More

    ಉಡುಪಿಯಲ್ಲಿ ಗರಿಷ್ಟ ಸೋಂಕು, ರಾಜ್ಯದಲ್ಲಿ ಎರಡನೇ ಸ್ಥಾನಕ್ಕೇರಿದ ಕೃಷ್ಣ ನಗರಿ

    ಉಡುಪಿ: ಜಿಲ್ಲೆಯಲ್ಲಿ ಬುಧವಾರ 281 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಬಹುದಿನಗಳ ನಂತರ ಒಂದೇ ದಿನ ಗರಿಷ್ಟ ಪ್ರಮಾಣದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಕಂಡುಬಂದಿದ್ದು, ಬೆಂಗಳೂರು ನಗರ ನಂತರ ರಾಜ್ಯದಲ್ಲಿ ಉಡುಪಿ 2ನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ.

    ಜಿಲ್ಲೆಯಲ್ಲಿ ಜೂ.5ರಂದು ಈವರೆಗಿನ ಅತ್ಯಧಿಕ (204) ಪಾಸಿಟಿವ್ ಪ್ರಕರಣ ದಾಖಲಾಗಿ, ರಾಜ್ಯದಲ್ಲೇ ಪ್ರಥಮ ಸ್ಥಾನಕ್ಕೇರಿತ್ತು. ಬುಧವಾರ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ 2686ಕ್ಕೆ ಏರಿದೆ. 135 ಮಂದಿಯ ವರದಿ ನೆಗೆಟಿವ್ ಬಂದಿದೆ. 467 ಮಂದಿಯ ವರದಿ ನಿರೀಕ್ಷಿಸಲಾಗುತ್ತಿದೆ.

    160 ಪುರುಷರು, 100 ಮಹಿಳೆಯರು, ಹೆಣ್ಮಕ್ಕಳು 10, ಗಂಡು ಮಕ್ಕಳು 11 ಮಂದಿಗೆ ಸೋಂಕು ತಗುಲಿದೆ. ಉಡುಪಿಯಲ್ಲಿ 138 ಮಂದಿ, ಕುಂದಾಪುರದಲ್ಲಿ 118, ಕಾರ್ಕಳದಲ್ಲಿ 25 ಮಂದಿ ವಿವಿಧ ಆಸ್ಪತ್ರೆಗೆ ದಾಖಲಾಗಿದ್ದಾರೆ. 34 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, 899 ಸಕ್ರಿಯ ಪ್ರಕರಣಗಳಿವೆ. ಇದರಲ್ಲಿ 395 ಮಂದಿಗೆ ಹೋಂ ಐಸೋಲೇಶನ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    3 ಸಾರಿ, ಕೋವಿಡ್ ಶಂಕಿತ 31, ಕೋವಿಡ್ ಪ್ರಾಥಮಿಕ ಸಂಪರ್ಕದ 250, ಅನಾರೋಗ್ಯ ಪೀಡಿತ 61, ಹಾಟ್‌ಸ್ಪಾಟ್‌ಗೆ ಭೇಟಿ ನೀಡಿದ 57 ಮಂದಿ ಸೇರಿದಂತೆ ಒಟ್ಟು 402 ಮಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 11 ಸೋಂಕಿತರು ಮೃತಪಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts