More

    ಕಡುಬಡವರಿಗೆ ದಿನಸಿ ಕಿಟ್ ವಿತರಣೆ

    ಉಮದಿ: ಜಿಪಂ ಮಾಜಿ ಸದಸ್ಯ ಚನ್ನಪ್ಪ ಹೋರ್ತಿಕರ ಅವರು ಕಡುಬಡವರು, ದೇವದಾಸಿ ಹಾಗು ಅಲೆಮಾರಿ ಜನಾಂಗದ ಕುಟುಂಬಗಳಿಗೆ 15 ದಿನಗಳಿಗಾಗುವಷ್ಟು ದಿನಸಿ ವಸ್ತುಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.
    ಲಾಕ್‌ಡೌನ್‌ದಿಂದ ಉಮದಿ ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿ ಕಡುಬಡುವ ಹಾಗು ಕೂಲಿಕಾರ್ಮಿಕರು ತೀವ್ರ ಸಂಕಷ್ಟ ಎದುರಿಸುವಂತಾಗಿತ್ತು. ಇಂಥಹ ಸಂದಿಗ್ಧ ಸ್ಥಿತಿ ಎದುರಿಸುತ್ತಿರುವ ನೂರಾರು ಕುಟುಂಬಗಳಿಗೆ ಸಹಾಯ ಹಸ್ತ ನೀಡಿದ್ದಾರೆ.
    ಅಲ್ಲದೆ, ತಿಂಗಳಿನಿಂದ ಬಂದೋಬಸ್ತ್‌ಗಾಗಿ ಆಗಮಿಸಿದ್ದ 30ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗೆ ನಿತ್ಯ ಊಟೋಪಚಾರ ಮಾಡುತ್ತಿದ್ದಾರೆ. ಉಮದಿಯಲ್ಲಿ ನಾಗರಿಕರಿಗೆ 6000 ಕ್ಕೂ ಅಧಿಕ ಮಾಸ್ಕ್‌ಗಳನ್ನು ನೀಡಿದ್ದಾರೆ. ನಗರದಲ್ಲಿ ವಿದ್ಯುತ್ ಪೂರೈಕೆ ಮಾಡುವ ಸಲುವಾಗಿ ಹಗಲಿರುಳು ಶ್ರಮಿಸುತ್ತಿರುವ ವಿದ್ಯುತ್ ಪ್ರಸರಣ ಸಿಬ್ಬಂದಿಗೆ ನಿತ್ಯ ಉಪಾಹಾರ, ಊಟದ ವ್ಯವಸ್ಥೆ ಹಾಗೂ ಅವರ ಕುಟುಂಬಗಳಿಗೆ ದಿನಸಿ ಸಾಮಗ್ರಿ ವಿತರಿಸಿದ್ದಾರೆ. ಉಮದಿ ಸೇರಿ ಸುತ್ತಮುತ್ತಲಿನ ವೈದ್ಯಕೀಯ ಸೇವೆ ನೀಡುತ್ತಿರುವ ಎಲ್ಲ ವೈದ್ಯರಿಗೂ ಜಿಪಂ ಮಾಜಿ ಸದಸ್ಯ ಚನ್ನಪ್ಪ ಹೋರ್ತಿಕರ ಅವರು ಸಂರಕ್ಷಣಾ ಕಿಟ್, ೇಸ್ ಸೀಲ್ಡ್, ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್ ಸೇರಿ ದಿನ ಬಳಿಕೆ ವಸ್ತು, ಸ್ಯಾನಿಟೈಸರ್ ನೀಡಿದ್ದಾರೆ.

    ಜತ್ತ ಪೂರ್ವ ಭಾಗದಲ್ಲಿ ಬಹುತೇಕ ಕನ್ನಡರಿಗರೇ ಅಧಿಕವಾಗಿದ್ದಾರೆ. ಕರೊನಾ ರೋಗದಿಂದ ಲಾಕ್‌ಡೌನ್‌ನಿಂದಾಗಿ ಇಲ್ಲಿ ಕನ್ನಡಿಗರು ಸೇರಿ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಅವರಿಗೆ ನನ್ನ ಕೈಲಾದ ಮಟ್ಟಿಗೆ ಸಹಾಯ ಮಾಡಲು ಪ್ರಯತ್ನಿಸಿದ್ದೇನೆ.
    ಚನ್ನಪ್ಪ ಹೋರ್ತಿಕರ ಜಿಪಂ ಮಾಜಿ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts