್ಮಿತ ವಿದ್ಯುತ್ ಮೀಟರ್ ಬಹಿಷ್ಕರಿಸಿದ ಯೋಗಿ ಸರ್ಕಾರ

    ಲಖನೌ: ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಚೀನಾ ನಿರ್ಮಿತ ಹೊಸ ವಿದ್ಯುತ್ ಮೀಟರ್‌ಗಳನ್ನು ರಾಜ್ಯ ವಿದ್ಯುತ್ ಇಲಾಖೆ ಅಳವಡಿಸಲು ನಿಷೇಧ ಹೇರಿದೆ.
    ಜೂನ್ 15 ರಂದು ಪೂರ್ವ ಲಡಾಕ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಿ ಸೈನಿಕರ ನಡುವೆ ನಡೆದ ಹಿಂಸಾತ್ಮಕ ಸಂಘರ್ಷಣೆಯ ಇಪ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.

    ಇದನ್ನೂ ಓದಿ : ಅಮೆರಿಕದಲ್ಲಿ ಮೂವರು ಭಾರತೀಯರ ನಿಗೂಢ ಸಾವು- ತನಿಖೆ ಆರಂಭ

    “ಚೀನಾ ನಿರ್ಮಿತ ವಿದ್ಯುತ್ ಮೀಟರ್ ಅಳವಡಿಕೆಯನ್ನು ರಾಜ್ಯಾದ್ಯಂತ ನಿಷೇಧಿಸಲಾಗಿದೆ. ಚೀನಾದ ಮೀಟರ್ ಮತ್ತು ಸಲಕರಣೆಗಳ ಆರ್ಡರ್​​ಗಳು ಮತ್ತು ಕಳೆದ ಒಂದು ವರ್ಷದಲ್ಲಿ ಮಾಡಲಾದ ಚೀನಿ ವಸ್ತುಗಳ ಒಪ್ಪಂದಗಳ ಬಗ್ಗೆ ವಿವರಗಳನ್ನು ಕೇಳಲಾಗಿದೆ” ಎಂದು ವಿದ್ಯುತ್ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
    ಅಖಿಲ ಭಾರತ ವಿದ್ಯುತ್ ಎಂಜಿನಿಯರ್‌ಗಳ ಒಕ್ಕೂಟದ ಅಧ್ಯಕ್ಷ ಶೈಲೇಂದ್ರ ದುಬೆ ಯುಪಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದು, ಚೀನಾದಿಂದ ಖರೀದಿಸಿದ ಉಪಕರಣಗಳು ಅಗ್ಗವಾಗಿವೆಯಾದರೂ ಗುಣಮಟ್ಟ ಉತ್ತಮವಾಗಿಲ್ಲ ಎಂಬ ಸತ್ಯಾಂಶವೂ ಇದೆ.

    ಇದನ್ನೂ ಓದಿ: ನೆಚ್ಚಿನ ಟಿವಿ ಧಾರಾವಾಹಿ ನೋಡಲು ಶುರುವಾದ ವಾಗ್ವಾದ ತಾರಕಕ್ಕೇರಿತು, ಮುಂದೇನಾಯ್ತು ನೋಡಿ…!

    ಪ್ರಧಾನಿ ಮೋದಿಯವರ ‘ಆತ್ಮನಿರ್ಭರ್ ಭಾರತ್’ ಉಪಕ್ರಮವನ್ನು ಬೆಂಬಲಿಸಿದ ದುಬೆ, ಉಪಕರಣಗಳನ್ನು ಸಾರ್ವಜನಿಕ ವಲಯದ ಕಂಪನಿ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಭೆಲ್) ನಿಂದ ಖರೀದಿಸುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.
    ಕಳೆದ ವಾರ, ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಸಿಬ್ಬಂದಿಗೆ ಟಿಕ್‌ಟಾಕ್, ಹಲೋ, ಯುಸಿ ನ್ಯೂಸ್, ಯುಸಿ ಬ್ರೌಸರ್, ಕ್ಲಬ್ ಫ್ಯಾಕ್ಟರಿ, ವಂಡರ್ ಕ್ಯಾಮೆರಾ, ಸೆಲ್ಫಿ ಸಿಟಿ ಸೇರಿ ಇತರ 52 ಚೀನೀ ಅಪ್ಲಿಕೇಶನ್‌ಗಳನ್ನು ಡಿಲಿಟ್ ಮಾಡಲು ಆದೇಶಿಸಿದೆ.

    ಇದನ್ನೂ ಓದಿ: ಗುಜರಾತ್ ಕೈಗಾರಿಕಾ ಅಭಿವೃದ್ಧಿ ನಿಗಮದ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ

    ಇದಕ್ಕೂ ಮೊದಲು ಹರಿಯಾಣದ ಮನೋಹರ್ ಲಾಲ್ ಖಟ್ಟರ್ ಸರ್ಕಾರ ಚೀನಾದ ಕಂಪನಿಗಳೊಂದಿಗಿನ ಎರಡು ವಿದ್ಯುತ್ ವಲಯದ ಒಪ್ಪಂದಗಳನ್ನು ರದ್ದುಗೊಳಿಸಿತ್ತು. ಬೀಜಿಂಗ್ ಎಸ್‌ಪಿಸಿ ಎನ್ವಿರಾನ್ಮೆಂಟ್ ಪ್ರೊಟೆಕ್ಷನ್ ಟೆಕ್ ಗೆ ಯಮುನಾ ನಗರದ ದೀನ್ ಬಂಧು ಚೋಟು ರಾಮ್ ಉಷ್ಣ ವಿದ್ಯುತ್ ಕೇಂದ್ರದ ಗುತ್ತಿಗೆ ನೀಡಲಾಗಿತ್ತು, ಹಿಸಾರ್‌ನ ರಾಜೀವ್ ಗಾಂಧಿ ಉಷ್ಣ ವಿದ್ಯುತ್ ಸ್ಥಾವರಕ್ಕಾಗಿ ಶಾಂಘೈ ಎಲೆಕ್ಟ್ರಿಕ್ ಕಾರ್ಪ್ ನ್ನು ಜ್ಯೇಷ್ಠತಾ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಈಗ ಎರಡೂ ಒಪ್ಪಂದವನ್ನು ರದ್ದುಪಡಿಸಲಾಗಿದೆ.

    ಇದನ್ನೂ ಓದಿ: ಎಚ್ಚರ! ಆಸ್ಪತ್ರೆಯಿಂದ ಕರೊನಾ ಸೋಂಕಿತ ಎಸ್ಕೇಪ್, ನಿಮ್ಮ ಬಳಿಯೂ ಆತ ಬರಬಹುದು…

    ಚೀನಾದ ಕಂಪನಿಗಳಿಂದ ಮೂರು ಆರಂಭಿಕ ಹೂಡಿಕೆ ಪ್ರಸ್ತಾಪಗಳನ್ನು ಮಹಾರಾಷ್ಟ್ರ ಸರ್ಕಾರ ತಡೆಹಿಡಿದಿದೆ. ವಿಶೇಷವೆಂದರೆ, ಗಾಲ್ವಾನ್ ಘರ್ಷಣೆಗೆ ಕೆಲವೇ ಗಂಟೆಗಳ ಮುನ್ನ, ಜೂನ್ 15 ರಂದು ನಡೆದ ಮ್ಯಾಗ್ನೆಟಿಕ್ ಮಹಾರಾಷ್ಟ್ರ 2.0 ಹೂಡಿಕೆದಾರರ ವರ್ಚುವಲ್ ಸಭೆಯಲ್ಲಿ ಈ ಮೂರು ಒಪ್ಪಂದಗಳಿಗೆ ಸಹಿ ಹಾಕಲಾಗಿತ್ತು.
    ಚೀನಾದ ಸರಕುಗಳನ್ನು ಬಹಿಷ್ಕರಿಸುವಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡ ಕರೆ ನೀಡಿದ್ದಾರೆ.

    ಐಎಎಸ್‌ ಅಧಿಕಾರಿಗಳ ಬದುಕಿನ ಕರಾಳ ಸತ್ಯ ಬಿಚ್ಚಿಟ್ಟ ಶಂಕರ್‌ ಬಿದರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts