More

    ನೋ ಬಾಲ್‌ ಕೊಟ್ಟಿದ್ದಕ್ಕೆ ಪ್ರಾಣವೇ ಹೋಯ್ತು; ಏನಿದು ಅಸಲಿ ಕಥೆ?

    ಭುವನೇಶ್ವರ್: ಆಟ ಎಂದರೆ ಮುನಿಸು, ಜಗಳ ಇದ್ದೆ ಇರುತ್ತದೆ. ಕ್ರಿಕೆಟ್ ಪಂದ್ಯ ನಡೆಯುತ್ತಿರುವ ವೇಳೆ ‘ನೋ ಬಾಲ್’ ಸಿಗ್ನಲ್ ಪ್ರದರ್ಶಿಸಿದ ಕಾರಣಕ್ಕೆ ಕ್ರಿಕೆಟ್ ಅಂಪೈರ್ ನನ್ನೇ ಕೊಂದ ಘಟನೆ ಭಾನುವಾರ ಒಡಿಶಾದ ಕಟಕ್‌ನಿಂದ ಈ ಘಟನೆ ವರದಿಯಾಗಿದೆ.

    ಲಕ್ಕಿ ರಾವುತ್(22) ಮೃತ. ಸ್ಮೃತಿ ರಂಜನ್ ರೌತ್ ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ. ಭಾನುವಾರ (ಏ. 2 ರಂದು) ಒಡಿಶಾದ ಕಟಕ್‌ ನಲ್ಲಿ ಬ್ರಹ್ಮಪುರ ಮತ್ತು ಶಂಕರಪುರ ಎಂಬ ಎರಡು ತಂಡಗಳ ನಡುವೆ ಕ್ರಿಕೆಟ್‌ ಮ್ಯಾವ್‌ ನಡೆಯುತ್ತಿತ್ತು.

    ಇದನ್ನೂ ಓದಿ: VIDEO: ನಟಿ ನಯನತಾರಾ ಮಕ್ಕಳ ಪೂರ್ಣ ಹೆಸರೇನು ಗೊತ್ತಾ?
    ನಡೆದಿದ್ದೇನು?: ಲಕ್ಕಿ ರಾವುತ್ ಆಟಕ್ಕೆ ತೀರ್ಪುಗಾರನಾಗಿ ನಿಂತಿದ್ದರು. ಪಂದ್ಯ ನಡೆಯುತ್ತಿದ್ದ ವೇಳೆ ಎಸೆತವೊಂದಕ್ಕೆ ʼನೋ ಬಾಲ್‌ʼ ಎಂದು ಅಂಪೈರ್ ತೀರ್ಪು ನೀಡಿದ್ದಾರೆ. ಈ ವೇಳೆ ಇದು ನೋ ಬಾಲ್‌ ಅಲ್ಲ ಎಂದು ಸ್ಮೃತಿ ರಂಜನ್ ರೌತ್ ಎಂಬಾತ ಅಂಪೈರ್ ನೊಂದಿಗೆ ವಾದಕ್ಕೆ ಇಳಿದಿದ್ದಾನೆ. ವಾದ ಜಗಳಕ್ಕೆ ತಿರುಗಿ ಚೂರಿಯಿಂದ ತೀರ್ಪುಗಾರನಾಗಿ ನಿಂತಿದ್ದ ಲಕ್ಕಿ ರಾವುತ್ ಗೆ ಇರಿದಿದ್ದಾನೆ. ಆರೋಪಿಯನ್ನು ಜನ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಗಂಭೀರವಾಗಿ ಗಾಯಗೊಂಡಿದ್ದ ಲಕ್ಕಿ ರಾವುತ್‌ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸುವಾಗಲೇ ಆತ ಮೃತಪಟ್ಟಿದ್ದಾನೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

    12 ನೇ ತರಗತಿ ಇತಿಹಾಸ ಪುಸ್ತಕಗಳಲ್ಲಿ ಮೊಘಲ್ ಸಾಮ್ರಾಜ್ಯದ ಅಧ್ಯಾಯಗಳನ್ನು ತೆಗೆದುಹಾಕಿದ ʻNCERTʼ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts