More

    ಜಗದೀಶ ಶೆಟ್ಟರ್ ಸಾರಥ್ಯದಲ್ಲಿ ಅದ್ಧೂರಿ ಹುಬ್ಬಳ್ಳಿ ಯುಗಾದಿ ಉತ್ಸವ: ವಿಜಯವಾಣಿ, ದಿಗ್ವಿಜಯ ನ್ಯೂಸ್ ಸಹಯೋಗ

    ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್​ ಅವರ ಎಸ್ಎಸ್ ಶೆಟ್ಟರ್ ಫೌಂಡೇಶನ್ ನೇತೃತ್ವದಲ್ಲಿ ಹಾಗೂ ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ಸಹಯೋಗದ ಯುಗಾದಿ ಉತ್ಸವ ಕಾರ್ಯಕ್ರಮಕ್ಕೆ ಇಂದು (ಮಾ.19) ವಿದ್ಯುಕ್ತ ಚಾಲನೆ ನೀಡಲಾಯಿತು.

    ಮಾಜಿ ಸಿಂ ಜಗದೀಶ ಶೆಟ್ಟರ್, ಕಂಠಪಲ್ಲಿ ಸಮೀರಾಚಾರ್ಯ, ವಿಧಾನ ಪರಿಷತ್​ ಸದಸ್ಯ ಪ್ರದೀಪ್ ಶೆಟ್ಟರ್ ಸೇರಿದಂತೆ ಹಲವು ಗಣ್ಯರು ಯುಗಾದಿ ಉತ್ಸವಕ್ಕೆ ದೀಪ ಬೆಳಗಿಸಿ ಜಾಗಟೆ ಬಾರಿಸುವ ಮೂಲಕ ಚಾಲನೆ ನೀಡಿದರು. ಹುಬ್ಬಳ್ಳಿಯ ಟೆಂಡರ್ ಶ್ಯೂರ್ ರಸ್ತೆಯ ಚೇತನಾ ಕಾಲೇಜು ಪಕ್ಕದಲ್ಲಿ ಯುಗಾದಿ ಉತ್ಸವ ವೇದಿಕೆ ಕಾರ್ಯಕ್ರಮ ನಡೆಯುತ್ತಿದೆ.

    ಚಾಲನೆ ನೀಡಿದ ಬಳಿಕ ಮಾತನಾಡಿದ ಮಾಜಿ ಸಿಎಂ‌ ಜಗದೀಶ ಶೆಟ್ಟರ್, ಈ ಭಾಗದಲ್ಲಿ ದೊಡ್ಡಮಟ್ಟದ ಕಾರ್ಯಕ್ರಮ‌ ಆಯೋಜನೆ‌ ಮಾಡುವ ಕಲ್ಪನೆ ಕಳೆದ ಎರಡು ವರ್ಷಗಳಿಂದ ಇತ್ತು. ಆ ಕಲ್ಪನೆ ಇದೀಗ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಸಹಯೋಗದಲ್ಲಿ ಸಾಕಾರವಾಗಿದೆ. ಈ ಉತ್ಸವ ಕಾರ್ಯಕ್ರಮ ಐತಿಹಾಸಿಕ ಕಾರ್ಯಕ್ರಮವಾಗಿದೆ ಎಂದರು.

    ಇದನ್ನೂ ಓದಿ: VIDEO | ಸ್ನೇಹಿತರೊಂದಿಗೆ ಇನ್‌ಸ್ಟಾಗ್ರಾಮ್‌ ರೀಲ್ಸ್‌ ಮಾಡಲು ಹೋಗಿ ವಿದ್ಯಾರ್ಥಿ ಮೃತ್ಯು

    ನಮ್ಮ ಹಿಂದು ಸಂಪ್ರದಾಯದ ಪ್ರಕಾರ ಯುಗಾದಿ ಹೊಸವರ್ಷವಾಗಿದೆ. ಹಿಂದು ಸಂಪ್ರದಾಯ, ಸಂಸ್ಕೃತಿ ಪರಂಪರೆಯನ್ನು ಯುವ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮದ ನೇತೃತ್ವ ವಹಿಸಿದ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್​ಗೆ ಧನ್ಯವಾದ ತಿಳಿಸುತ್ತೇನೆ. ಹೊಸ ಪರಿಕಲ್ಪನೆಯೊಂದಿಗೆ ಈ ಯುಗಾದಿ ಉತ್ಸವ ಕಾರ್ಯಕ್ರಮ ಆಯೋಜನೆ ಮಾಡಿರುವುದು ಸಂತಸ ತಂದಿದೆ. ಇಂದು ಇಡೀ ದಿನ ಯುಗಾದಿಯ ಉತ್ಸವ ಸಂಭ್ರಮ ಮನೆಮಾಡಿದೆ ಎಂದರು.

    ಇಂದಿನ ಟಿವಿ, ಮೊಬೈಲ್ ಯುಗದಲ್ಲಿ ನಮ್ಮ ಸಂಪ್ರದಾಯ ಸಂಸ್ಕೃತಿ ಮರೆತು ಹೋಗಿದೆ. ಸಂಸ್ಕೃತಿ, ಸಂಪ್ರದಾಯ ಹಾಗೂ ಪರಂಪರೆಯನ್ನು ಮೆಲಕುಹಾಕುವ ಮೂಲಕ ಜನ ನಮ್ಮ ಸಂಪ್ರದಾಯ ಹಬ್ಬಗಳನ್ನು ಸಾಕಾರಗೊಳಿಸಬೇಕಿದೆ. ಸಂಜೆ ವೇಳೆಗೆ ಸಂಗೀತ ರಸಸಂಜೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನ ಇಂದು ಆಯೋಜಿಸಲಾಗಿದೆ. ಈ ಮೂಲಕ ಭಾರತದ ಪರಂಪರೆ, ಸಂಸ್ಕೃತಿಯನ್ನು ಇದೇ ರೀತಿ ಮುಂದುವರೆಸಿಕೊಂಡು ಹೋಗುವುದು ಅವಶ್ಯವಿದೆ ಎಂದು ಹೇಳಿದರು.

    ಯುಗಾದಿ ಉತ್ಸವ ಕಾರ್ಯಕ್ರಮದಲ್ಲಿ ಸಮೀರಾಚಾರ್ಯ ಕಂಠಪಲ್ಲಿ ಅವರಿಂದ ಪ್ರವಚನ ಮಾಡಿದರು. ಇತಿಹಾಸದಲ್ಲಿ‌ ಇದು ಮೊದಲು ಎಂದು ಭಾಸವಾಗುತ್ತಿದೆ. ಯುಗಾದಿಯ ಮೊದಲು ಹಬ್ಬವನ್ನೇ ಸೃಷ್ಟಿ‌ಮಾಡಿದ ಕೀರ್ತಿ ಜಗದೀಶ ಶೆಟ್ಟರ್ ಅವರಿಗೆ ಸಲ್ಲುತ್ತದೆ. ಎಸ್ಎಸ್ ಶೆಟ್ಟರ್ ಫೌಂಡೇಶನ್ ಹಾಗೂ ವಿಜಯವಾಣಿ-ದಿಗ್ವಿಜಯದ‌ ಮೂಲಕ ಆದಿಯಾಗಿ ಮಾಡಿರುವ ಈ ಯುಗಾದಿ ಸಂತಸ ಉಂಟು ಮಾಡಿದೆ. ಮತ್ತೊಮ್ಮೆ ಜಗದೀಶ ಶೆಟ್ಟರ್ ಅವರು ರಾಜ್ಯದ ನೇತಾರರಾಗಬೇಕು ಅನ್ನೋದು ನಮ್ಮ ಆಶಯವಾಗಿದೆ. ಜಗದೀಶ ಶೆಟ್ಟರ್ ಅವರು ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ. ಮುಂದಿನ‌ ದಿನಗಳಲ್ಲಿ ಶೆಟ್ಟರ್ ಅವರಿಂದ ಸಾಕಷ್ಟು ಕ್ರಾಂತಿಗಳಾಗಲಿ ಎಂದು ಹಾರೈಸಿದರು.

    ಈ ಯುಗಾದಿ ನಮಗೆ ಸಾಕಷ್ಟು ಸಂಭ್ರಮ ತಂದಿದೆ. ಬೇವು ಬೆಲ್ಲದ ಮೂಲಕ ನಮಗೆ ಕಷ್ಟ ಸುಖಗಳು ಪ್ರಾಪ್ತಿಯಾಗುತ್ತವೆ. ಇಡೀ ವರ್ಷದುದ್ದಕ್ಕೂ ಪ್ರತಿಯೊಬ್ಬರ ಕುಟುಂಬದಲ್ಲಿ ಯುಗಾದಿಯ ಸಂಭ್ರಮ ಮನೆಮಾಡಲಿ. ಇಂತಹ ಯುಗಾದಿಯ ಸಂತಸದ ದಿನಗಳು ವರ್ಷದುದ್ದಕ್ಕೂ ಮರುಕಳಿಸಲಿ ಎಂದು ಸಮೀರಾಚಾರ್ಯ ಕಂಠಪಲ್ಲಿ ಪ್ರವಚನ ನೀಡಿದರು.

    ಇದನ್ನೂ ಓದಿ: ವಿದ್ಯುತ್ ತಂತಿ ತುಂಡಾಗಿ ಬಿದ್ದು ತಾಯಿ, ಇಬ್ಬರು ಮಕ್ಕಳ ದುರ್ಮರಣ: ಅಕಾಲಿಕ ಮಳೆಗೆ ಚಿಂಚೋಳಿಯಲ್ಲಿ ದುರ್ಘಟನೆ

    ಇದೇ ಕಾರ್ಯಕ್ರಮದಲ್ಲಿ ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮೀಜಿಗಳಿಂದ ಆಶೀರ್ವಚನ ಮಾಡಿದರು. ಈ ಕಾರ್ಯಕ್ರಮ‌ಬಹಳ ಅಪರೂಪದ ಕಾರ್ಯಕ್ರಮವಾಗಿದೆ. ಇದು ಐತಿಹಾಸಿಕ ಕಾರ್ಯಕ್ರಮವನ್ನಾಗಿ ಆಯೋಜಿಸಲಾಗಿದೆ. ಹಬ್ಬಗಳು ಸಾಕಷ್ಟು ಬರುತ್ತವೆ. ಆದರೆ, ಎಲ್ಕ ಹಬ್ಬಗಳಿಗಿಂತ ಆದಿಯಾಗಿ ಬರುವುದೇ ಯುಗಾದಿ ಹಬ್ಬ. ನಿಜವಾದ ಹಾಗೂ ನೈಸರ್ಗಿಕವಾಗಿ ಹೊಸವರ್ಷ ಎಂದರೆ ಅದು ಯುಗಾದಿ ಹಬ್ಬ. ಹುಬ್ಬಳ್ಳಿ ಮಹಾನಗರಕ್ಕೆ ಈ ಕಾರ್ಯಕ್ರಮ ಮೆರಗು ತಂದಿದೆ. ಎಸ್.ಎಸ್. ಶೆಟ್ಟರ್ ಫೌಂಡೇಶನ್ ಹಾಗೂ ವಿಜಯವಾಣಿ-ದಿಗ್ವಿಜಯ ನ್ಯೂಸ್ ಸಹಯೋಗದಲ್ಲಿ ಕಾರ್ಯಕ್ರಮ ಸಾಕಷ್ಟು ಅರ್ಥಪೂರ್ಣವಾಗಿದೆ. ಇಡೀ ದಿನ ಇಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯುತ್ತಿವೆ. ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಈ ಹಬ್ಬ ಆಚರಣೆ ಮಾಡುತ್ತಿರೋದು ವಿಶೇಷವಾಗಿದೆ. ಕಲೆ, ಸಾಂಸ್ಕೃತಿಕ ಹಾಗೂ ಸಂಪ್ರದಾಯವನ್ನು ಸಾರಿ ಸಾರಿ ತಿಳಿಸುತ್ತಿರುವುದು ಸಹ ವಿಶೇಷವಾಗಿದೆ. ಈ ವಿಶೇಷ ಕಾರ್ಯಕ್ರಮಕ್ಕೆ ಕಾರಣೀಕರ್ತರಾದ ಜಗದೀಶ ಶೆಟ್ಟರ್ ಹಾಗೂ ವಿಜಯವಾಣಿ- ದಿಗ್ವಿಜಯ ನ್ಯೂಸ್ ತಂಡಕ್ಕೆ ಅಭಿನಂದನೆಗಳು. ಜನಸಾಮಾನ್ಯರಿಗೆ ಇನ್ನೂ ಹೆಚ್ಚಿನ‌ ಸೇವೆ ಮಾಡುವ ಶಕ್ತಿ ಹಾಗೂ ಅವಕಾಶಗಳನ್ನು ಶೆಟ್ಟರ್ ಅವರಿಗೆ ಒದಗಲಿ ಎಂದು ಶುಭ ಹಾರೈಸಿದರು.(ದಿಗ್ವಿಜಯ ನ್ಯೂಸ್​)

    KSRTC ಬಸ್ ಚಾಲಕನ ಎಡವಟ್ಟು: ಬೈಕ್ ಸವಾರನ ಸಾವಿಗೆ ಕಾರಣವಾಯ್ತು ಮೈ-ಬೆಂ ಹೆದ್ದಾರಿ ಟೋಲ್ ಸಂಗ್ರಹ

    ದೂರವೇ ವರನಿಗೆ ಶಾಪವಾಯ್ತು! ಮದ್ವೆ ಮುಗಿಸಿ ಅತ್ತೆ ಮನೆಗೆ ತೆರಳುವಾಗ ಮಾರ್ಗ ಮಧ್ಯೆ ಶಾಕ್​ ಕೊಟ್ಟ ವಧು

    ಹೆರಿಗೆ ರಜೆಯಲ್ಲಿಯೇ ಪರೀಕ್ಷೆ ತಯಾರಿ ನಡೆಸಿ IPS ಅಧಿಕಾರಿಯಾದ ಐಟಿ ಉದ್ಯೋಗಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts