More

    ಉಬರ್​ನಿಂದ ಬರೀ ಆಟೋ-ಕ್ಯಾಬ್​ ಅಲ್ಲ, ಬಸ್​ ಕೂಡ ಚಲಾವಣೆ!; ಎಲ್ಲಿ, ಯಾವಾಗ?

    ಕೋಲ್ಕತ: ಓಲ್​-ಉಬರ್​ನಂಥ ಆ್ಯಪ್​ ಆಧಾರಿತ ಟ್ರಾವೆಲ್ ಆಪರೇಟರ್​​ಗಳಿಂದ ಆಟೋ-ಕ್ಯಾಬ್​ಗಳ ವ್ಯವಸ್ಥೆ ಆಗುತ್ತಿರುವುದು ಹೊಸದೇನಲ್ಲ. ಆದರೆ ಈ ಪೈಕಿ ಉಬರ್​ ಈಗ ಒಂದು ಹೆಜ್ಜೆ ಮುಂದೆ ಹೋಗಿದ್ದು, ಬಸ್​ ಕೂಡ ಬಿಡಲು ಮುಂದಾಗಿದೆ. ಅರ್ಥಾತ್​, ಉಬರ್​​ನಿಂದ ಇನ್ನುಮುಂದೆ ಬಸ್​ಗಳು ಕೂಡ ಆಪರೇಟ್ ಆಗಲಿವೆ.

    ಇಂಥದ್ದೊಂದು ವ್ಯವಸ್ಥೆಗಾಗಿ ಸಾರಿಗೆ ಇಲಾಖೆಯೊಂದಿಗೇ ಒಪ್ಪಂದ ಮಾಡಿಕೊಳ್ಳಲಾಗಿದೆ. ಅಂದಹಾಗೆ ಈ ರೀತಿಯ ಒಪ್ಪಂದ ಆಗಿರುವುದು ಕರ್ನಾಟಕದಲ್ಲಲ್ಲ, ಪಶ್ಚಿಮಬಂಗಾಳದಲ್ಲಿ. ಪಶ್ಚಿಮ ಬಂಗಾಳದ ಸಾರಿಗೆ ಇಲಾಖೆ ಜತೆ ಉಬರ್ ಒಪ್ಪಂದ ಮಾಡಿಕೊಂಡಿದೆ.

    ಉಬರ್ ಶಟಲ್ ಎಂಬ ಈ ಯೋಜನೆಗೆ ಸಂಸ್ಥೆ ಅಲ್ಲಿನ ಸಾರಿಗೆ ಇಲಾಖೆ ಜತೆ ಒಪ್ಪಂದ ಮಾಡಿಕೊಂಡಿದ್ದು, ಇಂಥದ್ದೊಂದು ಇದೇ ಪ್ರಥಮ ಎನ್ನಲಾಗಿದೆ. ಖಾಸಗಿ ಬಸ್​ಗಳನ್ನು ಬಳಸಿಕೊಂಡು ಟೆಕ್ನಾಲಜಿ ಮೂಲಕ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸುವುದು ಈ ಉಬರ್ ಶಟಲ್ ಗುರಿ ಎನ್ನಲಾಗಿದೆ.

    ಇದನ್ನೂ ಓದಿ: ಸುಳ್ಳು ಪ್ರಚಾರದ ವಿರುದ್ಧ ನಮ್ಮ ಹೋರಾಟ; ಸುಪ್ರೀಂಕೋರ್ಟ್‌ ಅಭಿಪ್ರಾಯಕ್ಕೆ ಪತಂಜಲಿ ಸ್ಪಷ್ಟನೆ

    ಕಡಿಮೆ ವಾಹನದಲ್ಲಿ ಹೆಚ್ಚು ಜನರು ಪ್ರಯಾಣಿಸುವಂತೆ ರಸ್ತೆಯಲ್ಲಿ ವಾಹನದಟ್ಟಣೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈ ಯೋಜನೆ ರೂಪಿಸಲಾಗಿದೆ. ಇದರಿಂದ ಇಂಗಾಲದ ಹೊರಹೊಮ್ಮುವಿಕೆ ಕೂಡ ತಗ್ಗಲಿದೆ. ಇಂಥದ್ದೊಂದು ಸೇವೆ ಪಶ್ಚಿಮಬಂಗಾಳದಲ್ಲಿ 2024ರ ಮಾರ್ಚ್​​ನಲ್ಲಿ ಆರಂಭವಾಗಲಿದೆ. ಪಶ್ಚಿಮಬಂಗಾಳದ ಜಾಗತಿಕ ಉದ್ಯಮ ಸಮಾವೇಶದಲ್ಲಿ ಈ ಒಪ್ಪಂದಕ್ಕೆ ಸಹಿ ಮಾಡಿಕೊಳ್ಳಲಾಗಿದೆ.

    ಈ ಉಬರ್​ ಶಟಲ್​ ಬಸ್​ನಲ್ಲಿ ಬಳಕೆದಾರರು ಒಂದು ವಾರ ಮೊದಲೇ ಸೀಟ್ ಬುಕ್ ಮಾಡಿಕೊಳ್ಳಬಹುದಾಗಿದೆ. ನಿತ್ಯದ ಮಾರ್ಗದಲ್ಲಿ ಬೆಳಗ್ಗೆ 6ರಿಂದ ರಾತ್ರಿ 10ರ ವರೆಗೆ ಸಂಚರಿಸುವ ಬಸ್​ಗಳಲ್ಲಿ ಈ ವ್ಯವಸ್ಥೆ ಇರಲಿದೆ ಎಂಬ ಮಾಹಿತಿಯೂ ಬಹಿರಂಗಗೊಂಡಿದೆ.

    ಭಾರಿ ಹೆಬ್ಬಾವನ್ನೇ ಹಿಡಿದ ‘ಮಗಧೀರ’; ವಿಡಿಯೋ ವೈರಲ್, ಜನರಿಂದ ಮೆಚ್ಚುಗೆಯ ಮಹಾಪೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts