More

    ಊಬರ್​ನಲ್ಲಿ ಇಂತದ್ದನ್ನೂ ಬಿಟ್ಟು ಹೋಗುತ್ತಾರಾ? ಶಾಕಿಂಗ್​ ಆಗಿದೆ ಊಬರ್​ ನೀಡಿರುವ ಮಾಹಿತಿ

    ನವದೆಹಲಿ: ಎಲ್ಲಿಗಾದರೂ ಹೋಗಬೇಕೆಂದರೆ ಮೊದಲು ಮಾಡುವ ಕೆಲಸ ಕ್ಯಾಬ್​ ಬುಕ್​ ಮಾಡುವುದು. ಆದರೆ ನಮ್ಮ ನೆನಪಿನ ಶಕ್ತಿ ಎಷ್ಟರ ಮಟ್ಟಿಗಿದೆಯೆಂದರೆ ಕಾರಿನಿಂದ ಇಳಿಯುವಾಗ ಏನಾದರೂ ವಸ್ತು ಬಿಟ್ಟು ಬಂದು ಬಿಡುತ್ತೇವೆ. ಸ್ವಲ್ಪ ಸಮಯದ ನಂತರ ಅಯ್ಯೋ ನಾನು ಅದನ್ನು ಕಾರಿನಲ್ಲೇ ಮರೆತು ಬಿಟ್ಟೆ ಎಂದುಕೊಳ್ಳುತ್ತಾ ಮತ್ತೆ ಡ್ರೈವರ್​ಗೆ ಕರೆ ಮಾಡುತ್ತೇವೆ. ಇಂತಹ ಮರೆಗುಳಿಗಳ ಸಂಖ್ಯೆಯನ್ನು ನೆನಪಿನಲ್ಲಿಟ್ಟಿರುವ ಊಬರ್​, ಈ ವರ್ಷ ಯಾವ ನಗರದ ಜನರು ಹೆಚ್ಚು ವಸ್ತುವನ್ನು ಕಾರಿನಲ್ಲಿ ಮರೆತು ಬಿಟ್ಟಿದ್ದರು ಎನ್ನುವ ವರದಿಯನ್ನು ಸಿದ್ಧಪಡಿಸಿದೆ.

    ಊಬರ್​ ನೀಡಿರುವ ವರದಿಯ ಪ್ರಕಾರ ಮುಂಬೈ ನಗರದ ಅತೀ ಹೆಚ್ಚು ಜನ ಈ ವರ್ಷ ಕಾರುಗಳಲ್ಲಿ ವಸ್ತುಗಳನ್ನು ಬಿಟ್ಟು ಹೋಗಿದ್ದರಂತೆ. ಕಳೆದ ನಾಲ್ಕು ವರ್ಷಗಳಿಂದ ಊಬರ್​ ಈ ರೀತಿಯ ವರದಿಯನ್ನು ನೀಡುತ್ತಾ ಬಂದಿದ್ದು ಇದೇ ಮೊದಲನೇ ಬಾರಿಗೆ ಮುಂಬೈ ಮೊದಲನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಮರೆಗುಳಿಗಳ ಪೈಕಿ ಕೊಲ್ಕತ್ತಾ ಮತ್ತು ಪ್ರಯೋಗ್​ರಾಜ್​ ನಗರ ಎರಡು ಮತ್ತು ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

    ಯಾವಾಗಲೂ ಕೈನಲ್ಲೇ ಹಿಡಿದು ಓಡಾಡುವ ಮೊಬೈಲ್​ ಫೋನ್​ಗಳನ್ನೇ ಅತೀ ಹೆಚ್ಚು ಜನರು ಕಾರಿನಲ್ಲಿ ಬಿಟ್ಟು ಹೋಗಿದ್ದರು ಎನ್ನುವ ಮಾಹಿತಿಯನ್ನೂ ಸಹ ಊಬರ್​ ಹಂಚಿಕೊಂಡಿದೆ. ಕ್ಯಾಮೆರಾ, ಲ್ಯಾಪ್​ಟಾಪ್​, ಸನ್​ಗ್ಲಾಸ್​ನಂತಹ ವಸ್ತುಗಳನ್ನು ಹೆಚ್ಚು ಜನರು ಮರೆಯುತ್ತಾರೆ ಎನ್ನುವುದು ವರದಿಯಿಂದ ತಿಳಿದುಬಂದಿದೆ.

    ವಿಶೇಷವೆನ್ನುವಂತೆ ಜನರು ಮರೆಯುವ ಅತೀ ಅಸಾಮಾನ್ಯ ವಸ್ತುಗಳನ್ನೂ ಸಹ ಊಬರ್​ ಪಟ್ಟಿ ಮಾಡಿದೆ. 20 ಸಾಮಾಗ್ರಿಗಳನ್ನು ಪಟ್ಟಿ ಮಾಡಲಾಗಿದ್ದು, ಅದನ್ನು ಕೇಳಿದರೆ ಜನರು ಹೀಗೂ ಉಂಟೆ ಎಂದು ನಗುವಂತಿದೆ. ತಮ್ಮ ಕೃತಕ ಹಲ್ಲಿನ ಕ್ಯಾಪ್​, ತಮ್ಮ ಮನೆಯ ಎಸಿಯ ರಿಮೋಟ್​, ಮಾವಿನಹಣ್ಣು, ಔಷಧಿಗಳು, ಇಂಜೆಕ್ಷನ್​ ಬಾಕ್ಸ್​, ಆಟಿಕೆಗಳನ್ನೂ ಸಹ ಜನರು ಮರೆತು ಬಿಟ್ಟುಹೋಗುತ್ತಾರಂತೆ. ಸಾಮಾನ್ಯವಾಗಿ ಗುರುವಾರ ಮತ್ತು ಶುಕ್ರವಾರದಂದೇ ಹೆಚ್ಚು ಜನರು ಮರೆಯುತ್ತಾರೆ ಎಂದು ಸಂಸ್ಥೆಯ ವರದಿಯಲ್ಲಿ ತಿಳಿಸಿದೆ. (ಏಜೆನ್ಸೀಸ್​)

    ಎಲೆಕ್ಟ್ರಿಕ್​ ಕಾರು ತಯಾರಿಸುತ್ತಿದ್ದ ಸಂಸ್ಥೆ ಇದೀಗ ವಿಶ್ವದ ನಂ.1 ಮಾಸ್ಕ್​ ಉತ್ಪಾದನಾ ಸಂಸ್ಥೆ: ಕರೊನಾಕ್ಕಾಗಿ ಕೆಲಸವೇ ಬದಲಾವಣೆ

    ಐಪಿಎಲ್​ ಮುಂದೂಡಿದ ಬೆನ್ನಲ್ಲೇ ಭಾರತ-ಆಫ್ರಿಕಾ ನಡುವಿನ ಏಕದಿನ ಸರಣಿಗೂ ಕರೊನಾ ಕಂಟಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts