More

    5 ದಿನಗಳಿಂದ ಮಹಿಳೆ ಅತಂತ್ರ, ನ್ಯಾಯಧೀಶರ ಸೂಚನೆ ಬಳಿಕ ಸಿಕ್ಕ ಆಶ್ರಯ

    ಉಡುಪಿ: ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಸಹಕಾರದಿಂದಾಗಿ ನೊಂದ ಮಹಿಳೆಯೊಬ್ಬರು ಅತಂತ್ರರಾಗಿದ್ದು, ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ನ್ಯಾಯಾಧೀಶೆ ಕಾವೇರಿ ಅವರ ಸೂಚನೆಯಂತೆ ಸಖಿ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ.

    ಲೋಕೇಶ್ವರಿ ಎಂಬ ಬೆಂಗಳೂರಿನ ಮಹಿಳೆಯನ್ನು ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ಆಗಸ್ಟ್ 7ರಂದು ನಗರದ ಬಸ್ ನಿಲ್ದಾಣದಲ್ಲಿ ರಕ್ಷಣೆ ಮಾಡಿದ್ದರು. ಮಹಿಳೆಗೆ ನೆಲೆ ಸಿಗದ ಕಾರಣ ತುರ್ತಾಗಿ ಬಾಳಿಗಾ ಆಸ್ಪತ್ರೆಗೆ ದಾಖಲು ಮಾಡಿದ್ದರು. ಐದು ದಿನವಾದರೂ ಇಲಾಖೆ ಅಧಿಕಾರಿಗಳು ಮಹಿಳೆ ಬಗ್ಗೆ ಸಮಾಲೋಚನೆ, ತನಿಖೆ ಪ್ರಕ್ರಿಯೆ ನಡೆಸಿಲ್ಲ. ಬಳಿಕ ಕಾನೂನು ಪ್ರಾಧಿಕಾರದ ಗಮನಕ್ಕೆ ಇದನ್ನು ತರಲಾಯಿತು.

    ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ನ್ಯಾಯಾಧೀಶೆ ಕಾವೇರಿ ಅವರು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ ಸಖಿ ಕೇಂದ್ರದಲ್ಲಿ ಇರಿಸಲು ವ್ಯವಸ್ಥೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆ ಬಾರದಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಧೀಶೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.

    ಮಹಿಳೆಗೆ ಕರೊನಾ ರ‌್ಯಾಪಿಡ್ ಪರೀಕ್ಷೆ ವೇಳೆ ನೆಗೆಟಿವ್ ಬಂದಿತ್ತು. ಮಹಿಳೆಯ ರಕ್ಷಣೆ ಆಗದೆ ಆರೋಗ್ಯವಂತ ಮಹಿಳೆ ಆಸ್ಪತ್ರೆಯಲ್ಲೇ ಇದ್ದರು. ನ್ಯಾಯಧೀಶೆ ಕಾವೇರಿ ಅವರ ಸಹಕಾರದಿಂದ ಆ.12ರಂದು ಸಖಿ ಒನ್-ಸ್ಟಾಪ್ ಸೆಂಟರ್‌ನಲ್ಲಿ ಮಹಿಳೆಗೆ ಆಶ್ರಯ ಸಿಕ್ಕಿದೆ ಎಂದು ವಿಶು ಶೆಟ್ಟಿ ಅಂಬಲಪಾಡಿ ವಿಜಯವಾಣಿಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts