ಐಪಿಎಲ್​ ಮುಂದೂಡಿದ ಬೆನ್ನಲ್ಲೇ ಭಾರತ-ಆಫ್ರಿಕಾ ನಡುವಿನ ಏಕದಿನ ಸರಣಿಗೂ ಕರೊನಾ ಕಂಟಕ

ನವದೆಹಲಿ: ಪ್ರಸ್ತುತ ನಡೆಯಬೇಕಿದ್ದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿಯನ್ನು ಕರೊನಾ ವೈರಸ್​ ಭೀತಿ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿದೆ. ಈಗಾಗಲೇ ಐಪಿಎಲ್​ ಪಂದ್ಯಾವಳಿಯನ್ನು ಏಪ್ರಿಲ್​ 15ರವರೆಗೆ ಮುಂದೂಡಲಾಗಿದೆ. ಗುರುವಾರ ಹಿಮಾಚಲ ಪ್ರದೇಶದಲ್ಲಿ ನಡೆಯಬೇಕಿದ್ದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲನೇ ಪಂದ್ಯವು ನಿರಂತರ ಮಳೆಯಿಂದಾಗಿ ರದ್ದಾಯಿತು. ಇನ್ನುಳಿದ ಎರಡು ಪಂದ್ಯಗಳನ್ನು ಆರೋಗ್ಯ ಸಚಿವಾಲಯ ನೀಡಿರುವ ಸಲಹೆ ಮೇರೆಗೆ ರದ್ದು ಪಡಿಸಲಾಗಿದೆ. ಜನಸಮೂಹ ಸೇರುವಂತಹ ಯಾವುದೇ ಕಾರ್ಯಕ್ರಮಗಳನ್ನು ನಡೆಸಬಾರದು ಎಂದು ಆರೋಗ್ಯ ಸಚಿವಾಲಯ ಸಲಹೆ ನೀಡಿದೆ. … Continue reading ಐಪಿಎಲ್​ ಮುಂದೂಡಿದ ಬೆನ್ನಲ್ಲೇ ಭಾರತ-ಆಫ್ರಿಕಾ ನಡುವಿನ ಏಕದಿನ ಸರಣಿಗೂ ಕರೊನಾ ಕಂಟಕ