More

    ಓಲಾ, ಊಬರ್​ನಲ್ಲಿಲ್ಲ ಶೇರಿಂಗ್​ ಸೌಲಭ್ಯ; ಕರೊನಾ ವೈರಸ್​ ಹೋಗದೆ ಸೌಲಭ್ಯವಿಲ್ಲವೆಂದ ಸಂಸ್ಥೆ

    ನವದೆಹಲಿ: ದೇಶದಲ್ಲಿ ಕರೊನಾ ವೈರಸ್​ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳ ಕಾಣುತ್ತಿರುವ ಹಿನ್ನೆಲೆ ಶೇರಿಂಗ್​ ಸೌಲಭ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ಊಬರ್​ ಮತ್ತು ಓಲಾ ಸಂಸ್ಥೆಗಳು ತಿಳಿಸಿವೆ.

    ಇದುವರೆಗೆ ಓಲಾ ಮತ್ತು ಊಬರ್​ ಸಂಸ್ಥೆಗಳು ಶೇರಿಂಗ್​ ಸೌಲಭ್ಯವನ್ನು ನೀಡುತ್ತಿದ್ದವು. ತಮ್ಮ ಪ್ರಯಾಣವನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದಕ್ಕೆ ಅದರಲ್ಲಿ ಅವಕಾಶ ಮಾಡಿಕೊಡಲಾಗಿತ್ತು. ಮಿನಿ, ಮೈಕ್ರೋ ಕಾರುಗಳಿಗಿಂತ ಕಡಿಮೆ ಬೆಲೆಯಲ್ಲಿ ಈ ಸೌಲಭ್ಯ ಲಭ್ಯವಿದ್ದ ಕಾರಣ ಹೆಚ್ಚಿನ ಜನರು ಇದನ್ನು ಬಳಸಿಕೊಳ್ಳುತ್ತಿದ್ದರು. ಆದರೆ ಕರೊನಾ ವೈರಸ್​ ಭಾರತಕ್ಕೆ ಕಾಲಿಟ್ಟಾಗಿನಿಂದ ದೇಶದ ಜನರು ಪ್ರಯಾಣವನ್ನು ಹಂಚಿಕೊಳ್ಳುವುದಕ್ಕೆ ಹೆದರುತ್ತಿದ್ದಾರೆ. ಹೀಗಾಗಿ ನಾವು ಕರೊನಾ ವೈರಸ್​ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಶೇರ್​ ಸೌಲಭ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿದ್ದೇವೆ ಎಂದು ಸಂಸ್ಥೆಗಳು ಶುಕ್ರವಾರದಂದು ತಿಳಿಸಿವೆ.

    ದೇಶದಲ್ಲಿ ಕರೊನಾ ವೈರಸ್​ ಸೋಂಕಿತರ ಸಂಖ್ಯೆಯಲ್ಲಿ ಗಂಟೆ ಗಂಟೆಗೂ ಏರಿಕೆ ಕಂಡುಬರುತ್ತಿದೆ. ಇದುವರೆಗೆ ಸೋಂಕಿತರ ಸಂಖ್ಯೆ 300ರ ಗಡಿ ದಾಟಿ ಹೊರಟಿದೆ. ಇಟಲಿ ಮೂಲದ ಓರ್ವನ ಸಾವು ಸೇರಿದಂತೆ ದೇಶದಲ್ಲಿ ಒಟ್ಟು ಐದು ಜನರು ಈ ವೈರಸ್​ಗೆ ಬಲಿಯಾಗಿದ್ದಾರೆ. (ಏಜೆನ್ಸೀಸ್​)

    ಚಪ್ಪಾಳೆ ತಟ್ಟುವುದರಿಂದ ಏನೂ ಉಪಯೋಗವಿಲ್ಲ; ತ್ವರಿತ ಕ್ರಮಕ್ಕೆ ರಾಹುಲ್​ ಗಾಂಧಿ ಒತ್ತಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts