More

    ಉತ್ತರ ಪ್ರದೇಶದಲ್ಲಿ 8 ವರ್ಷದ ಬಾಲಕನ ಅಪಹರಣ ಪ್ರಕರಣ ಸುಖಾಂತ್ಯ, ನಾಲ್ವರ ಬಂಧನ

    ಗೊಂಡಾ: ಸ್ಯಾನಿಟೈಸರ್​ ಮತ್ತು ಮಾಸ್ಕ್​ಗಳನ್ನು ವಿತರಿಸುವ ಆರೋಗ್ಯ ಕಾರ್ಯಕರ್ತರ ಸೋಗಿನಲ್ಲಿ 8 ವರ್ಷದ ಬಾಲಕನನ್ನು ಅಪಹರಿಸಿದ್ದ ಪ್ರಕರಣ ಸುಖಾಂತ್ಯವಾಗಿದೆ. ಉತ್ತರ ಪ್ರದೇಶ ಪೊಲೀಸ್​ ಮತ್ತು ವಿಶೇಷ ಕಾರ್ಯಪಡೆ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಬಾಲಕನನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿದ್ದಲ್ಲದೆ, ಒಬ್ಬ ಮಹಿಳೆ ಸೇರಿ ಐವರು ಅಪಹರಣಕಾರರನ್ನು ಬಂಧಿಸಿದ್ದಾರೆ.

    ಈ ಬಗ್ಗೆ ಹಚ್ಚಿನ ಮಾಹಿತಿ ನೀಡಿರುವ ಉತ್ತರ ಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಅವನೀಶ್​ ಅವಸ್ತಿ, ಶನಿವಾರ ನಸುಕಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಅಪಹಣಕಾರರು ಸಿಕ್ಕಿಬಿದ್ದರು. ಸೂರಜ್​ ಪಾಂಡೆ, ಛವಿ ಪಾಂಡೆ, ರಾಜ್​ ಪಾಂಡೆ, ಉಮೇಶ್​ ಯಾದವ್​ ಮತ್ತು ದೀಪು ಕಶ್ಯಪ್​ ಬಂಧಿತರು. ಇವರಿಂದ ಮೂರು ಬಂದೂಕು ಹಾಗೂ ಅಪಹರಣಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿಸಿದರು.

    ಉತ್ತರ ಪ್ರದೇಶದ ಗೊಂಡಾದ ಕರ್ನಾಲ್​ಗಂಜ್​ ಪ್ರದೇಶದ ನಿವಾಸಿ ಗುಟ್ಕಾ ವರ್ತಕರೊಬ್ಬರ ಮೊಮ್ಮಗನನ್ನು ಆರೋಗ್ಯ ಕಾರ್ಯಕರ್ತರ ಸೋಗಿನಲ್ಲಿ ಸೂರಜ್​, ರಾಜ್​, ಉಮೇಶ್​ ಮತ್ತು ದೀಪು ಶುಕ್ರವಾರ ಮಧ್ಯಾಹ್ನ 1.30ರಲ್ಲಿ ಅಪಹರಿಸಿದ್ದರು. ಬಾಲಕನ ಪಾಲಕರಿಗೆ ಸ್ಯಾನಿಟೈಸರ್​ ಮತ್ತು ಮಾಸ್ಕ್​ಗಳನ್ನು ವಿತರಿಸಿದ್ದ ಇವರು, ಇನ್ನಷ್ಟು ಸ್ಯಾನಿಟೈಸರ್​ ಮತ್ತು ಮಾಸ್ಕ್​ ಕೊಡುವುದಾಗಿ ಹೇಳಿ ಬಾಲಕನನ್ನು ತಮ್ಮ ಕಾರಿನ ಬಳಿ ಕರೆದುಕೊಂಡು ಹೋಗಿ ಅಪಹರಿಸಿದ್ದರು ಎಂದು ವಿವರಿಸಿದರು.

    ಇದನ್ನೂ ಓದಿ: ಬಾಯ್​ಫ್ರೆಂಡ್​ ಇದ್ದರೂ ಒಮ್ಮೆಯೂ ಸೆಕ್ಸ್ ಮಾಡಿರಲಿಲ್ಲ…ಆದ್ರೂ ಗರ್ಭಿಣಿಯಾದೆ: ಯುಎಸ್​ ಮಹಿಳೆಯ ವಿಭಿನ್ನ ಕತೆ

    ಬಾಲಕನನ್ನು ಅಜ್ಞಾತ ಸ್ಥಳದಲ್ಲಿ ಇರಿಸಿದ ಬಳಿಕ ಛವಿ ಮೂಲಕ ಬಾಲಕನ ಮನೆಯವರಿಗೆ ಕರೆ ಮಾಡಿಸಿದ್ದ ದುಷ್ಕರ್ಮಿಗಳು 4 ಕೋಟಿ ರೂ. ಒತ್ತೆಹಣಕ್ಕೆ ಬೇಡಿಕೆ ಇಟ್ಟಿದ್ದರು. ಇತ್ತೀಚೆಗೆ ಎನ್​ಕೌಂಟರ್​ ಆಗಿದ್ದ ವಿಕಾಸ್​ ದುಬೆ ಹೆಸರನ್ನು ಪ್ರಸ್ತಾಪಿಸಿದ್ದ ಆಕೆ, ಅವರ ವಿಷಯ ಗೊತ್ತಲ್ವಾ, ಯಾವುದೇ ಕಾರಣಕ್ಕೂ ಪೊಲೀಸರ ಬಳಿ ಹೋಗಬೇಡಿ. ನಿಮ್ಮ ಪ್ರತಿಯೊಂದು ಚಲನವಲನದ ಮೇಲೆ ನಾವು ಕಣ್ಣಿಟ್ಟಿದ್ದೇವೆ. ನಮಗೆ ಸುಲಭವಾಗಿ ಗೊತ್ತಾಗುತ್ತದೆ ಎಂದು ಬೆದರಿಸಿದ್ದಳು.

    ಈ ಬಗ್ಗೆ ಬಾಲಕನ ಪಾಲಕರು ದೂರು ದಾಖಲಿಸಿದ ನಂತರ ಕಾರ್ಯಾಚರಣೆ ಆರಂಭಿಸಿದ್ದ ಪೊಲೀಸರು ಆ ಪ್ರದೇಶದಲ್ಲಿನ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪಡೆದು ಸೂಕ್ಷ್ಮವಾಗಿ ಅವಲೋಕಿಸಿ ದುಷ್ಕರ್ಮಿಗಳ ಜಾಡು ಪತ್ತೆ ಮಾಡಿದ್ದರು. ಗೊಂಡಾದಲ್ಲಿ ನಿರ್ದಿಷ್ಟವಾದ ಮನೆಯೊಂದರ ಮೇಲೆ ದಾಳಿ ಪೊಲೀಸರು ದಾಳಿ ನಡೆಸಿದಾಗ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಪ್ರತಿದಾಳಿ ನಡೆಸಿದ ಪೊಲೀಸರು ಕೊನೆಗೂ ಅಪಹರಣಕಾರರನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಗುಂಡಿನ ಚಕಮಕಿಯಲ್ಲಿ ಇಬ್ಬರು ಅಪಹರಣಕಾರರಿಗೆ ಗಾಯವಾಗಿದೆ ಎಂದು ಅವನೀಶ್​ ಅವಸ್ತಿ ತಿಳಿಸಿದರು.

    ವರ್ಕ್​ ಫ್ರಂ ಹೋಮ್​ ಕೇಳಿದ್ದೀರಿ, ಇದೀಗ ಶೂಟ್ಸ್​ ಫ್ರಂ ಹೋಮ್​ ಶುರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts