More

    ಐಪಿಎಲ್​ ಆಯೋಜಿಸಲು ಸಜ್ಜಾಗಿದೆ ಯುಎಇ..!

    ದುಬೈ: ಕರೊನಾ ವೈರಸ್​ ಭೀತಿಯಿಂದಾಗಿ ಭಾರತೀಯ ಕ್ರೀಡಾ ಚಟುವಟಿಕೆಗಳೇ ಸಂಪೂರ್ಣ ಅಸ್ತವ್ಯಸ್ಥವಾಗಿವೆ. ದಿನದಿಂದ ದಿನಕ್ಕೆ ಕರೊನಾ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಯಾವುದೇ ಕ್ರೀಡಾ ಚಟುವಟಿಕೆಗಳು ಆರಂಭಗೊಳ್ಳುವ ಲಕ್ಷಣವಿಲ್ಲ. ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ಪಾಲಿನ ಚಿನ್ನದ ಮೊಟ್ಟೆಯಂತಿರುವ ಇಂಡಿಯನ್​ ಪ್ರೀಮಿಯರ್​ ಲೀಗ್​ಗೂ (ಐಪಿಎಲ್​) ಮುಹೂರ್ತ ಕೂಡಿಬಂದಿಲ್ಲ. ಟಿ20 ವಿಶ್ವಕಪ್​ ಮುಂದೂಡಿಕೆಯಾದರೆ ಈ ವೇಳೆ ಐಪಿಎಲ್​ ಆಯೋಜಿಸಲು ಬಿಸಿಸಿಐ ಯೋಜನೆ ರೂಪಿಸಿದೆ. ಮತ್ತೊಂದೆಡೆ, ಇಂಥ ಪ್ರತಿಷ್ಠಿತ ಲೀಗ್​ ಆಯೋಜಿಸಲು ಬಿಸಿಸಿಐ ತೀರ್ಮಾನಿಸಿದರೆ, ಸಂಪೂರ್ಣ ಸನ್ನದ್ಧವಾಗಿರುವುದಾಗಿ ದುಬೈ ಸ್ಪೋರ್ಟ್ಸ್​ ಸಿಟಿಯ ಕ್ರಿಕೆಟ್​ ಮುಖ್ಯಸ್ಥ ಸಲ್ಮಾನ್​ ಹನೀಫ್ ಹೇಳಿದ್ದಾರೆ.

    ಇದನ್ನೂ ಓದಿ: ದ್ಯುತಿಗಿಲ್ಲ ಪ್ರಾಯೋಜಕರ ಕೊರತೆ, ಕಾರು ಮಾರಾಟಕ್ಕೆ ರೈಲು ಬಿಟ್ಟ ಅಥ್ಲೀಟ್​!

    ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ವೇಳೆಗೆ ಐಪಿಎಲ್​ ಮುಕ್ತಾಯಗೊಂಡು ಒಂದೂವರೆ ತಿಂಗಳಾಗಬೇಕಿತ್ತು. ಆದರೆ, ಕೋವಿಡ್​-19 ಮಹಾಮಾರಿ ಎಲ್ಲದಕ್ಕೂ ಅಡ್ಡಿಯಾಗಿದೆ. ಇಂಥ ಸಂಕಷ್ಟದ ಸಮಯದಲ್ಲೂ ಶತಾಯಗತಾಯ ಐಪಿಎಲ್​ ಆಯೋಜಿಸಲು ತೀರ್ಮಾನಿಸಿರುವ ಬಿಸಿಸಿಐ, ಹಲವು ಮಾರ್ಗಗಳನ್ನು ಹುಡುಕುತ್ತಿದೆ. ಯುಎಇಯಲ್ಲಿ ಐಪಿಎಲ್​ ಆಯೋಜಿಸಲಾಗುತ್ತಿದೆ ಎಂಬ ಊಹಾಪೋಹಗಳಿಗೆ ಪ್ರತಿಕ್ರಿಯಿಸಿರುವ ದುಬೈ ಸ್ಪೋರ್ಟ್ಸ್​ ಸಿಟಿ ಮುಖ್ಯಸ್ಥರು, ಐಪಿಎಲ್​ ಆಯೋಜಿಸಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಡುವುದಾಗಿ ಹೇಳಿದ್ದಾರೆ. ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂ ಸೇರಿದಂತೆ, ಕೆಲ ಸ್ಟೇಡಿಯಂಗಳನ್ನು ನೀಡುವುದಾಗಿ ತಿಳಿಸಿದ್ದಾರೆ. ಆದರೆ, ಐಸಿಸಿ ಟಿ20 ವಿಶ್ವಕಪ್​ ಮುಂದೂಡಿಕೆ ಕುರಿತು ಅಂತಿಮ ತೀರ್ಮಾನ ಕೈಗೊಂಡರಷ್ಟೇ ಬಿಸಿಸಿಐ ಐಪಿಎಲ್​ ಭವಿಷ್ಯ ನಿರ್ಧರಿಸಲಿದೆ. ಭಾರತಕ್ಕೆ ಹೋಲಿಸಿದರೆ ಯುಎಇಯಲ್ಲಿ ಕೋವಿಡ್​-19ರ ಅಬ್ಬರ ಕಡಿಮೆಯಿದೆ. ಇದುವರೆಗೂ 50 ಸಾವಿರಕ್ಕೂ ಅಧಿಕ ಪಾಸಿಟಿವ್​ ಪ್ರಕರಣಗಳು ಪತ್ತೆಯಾಗಿದ್ದರೂ 300 ಮಂದಿ ಸಾವನ್ನಪ್ಪಿದ್ದಾರೆ.

    ಇದನ್ನೂ ಓದಿ: ಮುಂಬೈ ಫುಟ್​ಬಾಲ್​ ಕೋಚ್​ಗಳು ಈಗ ತರಕಾರಿ, ಕಬಾಬ್​ ಮಾರುತ್ತಿದ್ದಾರೆ!

    ಎಷ್ಟೇ ತಂಡಗಳು ಆಗಮಿಸಿದರೂ ಅಭ್ಯಾಸಕ್ಕೆ ವ್ಯವಸ್ಥೆ ಮಾಡಿಕೊಡಬಹುದು. ಐಸಿಸಿ ಅಕಾಡೆಮಿವೊಂದರಲ್ಲೇ 38 ಪಿಚ್​ಗಳಿವೆ. ಎರಡು ಓವೆಲ್​ ಮೈದಾನಗಳಿವೆ. ಜತೆಗೆ ಒಳಾಂಗಣದ ವ್ಯವಸ್ಥೆ ಮಾಡಲಾಗಿದೆ ಎಂದು ಹನೀಫ್ ಹೇಳಿದ್ದಾರೆ. 2014ರಲ್ಲಿ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ದುಬೈನಲ್ಲಿ ಕೆಲ ಪಂದ್ಯಗಳನ್ನು ಆಯೋಜಿಸಲಾಗಿತ್ತು. 2009ರಲ್ಲಿ ಸಂಪೂರ್ಣ ಟೂರ್ನಿಯನ್ನು ದಕ್ಷಿಣ ಆಫ್ರಿಕಾಗೆ ಸ್ಥಳಾಂತರಿಸಲಾಗಿತ್ತು.

    ಯುಎಇಯಲ್ಲಿ ಐಪಿಎಲ್​ ಆಯೋಜನೆಗೆ ಬಿಸಿಸಿಐ ಪ್ಲ್ಯಾನ್​ ಹೇಗಿದೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts