More

    ಚಪ್ಪಾಳೆ ತಟ್ಟುವುದರಿಂದ ಏನೂ ಉಪಯೋಗವಿಲ್ಲ; ತ್ವರಿತ ಕ್ರಮಕ್ಕೆ ರಾಹುಲ್​ ಗಾಂಧಿ ಒತ್ತಾಯ

    ನವದೆಹಲಿ: ದೇಶದಾದ್ಯಂತ ಕರೊನಾ ವೈರಸ್​ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳ ಕಾಣುತ್ತಿದೆ. ಎರಡನೇ ಹಂತದಲ್ಲಿರುವ ವೈರಸ್​ ಮೂರನೇ ಹಂತಕ್ಕೆ ತಲುಪುತ್ತಿದೆ ಎನ್ನಲಾಗಿದೆ. ಹೀಗಿರುವಾಗ ಮುಂಜಾಗ್ರತಾ ಕ್ರಮವಾಗಿ ಸ್ವ ಇಚ್ಛೆಯಿಂದ ಮನೆಯಿಂದ ಹೊರಗೆ ಬರದೆ ಈ ಭಾನುವಾರದಂದು ಜನತಾ ಕರ್ಫ್ಯೂ ಆಚರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ಸಂಜೆ 5 ಗಂಟೆಗೆ ಮನೆಯಲ್ಲಿಯೇ ಚಪ್ಪಾಳೆ ತಟ್ಟಿ ಆರೋಗ್ಯ ಇಲಾಖೆಯವರಿಗೆ ಗೌರವ ಸಲ್ಲಿಸಿ ಎಂದು ಪ್ರಧಾನಿ ಕೇಳಿಕೊಂಡಿದ್ದು ಇದಕ್ಕೆ ಅನೇಕರು ಟೀಕಿಸುತ್ತಿದ್ದಾರೆ. ಚಪ್ಪಾಳೆ ತಟ್ಟುವುದರಿಂದ ಏನೂ ಉಪಯೋಗವಿಲ್ಲ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹೇಳಿದ್ದಾರೆ.

    ಕರೊನಾ ವೈರಸ್​ ದೇಶದ ಆರ್ಥಿಕತೆಯ ಮೇಲೆ ಭಾರೀ ಪರಿಣಾಮವನ್ನು ಬೀರಿದೆ. ಸಣ್ಣ, ಮದ್ಯಮ ಉದ್ಯಮಿಗಳು ಮತ್ತು ದೈನಂದಿನ ಕೂಲಿ ಕಾರ್ಮಿಕರ ಮೇಲೆ ಇದು ಹೆಚ್ಚು ಪರಿಣಾಮ ಬೀರುತ್ತಿದೆ. ಚಪ್ಪಾಳೆ ತಟ್ಟುವುದರಿಂದ ಅವರಿಗೆ ಸಹಾಯ ಮಾಡಿದಂತಾಗುವುದಿಲ್ಲ. ನಗದು ಸಹಾಯ, ತೆರಿಗೆ ವಿನಾಯಿತಿ ಮತ್ತು ಸಾಲ ಮರುಪಾವತಿಯಲ್ಲಿ ವಿನಾಯಿತಿ ನೀಡುವ ಅವಶ್ಯಕತೆ ಇದೆ ಎಂದು ರಾಹುಲ್​ ಗಾಂಧಿ ಟ್ವಿಟ್ಟರ್​ನಲ್ಲಿ ತಿಳಿಸಿದ್ದಾರೆ.

    ಕೇಂದ್ರ ಸರ್ಕಾರ ಸಣ್ಣ ಮತ್ತು ಮಧ್ಯಮ ಉದ್ಯಮಿಗಳು ಹಾಗೂ ದೈನಂದಿನ ಕೂಲಿ ಕಾರ್ಮಿಕರ ಬಗ್ಗೆ ಶೀಘ್ರವೇ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. (ಏಜೆನ್ಸೀಸ್​)

    ಪಂಜಾಬ್​ನಲ್ಲಿ ಕರೊನಾದಿಂದಾಗಿ ಮೃತನಾದ ವೃದ್ಧನ ಮನೆಯ 6 ಜನರಲ್ಲಿ ಸೋಂಕು ಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts