More

    ಒಂದು ವರ್ಷದಲ್ಲಿ 120% ಏರಿಕೆ ಟಾಟಾ ಸಮೂಹದ ಷೇರು ಈಗಲೂ ಹೆಚ್ಚಾಗುವುದೇ?: ಈ ಸ್ಟಾಕ್​ಗೆ ಮೇ 8 ಮಹತ್ವದ ದಿನ

    ಮುಂಬೈ: ಬೇಸಿಗೆ ಕಾಲದಲ್ಲಿ ವಿದ್ಯುತ್ ವಲಯದ ಷೇರುಗಳ ಮೇಲೆ ವಿಶೇಷ ಗಮನಹರಿಸಲಾಗುತ್ತದೆ. ಈ ಷೇರುಗಳಲ್ಲಿ ಟಾಟಾ ಪವರ್ ಕೂಡ ಒಂದು. ವಾರದ ಕೊನೆಯ ವಹಿವಾಟಿನ ದಿನ ಅಂದರೆ ಶುಕ್ರವಾರದಂದು ಟಾಟಾ ಪವರ್ ಕಂಪನಿ ಲಿಮಿಟೆಡ್‌ನ ಷೇರುಗಳು ನೀರಸವಾಗಿ ಕಾಣುತ್ತಿದ್ದರೂ ಕಳೆದ ಒಂದು ವರ್ಷದಲ್ಲಿ ಹೂಡಿಕೆದಾರರಿಗೆ ಈ ಸ್ಟಾಕ್​ ಮಲ್ಟಿಬ್ಯಾಗರ್ ರಿಟರ್ನ್ಸ್ ನೀಡಿದೆ.

    ಟಾಟಾ ಪವರ್ ಷೇರುಗಳು ಶುಕ್ರವಾರ ಶೇಕಡಾ 2.52 ರಷ್ಟು ಕುಸಿತ ಕಂಡು ರೂ. 427.75 ತಲುಪಿದ್ದವು. ಏಪ್ರಿಲ್ 12 ರಂದು ಷೇರಿನ ಬೆಲೆ 444.10 ರೂ.ಗೆ ಏರಿತ್ತು. ಇದು ಈ ಷೇರಿನ ಸಾರ್ವಕಾಲಿಕ ಗರಿಷ್ಠ ಬೆಲೆಯಾಗಿದೆ. ಕಳೆದ ಒಂದು ವರ್ಷದಲ್ಲಿ ಈ ಮಲ್ಟಿಬ್ಯಾಗರ್ ಸ್ಟಾಕ್ 120 ಪ್ರತಿಶತದಷ್ಟು ಹೆಚ್ಚಾಗಿದೆ.

    ಮೇ 8, 2024 ಟಾಟಾ ಗ್ರೂಪ್ ಪವರ್ ಕಂಪನಿಗೆ ಬಹಳ ಮುಖ್ಯವಾದ ದಿನವಾಗಿದೆ. ವಾಸ್ತವವಾಗಿ, ಈ ದಿನದಂದು ಕಂಪನಿಯು ನಾಲ್ಕನೇ ತ್ರೈಮಾಸಿಕದ (Q4 FY24) ಫಲಿತಾಂಶಗಳನ್ನು ಘೋಷಿಸುತ್ತದೆ. ಇದರೊಂದಿಗೆ ಕಂಪನಿಯು ತನ್ನ ಷೇರುದಾರರಿಗೆ ಲಾಭಾಂಶವನ್ನು ಘೋಷಿಸುವತ್ತ ಚಿತ್ತ ನೆಟ್ಟಿದೆ.

    ವಿಲಿಯಂ ಓ’ನೀಲ್ ಇಂಡಿಯಾದ ಈಕ್ವಿಟಿ ರಿಸರ್ಚ್ ಮುಖ್ಯಸ್ಥ ಮಯೂರೇಶ್ ಜೋಶಿ, ಟಾಟಾ ಪವರ್‌ನ ಬಲವಾದ ಗಳಿಕೆಯು ಭವಿಷ್ಯದಲ್ಲಿಯೂ ಮುಂದುವರಿಯುವ ನಿರೀಕ್ಷೆಯಿದೆ. ಈ ಸ್ಟಾಕ್ ಅನ್ನು ರಾಡಾರ್​ನಲ್ಲಿ ಇರಿಸಬಹುದು ಎಂದಿದ್ದಾರೆ. ಇದೇ ಸಮಯದಲ್ಲಿ, ಪ್ರಭುದಾಸ್ ಲೀಲಾಧರ್​ ಬ್ರೋಕರೇಜ್​ ಸಂಸ್ಥೆಯ ತಾಂತ್ರಿಕ ಸಂಶೋಧನಾ ವಿಶ್ಲೇಷಕ ಶಿಜುಕುತುಪಲಕ್ಕಲ್ ಅವರು ಸ್ಟಾಕ್ ದಾಖಲೆಯ ಗರಿಷ್ಠ 444 ರೂ.ಗೆ ತಲುಪಿದೆ, ಅಲ್ಲಿ ಅದು ಸ್ವಲ್ಪ ಪ್ರತಿರೋಧವನ್ನು ತೋರಿಸಿದೆ. ಈ ಸ್ಟಾಕ್‌ನ ಸಮೀಪಾವಧಿಯ ಗುರಿಯು ರೂ 454-474 ಆಗಿದೆ ಎಂದಿದ್ದಾರೆ.

    ಇದೇ ಸಮಯದಲ್ಲಿ, ಆನಂದ್ ರಾಠಿ ಷೇರ್ಸ್​ ಆ್ಯಂಡ್​ ಸ್ಟಾಕ್ ಬ್ರೋಕರ್ಸ್‌ನ ಜಿಗರ್ ಎಸ್ ಪಟೇಲ್ ಅವರು ಸ್ಟಾಕ್‌ನ ಬೆಂಬಲವು ರೂ 414 ಮತ್ತು ರೂ 435 ನಲ್ಲಿ ಪ್ರತಿರೋಧ ಇರುತ್ತದೆ ಎಂದು ಹೇಳಿದ್ದಾರೆ. ಒಂದು ತಿಂಗಳವರೆಗೆ ನಿರೀಕ್ಷಿತ ವ್ಯಾಪಾರ ಶ್ರೇಣಿಯು ರೂ 410 ರಿಂದ ರೂ 450 ರ ನಡುವೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.
    ಟಿಪ್ಸ್ 2 ಟ್ರೇಡ್ಸ್‌ನ ಎಆರ್ ರಾಮಚಂದ್ರನ್ ಅವರು ಸ್ಟಾಕ್ ಹತ್ತಿರದ ಅವಧಿಯಲ್ಲಿ 372 ರೂ. ತಲುಪಲಿದೆ ಎಂದಿದ್ದಾರೆ.

    ಮಾರ್ಚ್ 2024 ರ ಹೊತ್ತಿಗೆ, ಟಾಟಾ ಗ್ರೂಪ್ ಕಂಪನಿಯಲ್ಲಿ ಪ್ರವರ್ತಕರು 46.86 ಶೇಕಡಾ ಪಾಲನ್ನು ಹೊಂದಿದ್ದಾರೆ.

    54 ಪೈಸೆಯ ಷೇರು ಈಗ 116 ರೂಪಾಯಿ: ಈ ಫಾರ್ಮಾ ಸ್ಟಾಕ್​ನಲ್ಲಿ ಹೂಡಿಕೆ ಮಾಡಿದವರು ಈಗ ಕುಬೇರರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts