More

    ಎಲೆಕ್ಟ್ರಿಕ್​ ಕಾರು ತಯಾರಿಸುತ್ತಿದ್ದ ಸಂಸ್ಥೆ ಇದೀಗ ವಿಶ್ವದ ನಂ.1 ಮಾಸ್ಕ್​ ಉತ್ಪಾದನಾ ಸಂಸ್ಥೆ: ಕರೊನಾಕ್ಕಾಗಿ ಕೆಲಸವೇ ಬದಲಾವಣೆ

    ವುಹಾನ್​: ಚೀನಾ ಕರೊನಾ ವೈರಸ್​ನಿಂದಾಗಿ ತತ್ತರಿಸಿದೆ. ದೇಶದಲ್ಲಿ 3000ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಕಾಯಿಲೆ ಇದೀಗ ಬೇರೆ ಬೇರೆ ದೇಶಗಳಿಗೂ ಹಬ್ಬಿದೆ. ಆದರೆ ಎಲ್ಲ ಸಮಸ್ಯೆಯನ್ನೂ ಧೈರ್ಯದಿಂದ ಎದುರಿಸುವ ಚೀನಾದಲ್ಲಿ ಎಲೆಕ್ಟ್ರಿಕ್​ ಸಾಮಾಗ್ರಿಗಳನ್ನು ತಯಾರಿಸುತ್ತಿದ್ದ ಸಂಸ್ಥೆಯೊಂದು ಕರೊನಾ ವೈರಸ್​ನಿಂದಾಗಿ ತನ್ನ ಕೆಲಸವನ್ನೇ ಬದಲಾಯಿಸಿಕೊಂಡಿದ್ದು, ಅದೀಗ ವಿಶ್ವದ ನಂಬರ್​ 1 ಮಾಸ್ಕ್​ ತಯಾರಕ ಸಂಸ್ಥೆಯಾಗಿ ಹೊರಹೊಮ್ಮಿದೆ.

    ಚೀನಾದ ಬಿವೈಡಿ ಸಂಸ್ಥೆ 1995ರಲ್ಲಿ ಆರಂಭವಾಗಿದ್ದು ಅಂದಿನಿಂದ ಎಲೆಕ್ಟ್ರಿಕ್​, ಬೈಕ್​, ಕಾರು ಸೇರಿದಂತೆ ಅನೇಕ ಎಲೆಕ್ಟ್ರಿಕ್​ ಸಾಮಾಗ್ರಿಗಳ ತಯಾರಿಕೆಯಲ್ಲಿ ತೊಡಗಿಕೊಂಡಿತ್ತು. ದೇಶದಲ್ಲಿ ಕರೊನಾ ವೈರಸ್​ ಪತ್ತೆಯಾಗುತ್ತಿದ್ದಂತೆ ಜಾಣತನ ತೋರಿದ ಸಂಸ್ಥೆಯ ಮಾಲೀಕ ವಾರೆನ್​ ಬಫೆಟ್​ ಎಲೆಕ್ಟ್ರಿಕ್​ ಸಾಮಾಗ್ರಿಗಳ ಬದಲಾಗಿ ಮಾಸ್ಕ್​ ತಯಾರಿಸಲು ಮುಂದಾಗಿದ್ದಾರೆ. ಮಾಸ್ಕ್​ ತಯಾರಿಕೆಯಲ್ಲಿ ತೊಡಗಿಕೊಂಡ ಸಂಸ್ಥೆ ಒಂದು ದಿನಕ್ಕೆ 54.8 ಮಿಲಿಯನ್​ ಮಾಸ್ಕ್​ಗಳನ್ನು ತಯಾರಿಸುತ್ತಿದೆ. ಇದರಿಂದಾಗಿ ಮಾಸ್ಕ್​ ತಯಾರಿಸಲು ಆರಂಭಿಸಿ ಕೇವಲ ಒಂದು ತಿಂಗಳೊಳಗಾಗಿ ತಾವು ವಿಶ್ವದ ನಂಬರ್​ 1 ಮಾಸ್ಕ್​ ತಯಾರಕ ಸಂಸ್ಥೆಯಾಗಿದ್ದೇವೆ ಎಂದು ಸಂಸ್ಥೆ ಹೇಳಿಕೊಂಡಿದೆ.

    ಬಿವೈಡಿ ಸಂಸ್ಥೆ ಈ ರೀತಿಯಲ್ಲಿ ತಕ್ಷಣದ ಅವಶ್ಯಕತೆಗೆ ಹೊಂದುಕೊಳ್ಳುವಂತೆ ಕೆಲಸವನ್ನು ಮಾಡುತ್ತಾ ಬಂದಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ. ಕೇವಲ ಬಿವೈಡಿ ಮಾತ್ರವಲ್ಲದೆ ಚೀನಾದ ಅನೇಕ ಸಂಸ್ಥೆಗಳು ಆಯಾ ಸಮಯದ ಅಗತ್ಯತೆಗೆ ತಕ್ಕಂತೆ ತಮ್ಮ ಕೆಲಸವನ್ನು ಬದಲಿಸಿಕೊಳ್ಳಬಲ್ಲ ಸಾಮರ್ಥ್ಯವನ್ನು ಹೊಂದಿರುವುದು ವಿಶೇಷ. (ಏಜೆನ್ಸೀಸ್​)

    ಮಧ್ಯಪ್ರದೇಶದ ಕಮಲ್​ನಾಥ್​ ಸರ್ಕಾರಕ್ಕೆ ವರವಾಗಲಿದೆಯೇ ಕರೊನಾ ವೈರಸ್​ ಭೀತಿ?

    ಕೈಗೆ ಕೈಕೊಟ್ಟು ಕಮಲ ಹಿಡಿದು ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಜ್ಯೋತಿರಾದಿತ್ಯ ಸಿಂಧಿಯಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts