More

    ದೂರವೇ ವರನಿಗೆ ಶಾಪವಾಯ್ತು! ಮದ್ವೆ ಮುಗಿಸಿ ಅತ್ತೆ ಮನೆಗೆ ತೆರಳುವಾಗ ಮಾರ್ಗ ಮಧ್ಯೆ ಶಾಕ್​ ಕೊಟ್ಟ ವಧು

    ಲಖನೌ: ಉತ್ತರ ಪ್ರದೇಶದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ವಧು-ವರರಿಬ್ಬರು ಅವರವರ ಕುಟುಂಬಸ್ಥರು ಮತ್ತು ಸಂಬಂಧಿಕರ ಸಮ್ಮುಖದಲ್ಲಿ ಅದ್ಧೂರಿಯಾಗಿ ವಿವಾಹವಾದರು. ಎಲ್ಲವೂ ಅಂದುಕೊಂಡಂತೆ ನಡೆಯಿತ್ತಲ್ಲ ಎಂಬ ಖುಷಿಯಲ್ಲಿರುವಾಗಲೇ ವಧು ತನ್ನ ವಿಚಿತ್ರ ನಿರ್ಧಾರದಿಂದ ಎಲ್ಲರಿಗೂ ಶಾಕ್​ ನೀಡಿದ್ದಾಳೆ.

    ಅಂಥದ್ದೇನಾಯಿತು ಅಂದರೆ, ಮದುವೆಯಾದ ಬಳಿಕ ವಧು ಅತ್ತೆ ಮನೆಗೆ ತೆರಳುವುದು ವಾಡಿಕೆ. ಆದರೆ, ವಧು ತಾನು ಅತ್ತೆ ಮನೆಗೆ ಹೋಗುವುದಿಲ್ಲ ಅಂತಾ ಪಟ್ಟು ಹಿಡಿದಿದ್ದಾಳೆ. ಅತ್ತೆ ಮನೆ ತುಂಬಾ ದೂರ ಇರುವುದೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಂಪೂರ್ಣ ವಿವರ ಮುಂದಿದೆ ಓದಿ.

    ಇದನ್ನೂ ಓದಿ: ವಿದ್ಯುತ್ ತಂತಿ ತುಂಡಾಗಿ ಬಿದ್ದು ತಾಯಿ, ಇಬ್ಬರು ಮಕ್ಕಳ ದುರ್ಮರಣ: ಅಕಾಲಿಕ ಮಳೆಗೆ ಚಿಂಚೋಳಿಯಲ್ಲಿ ದುರ್ಘಟನೆ

    ಉತ್ತರ ಪ್ರದೇಶದ ಬನಾರಸ್ ನಿವಾಸಿಯಾಗಿರುವ ವೈಷ್ಣವಿ, ರಾಜಸ್ಥಾನದ ಬಿಕಾನೇರ್ ಗ್ರಾಮದ ರವಿ ಎಂಬುವವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ರವಿ ಮೆರವಣಿಗೆಯಲ್ಲಿ ಬಂದು ಬನಾರಸ್ ನ್ಯಾಯಾಲಯದಲ್ಲಿ ಯುವತಿಯನ್ನು ಮದುವೆಯಾದನು. ಬಳಿಕ ವಧುವಿನ ಹಸ್ತಾಂತರ ಸಮಾರಂಭದ ನಂತರ, ವಧು ತನ್ನ ಅತ್ತೆ ಮನೆಗೆ ತೆರಳಿದಳು. ವಧು ಮತ್ತು ವರನ ಕುಟುಂಬ ಸದಸ್ಯರು ಇನ್ನಾವೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಏಳು ಗಂಟೆಗಳ ಪ್ರಯಾಣದ ನಂತರ ಕಾನ್ಪುರದ ಸರ್ಸಲ್ ಪ್ರದೇಶವನ್ನು ಕಾರು ತಲುಪಿತು. ಅಷ್ಟೊತ್ತಿಗೆ 400 ಕಿಲೋಮೀಟರ್ ಪ್ರಯಾಣ ಪೂರ್ಣಗೊಂಡಿತ್ತು.

    ಇನ್ನು ಎಷ್ಟು ಕಿಲೋಮೀಟರ್ ಪ್ರಯಾಣಿಸಬೇಕು ಅಂತ ವಧು, ವರನ ಕುಟುಂಬಸ್ಥರನ್ನು ಕೇಳಿದ್ದಾಳೆ. ಒಟ್ಟು 1300 ಕಿ.ಮೀ ದೂರವಿದ್ದು ಇನ್ನೂ 900 ಕಿ.ಮೀ ಪ್ರಯಾಣಿಸಬೇಕಿದೆ ಎಂದು ಹೇಳಿದ್ದಾರೆ. ಇದರಿಂದ ವಧು ಹೆದರಿದ್ದಾಳೆ. ಸರ್ಸಾಲ್‌ನ ದೂದ್ಮಾತಾ ಪೆಟ್ರೋಲ್ ಪಂಪ್ ಬಳಿ ಇನ್ನಾವೋ ಕಾರನ್ನು ನಿಲ್ಲಿಸಿ ವರ ಮತ್ತು ಅವರ ಕುಟುಂಬ ಸದಸ್ಯರು ಉಪಾಹಾರಕ್ಕೆ ತೆರಳಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಮನಸ್ಸು ಬದಲಿಸಿದ ವಧು, ನಾನು ಅತ್ತೆ ಮನೆಗೆ ಹೋಗುವುದಿಲ್ಲ ಅಂತ ಅಳುತ್ತಿದ್ದಳು. ಅಲ್ಲೇ ಇದ್ದ ಪೊಲೀಸ್ ಸ್ಪಂದನಾ ವಾಹನ ಸಿಬ್ಬಂದಿ ವಧು ಅಳುತ್ತಿರುವುದನ್ನು ಕಂಡು ಆಕೆಯ ಬಳಿ ಹೋಗಿದ್ದಾರೆ. ವಿಷಯ ತಿಳಿದ ನಂತರ ಮಹಾರಾಜಪುರ ಪೊಲೀಸರಿಗೆ ಮಾಹಿತಿ ನೀಡಿದರು.

    ಇದನ್ನೂ ಓದಿ: ಬೀದರ್​ನಲ್ಲಿ ವರುಣನ ಆರ್ಭಟ: ಆಲಿಕಲ್ಲು ಮಳೆಗೆ ಜನಜೀವನ ಅಸ್ತವ್ಯಸ್ತ, ಕಾಶ್ಮೀರವಾಗಿ ಬದಲಾದ ಬೀದರ್​

    ಮಹಾರಾಜಪುರ ಪೊಲೀಸರು ಸ್ಥಳಕ್ಕಾಗಮಿಸಿ ವಧುವಿನ ಬಳಿ ವಿವರ ಕೇಳಿದರು. ಆದರೆ, ವರನ ಕುಟುಂಬಸ್ಥರು ಮದುವೆಯಾಗಿದ್ದು ಮನೆಗೆ ಹೋಗುತ್ತಿದ್ದೇವೆ ಎಂದು ತಿಳಿಸಿದರು. ಆದರೆ, ಯುವತಿ ಜೋರಾಗಿ ಅಳುತ್ತಾ ಮದುವೆಯನ್ನು ರದ್ದು ಮಾಡುವಂತೆ ಪೊಲೀಸರಿಗೆ ಮನವಿ ಮಾಡಿದಳು. ವಧುವಿನ ತಾಯಿಗೆ ವಿಷಯ ತಿಳಿಸಿದಾಗ ಅವರು ಕೂಡ ಮಗಳ ಬೆಂಬಲಕ್ಕೆ ನಿಂತರು. ಮದುವೆಯನ್ನು ರದ್ದು ಮಾಡಿ ಮಗಳನ್ನು ವಾಪಸ್​ ಕಳುಹಿಸುವಂತೆ ತಿಳಿಸಿದರು. ಪೊಲೀಸರು ವಧುವನ್ನು ಉತ್ತರ ಪ್ರದೇಶದ ಆಕೆಯ ಸ್ವಗ್ರಾಮಕ್ಕೆ ಕಳುಹಿಸಿದ್ದಾರೆ. ಇತ್ತ ಬೇರೆ ದಾರಿಯಿಲ್ಲದೆ ವರ ಮತ್ತು ಅವರ ಕುಟುಂಬ ತಮ್ಮ ವಾಹನಗಳಲ್ಲಿ ಬರಿಗೈಯಲ್ಲಿ ರಾಜಸ್ಥಾನಕ್ಕೆ ಹಿಂತಿರುಗಬೇಕಾಯಿತು. (ಏಜೆನ್ಸೀಸ್​)

    ಹೆರಿಗೆ ರಜೆಯಲ್ಲಿಯೇ ಪರೀಕ್ಷೆ ತಯಾರಿ ನಡೆಸಿ IPS ಅಧಿಕಾರಿಯಾದ ಐಟಿ ಉದ್ಯೋಗಿ!

    ಕಣ್ಣಿಗೊಂದು ಸವಾಲ್​: ಸಾಧ್ಯವಾದ್ರೆ 10 ಸೆಕೆಂಡ್​ನಲ್ಲಿ ಬಾವಲಿಗಳ ಮಧ್ಯೆ ಇರುವ ಬೆಕ್ಕು ಪತ್ತೆ ಹಚ್ಚಿ!

    ಜನನಿಬಿಡ ರಸ್ತೆಯಲ್ಲೇ ಮಹಿಳೆಗೆ ಥಳಿಸಿ, ಕ್ಯಾಬ್​ ಒಳಗೆ ನೂಕಿ ಪರಾರಿ! ಸುಮ್ಮನೆ ನೋಡುತ್ತಾ ನಿಂತಿದ್ದ ಜನರು​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts