More

    ಪದವಿ, ಪಿಜಿ ಪರೀಕ್ಷೆ ಪರೀಕ್ಷೆ ನಡೆಯುತ್ತೋ, ಇಲ್ಲವೋ? ಗೊಂದಲ ಬಗೆಹರಿಸಿದ ಯುಜಿಸಿ ಮಾರ್ಗಸೂಚಿ

    ನವದೆಹಲಿ: ಕರೊನಾ ವೈರಸ್​ ಸಂಕಷ್ಟ ಹೆಚ್ಚಾದಂತೆ ಶೈಕ್ಷಣಿಕ ಚಟುವಟಿಕೆಗಳ ಪುನಾರಂಭದ ಮೇಲೆ ಅನಿಶ್ಚಿತತೆಯ ಕರಿ ನೆರಳು ಆವರಿಸುತ್ತಿದೆ. ನಡೆಯೋದೇ ಅನುಮಾನ ಎಂದುಕೊಂಡಿದ್ದ ಎಸ್​ಎಸ್​ಎಲ್​ಸಿ ಪರೀಕ್ಷೆ ಯಶಸ್ವಿಯಾಗಿ ಮುಗಿದಿದೆ.

    ಕೆಲ ರಾಜ್ಯಗಳಲ್ಲಿ ಕಾಲೇಜು ಹಾಗೂ ಪದವಿ ಪರೀಕ್ಷೆಯನ್ನು ರದ್ದು ಮಾಡಿವೆ. ಈ ಕಾರಣಕ್ಕಾಗಿ ದೇಶಾದ್ಯಂತ ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆ ನಡೆಯುತ್ತೋ ಇಲ್ಲವೋ ಎಂಬ ಬಗ್ಗೆ ಅನುಮಾನ ಉಂಟಾಗಿತ್ತು. ಇದೀಗ ಈ ಗೊಂದಲಗಳನ್ನು ಯುಜಿಸಿ ಪರಿಹರಿಸಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್​ ಪೋಖ್ರಿಯಾಲ್​ ಇದನ್ನು ಟ್ವಿಟರ್​ನಲ್ಲಿ ಪ್ರಕಟಿಸಿದ್ದಾರೆ.

    ಇದನ್ನೂ ಓದಿ; ಕಾಲೇಜು, ವಿಶ್ವವಿದ್ಯಾಲಯಗಳ ಪರೀಕ್ಷೆಗಳೂ ರದ್ದು; ಇವರೇ ಭಾಗ್ಯವಂತರು…! 

    ಅಂತಿಮ ವರ್ಷ ಅಥವಾ ಕೊನೆಯ ಸೆಮಿಸ್ಟರ್​ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿದೆ ಹಾಗೂ ಸೆಪ್ಟಂಬರ್​ ಅಂತ್ಯದಲ್ಲಿ ಪರೀಕ್ಷೆ ಆಯೋಜಿಸಲಾಗುವುದು ಎಂದು ಸ್ಪಷ್ಟಪಡಿಸಿದೆ. ಪರೀಕ್ಷೆ ನಡೆಸಲು ಕೇಂದ್ರ ಗೃಹ ಸಚಿವಾಲಯ ಸಮ್ಮತಿ ನೀಡುತ್ತಿದ್ದಂತೆ ಶಿಕ್ಷಣ ಸಂಸ್ಥೆಗಳಿಗೆ ಯುಜಿಸಿ ಮಾರ್ಗಸೂಚಿಗಳನ್ನು ನೀಡಿದೆ.

    ಮಾರ್ಗಸೂಚಿ ಮುಖ್ಯಾಂಶಗಳು:

    • ವಿಶ್ವವಿದ್ಯಾಲಯಗಳು ಹಾಗೂ ಶಿಕ್ಷಣ ಸಂಸ್ಥೆಗಳಿಂದ ಅಂತಿಮ ವರ್ಷ, ಅಂತಿಮ ಸೆಮಿಸ್ಟರ್​ ವಿದ್ಯಾರ್ಥಿಗಳಿಗೆ ಸೆಪ್ಟಂಬರ್​ ಅಂತ್ಯದಲ್ಲಿ ಪರೀಕ್ಷೆ.
    • ಆನ್​ಲೈನ್​, ಆಫ್​ಲೈನ್ ಅಥವಾ ಸಂಸ್ಥೆಗಳಿಗೆ ಅನುಕೂಲವಾದ ಮಾದರಿಯಲ್ಲಿ ಪರೀಕ್ಷೆ ನಡೆಸುವುದು.
    • ಹಿಂಬಾಕಿ ಉಳಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಆಫ್​ಲೈನ್​, ಆನ್​ಲೈನ್​ನಲ್ಲಿ ಪರೀಕ್ಷೆ ನಡೆಸುವುದು ಕಡ್ಡಾಯ.
    • ಅಂತಿಮ ವರ್ಷ, ಸೆಮಿಸ್ಟರ್​ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗುವುದು ಸಾಧ್ಯವಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ನಡೆಸುವ ಪರೀಕ್ಷೆಯಲ್ಲಾದರೂ ಹಾಜರಾಗಲೇ ಬೇಕು. ಇದು 2019-20ನೇ ಸಾಲಿಗಷ್ಟೇ ಅನ್ವಯ.
    • ಪರಿಷ್ಕೃತ ಮಾರ್ಗಸೂಚಿಯ ಒಟ್ಟಾರ್ಥವೆಂದರೆ, ಮುಂದೂಡಿಕೆ ಆಗಿದೆ ಎನ್ನುವುದನ್ನು ಬಿಟ್ಟರೆ ಪರೀಕ್ಷೆ ನಡೆಸುವುದಂತೂ ಖಚಿತ.

    ಕರೊನಾ ಕೊನೆಯಾಗೋದು ಹೇಗೆ? ಲಸಿಕೆ ಸಿಗದಿದ್ದರೆ ಬೇರೆ ದಾರಿ ಏನಿದೆ? ಇಲ್ಲಿದೆ ಕುತೂಹಲಕಾರಿ ವಿಚಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts