More

    KSRTC ಬಸ್ ಚಾಲಕನ ಎಡವಟ್ಟು: ಬೈಕ್ ಸವಾರನ ಸಾವಿಗೆ ಕಾರಣವಾಯ್ತು ಮೈ-ಬೆಂ ಹೆದ್ದಾರಿ ಟೋಲ್ ಸಂಗ್ರಹ

    ರಾಮನಗರ: ಬೆಂಗಳೂರು-ಮೈಸೂರು ಹೆದ್ದಾರಿಯ ಟೋಲ್​ ಸಂಗ್ರಹವೇ ಬೈಕ್​​ ಸವಾರನೊಬ್ಬನ ಸಾವಿಗೆ ಕಾರಣವಾಗಿದೆ. ತನ್ನದ್ದಲ್ಲದ ತಪ್ಪಿಗೆ ಅಪಘಾತದಲ್ಲಿ ಬೈಕ್​ ಸವಾರ ಮೃತಪಟ್ಟಿರುವ ಘಟನೆ ಕುಂಬಳಗೂಡು ಬಳಿ ನಡೆದಿದೆ.

    ಟೋಲ್ ಕಟ್ಟಬೇಕಾಗುತ್ತದೆ ಅಂತ ಫ್ಲೈ ಓವರ್ ಮೇಲೆ ಕೆಎಸ್​ಆರ್​ಟಿಸಿ ಬಸ್​ ಒನ್​ವೇನಲ್ಲಿ ಬರುತ್ತಿತ್ತು, ಈ ವೇಳೆ ನಿಯಂತ್ರಣ ತಪ್ಪಿ ಬೈಕ್​ ಸವಾರ ಬಸ್​ಗೆ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮತ್ತೊಬ್ಬನಿಗೆ ಗಂಭೀರ ಗಾಯವಾಗಿದೆ. ಕಣಿಮಿಣಿಕ ಟೋಲ್ ಬಳಿ ಬಂದು ಟೋಲ್ ಕಟ್ಟಲು ನಿರಾಕರಿಸಿ ವಾಪಸ್ ಒನ್​ವೇನಲ್ಲಿ ಕೆಎಸ್ಆರ್​ಟಿಸಿ ಬಸ್ ತೆರಳುವಾಗ ಅವಘಡ ಸಂಭವಿಸಿದೆ.

    ಇದನ್ನೂ ಓದಿ: ಹೆರಿಗೆ ರಜೆಯಲ್ಲಿಯೇ ಪರೀಕ್ಷೆ ತಯಾರಿ ನಡೆಸಿ IPS ಅಧಿಕಾರಿಯಾದ ಐಟಿ ಉದ್ಯೋಗಿ!

    ಬಸ್​ ಬೆಂಗಳೂರಿನಿಂದ ಮೈಸೂರಿಗೆ ಹೊರಟಿತ್ತು. ಕುಂಬಳಗೂಡು ಬಳಿಯೇ ಅಪಘಾತ ಸಂಭವಿಸಿದೆ. ಬೆಂಗಳೂರು ಟು ಮೈಸೂರು ಹೈವೇ ಯಮಸ್ವರೂಪಿಯಾಯ್ತಾ ಎನ್ನುವ ಆತಂಕ ಮೂಡತೊಡಗಿದೆ. ಮಳೆ ಬಂದ್ರೂ ಸಮಸ್ಯೆ, ವಾಹನ ಓಡಾಡೋಕೂ ಸಮಸ್ಯೆಯಾಗಿದೆ. ಅಪಘಾತಗಳ ಸಂಖ್ಯೆಯು ಹೆಚ್ಚುತ್ತಿವೆ.

    ಇಂದು ಕೂಡ ಪ್ರತಿಭಟನೆ
    ಇನ್ನು ಟೋಲ್ ಸಂಗ್ರಹ ವಿರೋಧಿಸಿ ಹಾಗೂ ಮೂಲ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ರೈತ ಪರ ಸಂಘಟನೆಗಳು ಇಂದು ಪ್ರತಿಭಟನೆ ನಡೆಸಿದವು. ರಾಮನಗರ ತಾಲ್ಲೂಕಿನ ಶೇಷಗಿರಿಹಳ್ಳಿ ಟೋಲ್ ಪ್ಲಾಜಾ ಮುಂಭಾಗ ಪ್ರತಿಭಟನೆ ಮಾಡಿದರು. ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಸೂಕ್ತ ಸರ್ವಿಸ್ ರಸ್ತೆ ಕಲ್ಪಿಸಿ ಟೋಲ್ ಸಂಗ್ರಹಿಸುವಂತೆ ಆಗ್ರಹಿಸಿದರು. (ದಿಗ್ವಿಜಯ ನ್ಯೂಸ್​)

    VIDEO | ಸ್ನೇಹಿತರೊಂದಿಗೆ ಇನ್‌ಸ್ಟಾಗ್ರಾಮ್‌ ರೀಲ್ಸ್‌ ಮಾಡಲು ಹೋಗಿ ವಿದ್ಯಾರ್ಥಿ ಮೃತ್ಯು

    ಜನನಿಬಿಡ ರಸ್ತೆಯಲ್ಲೇ ಮಹಿಳೆಗೆ ಥಳಿಸಿ, ಕ್ಯಾಬ್​ ಒಳಗೆ ನೂಕಿ ಪರಾರಿ! ಸುಮ್ಮನೆ ನೋಡುತ್ತಾ ನಿಂತಿದ್ದ ಜನರು​

    ವಿದ್ಯುತ್ ತಂತಿ ತುಂಡಾಗಿ ಬಿದ್ದು ತಾಯಿ, ಇಬ್ಬರು ಮಕ್ಕಳ ದುರ್ಮರಣ: ಅಕಾಲಿಕ ಮಳೆಗೆ ಚಿಂಚೋಳಿಯಲ್ಲಿ ದುರ್ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts