More

    ಐಎಎಸ್‌ ಅಧಿಕಾರಿಗಳ ಬದುಕಿನ ಕರಾಳ ಸತ್ಯ ಬಿಚ್ಚಿಟ್ಟ ಶಂಕರ್‌ ಬಿದರಿ

    ಬೆಂಗಳೂರು: ರಾಜಕೀಯ ಮುಖಂಡರು ದಪ್ಪ ಚರ್ಮದವರು. ಅವರು ನಿಮ್ಮ ಅಕ್ರಮ ಗಳಿಕೆಯ ಶೇ.90ರಷ್ಟನ್ನು ನುಂಗಿ, ನಿಮ್ಮನ್ನು ಗುಲಾಮರಂತೆ ಪರಿಗಣಿಸುತ್ತಾರೆ. ಆದರೆ ಎಲ್ಲಾ ಪಾಪಗಳು ಮತ್ತು ತಪ್ಪುಗಳಿಗೆ ನೀವು ಮಾತ್ರ ಉತ್ತರ ನೀಡಬೇಕಾಗುತ್ತದೆ. ಅದಕ್ಕಾಗಿ ದಯವಿಟ್ಟು ಯಾವುದೇ ಕಾರಣಕ್ಕೂ ನೀವು ಕಾನೂನು ಮತ್ತು ನಿಯಮಗಳಿಗೆ ವಿರುದ್ಧವಾದ ಕೆಲಸ ಮಾಡಬೇಡಿ ಎಂದು ನಿವೃತ್ತ ಐಜಿ ಶಂಕರ್ ಬಿದರಿ ಅವರು ಎಲ್ಲಾ ಐಎಎಸ್‌ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

    ಐ-ಮೊನಿಟರಿ ಅಡ್ವೈಸರಿ (ಐಎಂಎ) ಹಗರಣದಲ್ಲಿ ಆರೋಪಿಯಾಗಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ವಿಜಯ್ ಶಂಕರ್ ಅವರ ಆತ್ಮಹತ್ಯೆಯ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿರುವ ಶಂಕರ್‌ ಬಿದರಿ ಈ ಕುರಿತು ಎಲ್ಲಾ ಐಎಎಸ್‌ ಅಧಿಕಾರಿಗಳಿಗೆ ಮನವಿ ಮಾಡಿಕೊಂಡು ಮನವಿ ಪತ್ರವೊಂದನ್ನು ಬರೆದಿದ್ದಾರೆ.
    ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಕೇಳಿ ನನಗೆ ತೀವ್ರವಾಗಿ ಬೇಸರವಾಗಿದೆ, ನಾನು ಐಎಎಸ್‌ ಅಧಿಕಾರಿಗಳು ಮತ್ತು ಇಲಾಖೆಗಳ ಮುಖ್ಯಸ್ಥರಿಗೆ ಮನಃಪೂರ್ವಕವಾಗಿ ಮನವಿ ಮಾಡಿಕೊಳ್ಳುವುದು ಏನೆಂದರೆ, ರಾಜಕೀಯ ಮುಖಂಡರ ಮಾತು ಕೇಳಿ ಯಾವುದೇ ಕಾರಣಕ್ಕೂ ಕಾನೂನು ಮತ್ತು ನಿಯಮ ಉಲ್ಲಂಘಿಸುವ ಕೆಲಸಕ್ಕೆ ಕೈಹಾಕಬೇಡಿ. ಯಾವುದೇ ಪೋಸ್ಟಿಂಗ್‌ ಕೊಡುವಂತೆ ದುಡ್ಡು ಸುರಿಯಬೇಡಿ.

    ಅವರ ಮಾತು ಕೇಳಿ ನೀವು ಮೋಸ ಹೋಗುತ್ತೀರಿ. ಅದರೆ ನಿಮಗೆ ಏನಾದರೂ ಆದರೆ ಯಾರೂ ನಿಮಗಾಗಿ ಕಣ್ಣೀರು ಸುರಿಸುವುದಿಲ್ಲ. ಅವರು ಎಂದಿಗೂ ಈ ಕುರಿತು ಜವಾಬ್ದಾರಿಯನ್ನು ಹೆಗಲ ಮೇಲೆ ಹಾಕಿಕೊಳ್ಳುವುದಿಲ್ಲ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಏನಾಗುತ್ತದೆ ಎಂಬ ಕಾಳಜಿಯನ್ನೂ ಅವರು ಮಾಡುವುದಿಲ್ಲ.

    ಇದನ್ನೂ ಓದಿ: VIDEO| ಕರೊನಾಗೆ ಹೆದರಬೇಡಿ: ಪೊಲೀಸರಿಗೆ ಯೋಗ ಟೀಚರ್ ಆಗಿ ಧೈರ್ಯ ತುಂಬಿದ ಅಲೋಕ್​ ಕುಮಾರ್​!

    ಒಂದು ವೇಳೆ ಸಿಕ್ಕಿಬಿದ್ದು ಅವರೇನಾದರೂ ಜೈಲಿಗೆ ಹೋದರೆ ಆ ಸಂದರ್ಭದಲ್ಲಿ ಮೆರವಣಿಗೆಯ ಮೂಲಕವೇ ಜೈಲಿಗೆ ಹೋಗುತ್ತಾರೆ, ಬರುವಾಗಲೂ ಆರತಿಗಳಿಂದಲೇ ಸ್ವಾಗತ ಪಡೆಯುತ್ತಾರೆ. ನೀವು ಅವರನ್ನು ಕಂಡರೆ ಎಂದಿಗೂ ಭಯಪಡಬೇಡಿ, ಏಕೆಂದರೆ ಅವರಲ್ಲಿ ಕನಿಷ್ಠ ಶೇ. 75ರಷ್ಟು ಮಂದಿ ನೈತಿಕವಾಗಿ ದಿವಾಳಿಯಾಗಿದ್ದಾರೆ ಮತ್ತು ಹೆಚ್ಚು ದುರಾಸೆಯುಳ್ಳವರು, ಸ್ವಾರ್ಥಿಗಳು, ಭ್ರಷ್ಟರು ಆಗಿದ್ದಾರೆ.ಅವರಿಗೆ ದೇಶದ ರಾಜ್ಯದ, ಜನತೆಯ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲ.

    ಆದರೆ ಅವರ ಮಾತು ಕೇಳಿ ನೀವು ವರ್ತಿಸಿದ್ದೇ ಆದರಲ್ಲಿ, ಇಡೀ ಜೀವನ ಪರಿತಪಿಸಬೇಕಾಗುತ್ತದೆ. ಮಧ್ಯಮ ಕುಟುಂಬದಿಂದ ಬಂದ ನೀವು ವಿದ್ಯಾವಂತರಾಗಿದ್ದೀರಿ. ಏನಾದರೂ ಹೆಚ್ಚುಕಡಿಮೆ ಆದರೆ ನೀವೇ ಅವಮಾನ ಪಡಬೇಕಾಗುತ್ತದೆ, ನಿಮ್ಮ ಗೌರವಕ್ಕೆ ಧಕ್ಕೆ ಬಂದಾಗ ನೀವು ಅದನ್ನು ಸಹಿಸುವುದು ಕಷ್ಟವಾಗುತ್ತದೆ. ಬಂಧನ ಅಥವಾ ಪೊಲೀಸ್‌ ಕೇಸ್‌ ಆದಾಗ ನಿಮಗೆ ಅದನ್ನು ಸಹಿಸಿಕೊಳ್ಳುವ ಶಕ್ತಿ ಇಲ್ಲ. ಆದರೆ ಅವರು ಜೈಲಿಗೆ ಹೋಗಿ ಬಂದರೂ ಕಾಶಿ ಅಥವಾ ತಿರುಮಲೈ ಯಾತ್ರೆಗೆ ಹೋಗಿಬಂದವರಂತೆ ವಿಜೃಂಭಿಸುತ್ತಾರೆ.

    ಆದ್ದರಿಂದ ಅವರನ್ನು ಮೆಚ್ಚಿಸಲು ನೀವು ಯಾವುದೇ ಕಾರಣಕ್ಕೂ ಇಲ್ಲಸಲ್ಲದ ಕೆಲಸಕ್ಕೆ ಕೈ ಹಾಕಬೇಡಿ. ಯಾವುದೇ ಪೋಸ್ಟಿಂಗ್‌ಗಳನ್ನು ಕೇಳಬೇಡಿ. ಇಲ್ಲದಿದ್ದರೆ ನೀವು ಮತ್ತು ನಿಮ್ಮ ಕುಟುಂಬ ಜೀವನ ಪರ್ಯಂತ ಅಪಮಾನದಿಂದ ಬಾಳಿ ಬದುಕಬೇಕಾಗುತ್ತದೆ. ನಿಮ್ಮ ಸಾವಿನ ನಂತರ ನಿಮ್ಮ ಕುಟುಂಬಕ್ಕೆ ಪಿಂಚಣಿ ಇತ್ಯಾದಿ ಸೌಲಭ್ಯ ಸಿಗಬಹುದು ಅಷ್ಟೇ. ಬೇರೇನೂ ಸಿಗುವುದಿಲ್ಲ. ಆದ್ದರಿಂದ ಈ ದುರಂತ ಜೀವನದ ಬಗ್ಗೆ ಎಚ್ಚೆತ್ತುಕೊಳ್ಳಿ. ಜಾಗರೂಕರಾಗಿರಿ ಎಂದಿದ್ದಾರೆ.

    ಬಿ. ಎಂ. ವಿಜಯ್ ಶಂಕರ್ ಅವರು ಬೆಂಗಳೂರಿನ ಜಯನಗರದಲ್ಲಿನ ನಿವಾಸದಲ್ಲಿ ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಹುಕೋಟಿ ರೂಪಾಯಿ ಐಎಂಎ ಹಗರಣದಲ್ಲಿ ಆರೋಪಿಯಾಗಿದ್ದ ಬಿ. ಎಂ. ವಿಜಯ ಶಂಕರ್ ಎಸ್‌ಐಟಿ ಮತ್ತು ಸಿಬಿಐ ತನಿಖೆಯನ್ನು ಎದುರಿಸಿದ್ದರು. ಜೈಲುವಾಸವನ್ನು ಅನುಭವಿಸಿದ್ದ ಅವರು, ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.

    ಅಂದ ನೋಡಿ, ಹೆಸರು ಕೇಳಿ ದೇಹ ಒಪ್ಪಿಸಿದ ಯುವತಿಯರು! ಮುಂದೆ ಆದದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts