ದೂರವೇ ವರನಿಗೆ ಶಾಪವಾಯ್ತು! ಮದ್ವೆ ಮುಗಿಸಿ ಅತ್ತೆ ಮನೆಗೆ ತೆರಳುವಾಗ ಮಾರ್ಗ ಮಧ್ಯೆ ಶಾಕ್​ ಕೊಟ್ಟ ವಧು

ಲಖನೌ: ಉತ್ತರ ಪ್ರದೇಶದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ವಧು-ವರರಿಬ್ಬರು ಅವರವರ ಕುಟುಂಬಸ್ಥರು ಮತ್ತು ಸಂಬಂಧಿಕರ ಸಮ್ಮುಖದಲ್ಲಿ ಅದ್ಧೂರಿಯಾಗಿ ವಿವಾಹವಾದರು. ಎಲ್ಲವೂ ಅಂದುಕೊಂಡಂತೆ ನಡೆಯಿತ್ತಲ್ಲ ಎಂಬ ಖುಷಿಯಲ್ಲಿರುವಾಗಲೇ ವಧು ತನ್ನ ವಿಚಿತ್ರ ನಿರ್ಧಾರದಿಂದ ಎಲ್ಲರಿಗೂ ಶಾಕ್​ ನೀಡಿದ್ದಾಳೆ. ಅಂಥದ್ದೇನಾಯಿತು ಅಂದರೆ, ಮದುವೆಯಾದ ಬಳಿಕ ವಧು ಅತ್ತೆ ಮನೆಗೆ ತೆರಳುವುದು ವಾಡಿಕೆ. ಆದರೆ, ವಧು ತಾನು ಅತ್ತೆ ಮನೆಗೆ ಹೋಗುವುದಿಲ್ಲ ಅಂತಾ ಪಟ್ಟು ಹಿಡಿದಿದ್ದಾಳೆ. ಅತ್ತೆ ಮನೆ ತುಂಬಾ ದೂರ ಇರುವುದೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ. ಈ ಸುದ್ದಿ … Continue reading ದೂರವೇ ವರನಿಗೆ ಶಾಪವಾಯ್ತು! ಮದ್ವೆ ಮುಗಿಸಿ ಅತ್ತೆ ಮನೆಗೆ ತೆರಳುವಾಗ ಮಾರ್ಗ ಮಧ್ಯೆ ಶಾಕ್​ ಕೊಟ್ಟ ವಧು