More

    ಬಡಪಾಯಿಗಳ ಬದಲು ಸಚಿವರು, ಶಾಸಕರು, ಅಧಿಕಾರಿಗಳ ಮೇಲೆ ಲಸಿಕೆ ಪ್ರಯೋಗವಾಗಲಿ: ಮಾಜಿ ಸಚಿವರ ವಿನಂತಿ

    ಬೆಂಗಳೂರು: ಜಗತ್ತಿನ ಅತಿದೊಡ್ಡ ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು (ಶನಿವಾರ ಜ.16) ಬೆಳಗ್ಗೆ ಚಾಲನೆ ನೀಡಿದ ಬೆನ್ನಲ್ಲೇ ಮಾಜಿ ಸಚಿವ ಯು.ಟಿ. ಖಾದರ್​ ಟ್ವೀಟ್​ ಮೂಲಕ ಸಲಹೆ ಒಂದನ್ನು ನೀಡಿದ್ದಾರೆ.

    ಲಸಿಕೆ ಬಂದಿರುವುದು ಸಂತೋಷ. ಬಡಪಾಯಿ ಡಿ ಗ್ರೂಪ್ ನೌಕರರ ಮೇಲೆ ಲಸಿಕೆ ಪ್ರಯೋಗ ಮಾಡುವ ಮೊದಲು ಆಡಂಬರದಿಂದ ಉದ್ಘಾಟನೆ ಮಾಡುವ ಮಂತ್ರಿಗಳು, ಶಾಸಕರು ಹಾಗೂ ಹಿರಿಯ ಅಧಿಕಾರಿಗಳು ಮೊದಲ ಲಸಿಕೆ ಪಡೆದು ಮಾದರಿ ಆಗಲಿ ಎಂಬುದು ಜನರ ಪರವಾಗಿ ನನ್ನ ವಿನಂತಿ ಎಂದಿದ್ದಾರೆ.

    ಇದಕ್ಕೂ ಮುನ್ನ ವಿಡಿಯೋ ಕಾನ್ಫರೆನ್ಸ್​ ಮೂಲಕ ಲಸಿಕೆ ಅಭಿಯಾನ ಉದ್ಘಾಟಿಸಿ, ಮಾತನಾಡಿದ ಪ್ರಧಾನಿ ಮೋದಿ, ಇಡೀ ವಿಶ್ವವೇ ಇಂದು ಭಾರತದ ಕಡೆ ತಿರುಗಿ ನೋಡುತ್ತಿದೆ. ಲಸಿಕೆ ಯಾವಾಗ ದೊರೆಯುತ್ತದೆ ಎಂದು ಎಲ್ಲರೂ ಕೇಳುತ್ತಿದ್ದರು. ಇದೀಗ ಅದು ದೊರೆತಿದೆ. ಈ ಸಂದರ್ಭದಲ್ಲಿ ದೇಶವಾಸಿಗಳಿಗೆ ಅಭಿನಂದನೆ ತಿಳಿಸುತ್ತೇನೆ ಎಂದರು.

    ಇದನ್ನೂ ಓದಿರಿ: ಪತಿ ಕಾಲ್​ಬಾಯ್ ರಹಸ್ಯ, ಲ್ಯಾಪ್​ಟಾಪ್​ನಲ್ಲಿ ಬಯಲು; ಪರಸ್ತ್ರೀಯರಿಗೆ ನೂರಾರು ಬೆತ್ತಲೆ ಫೋಟೋ ರವಾನೆ!

    ಸಾಮಾನ್ಯವಾಗಿ ಒಂದು ಲಸಿಕೆ ಕಂಡುಹಿಡಿಯಲು ಹಲವು ವರ್ಷಗಳು ಬೇಕಾಗುತ್ತಿತ್ತು. ಆದರೆ, ಕೆಲವೇ ಸಮಯದಲ್ಲಿ ಒಂದಲ್ಲ, ಎರಡು ದೇಶಿ ನಿರ್ಮಿತ (ಮೇಡ್​ ಇನ್​ ಇಂಡಿಯಾ) ಲಸಿಕೆಗಳು ತಯಾರಾಗಿವೆ. ಇದೇ ವೇಳೆ ಇತರೆ ಲಸಿಕೆಗಳ ಅಭಿವೃದ್ಧಿ ವೇಗವಾಗಿ ನಡೆಯುತ್ತಿದೆ ಎಂದು ಪ್ರಧಾನಿ ತಿಳಿಸಿದರು.

    11 ಯುವತಿಯರನ್ನು ಮದ್ವೆಯಾಗಿ ವಂಚಿಸಿದ 23ರ ಯುವಕ: ಈತನ ಕಾಮಪುರಾಣ ಕೇಳಿ ಬೆಚ್ಚಿದ ಪೊಲೀಸರು!

    ಜಗತ್ತಿನ ಅತಿದೊಡ್ಡ ಲಸಿಕೆ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ

    ಐಸ್​ ಕ್ರೀಮ್​ನಲ್ಲಿ ಮಹಾಮಾರಿ ಕರೊನಾ ವೈರಸ್​ ಪತ್ತೆ: ತಿಂದವರ ಹಿಂದೆ ಬಿದ್ದ ಚೀನಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts