More

    ಪ್ರತಿಸ್ಪರ್ಧಿಗಳನ್ನು ದುರ್ಬಲಗೊಳಿಸುವುದಕ್ಕಾಗಿ ಕಾನೂನು ಬಾಹಿರ ಕಾರ್ಯಾಚರಣೆ ಆರೋಪ: ಗೂಗಲ್ ವಿರುದ್ಧ ದಾವೆ

    ವಾಷಿಂಗ್ಟನ್: ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಏಕಸ್ವಾಮ್ಯ ಸಾಧಿಸುವುದಕ್ಕಾಗಿ ಪ್ರತಿಸ್ಪರ್ಧಿ ಸಂಸ್ಥೆಗಳನ್ನು ದುರ್ಬಲಗೊಳಿಸಲು ಕಾನೂನುಬಾಹಿರವಾಗಿ ಗೂಗಲ್ ಸಂಸ್ಥೆ ಕಾರ್ಯಾಚರಣೆ ನಡೆಸುತ್ತಿದೆ ಎಂದು ಆರೋಪಿಸಿ ಅಮೆರಿಕದ ನ್ಯಾಯಾಂಗ ಇಲಾಖೆ, ನಂಬಿಕೆ-ದ್ರೋಹದ ಮೊಕದ್ದಮೆ ಹೂಡಿದೆ.

    ಗೂಗಲ್ ಸ್ಪರ್ಧಾ ವಿರೋಧಿ ತಂತ್ರಗಾರಿಕೆಯಿಂದ ಸ್ಪರ್ಧಾತ್ಮಕ ಪ್ರಕ್ರಿಯೆಯನ್ನೇ ದುರ್ಬಲಗೊಳಿಸಲಿದೆ. ಇದರಿಂದ ಗ್ರಾಹಕರ ಮುಂದಿನ ಆಯ್ಕೆಗಳು ಕಡಿಮೆಯಾಗಲಿವೆ ಹಾಗೂ ಆವಿಷ್ಕಾರದ ಕತ್ತು ಹಿಸುಕಿದಂತಾಗುತ್ತದೆ ಎಂದು ದಾವೆಯಲ್ಲಿ ಅಭಿಪ್ರಾಯಪಡಲಾಗಿದೆ.

    ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪ್ರಾಣ ತ್ಯಾಗ ಮಾಡಿದ್ದಾರೆ 264 ರಕ್ಷಣಾ ಸಿಬ್ಬಂದಿ

    ಮಾಹಿತಿ ಹುಡುಕಾಟ (ಸರ್ಚ್) ಮತ್ತು ಇಂಟರ್​ನೆಟ್​ನಲ್ಲಿ ಜಾಹೀರಾತು ಸರ್ಚ್​ನಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಗೂಗಲ್ ಅಕ್ರಮವಾಗಿ ವರ್ತಿಸಿದೆ ಎಂದು ಗೂಗಲ್ ಮಾತೃ ಸಂಸ್ಥೆ ಆಲ್ಪಾಬೆಟ್ ಇನ್​ಕಾರ್ಪೆರೇಷನ್ ವಿರುದ್ಧ ಹೂಡಿರುವ ದಾವೆಗೆ 11 ರಾಜ್ಯಗಳು ಬೆಂಬಲಿಸಿವೆ. ಈ ದಾವೆಯಿಂದ ಇಂಟರ್​ನೆಟ್​ಗೆ ಸಂವಾದಿಯಾಗಿರುವ ಹಾಗೂ ಜಗದಗಲ ಜನರ ದೈನಂದಿನ ಚಟುವಟಿಕೆಗಳ ಅವಿಭಾಜ್ಯ ಭಾಗವಾಗಿರುವ ಕಂಪನಿಗೆ ಅಪಾರ ಪ್ರಮಾಣದ ಆರ್ಥಿಕ ನಷ್ಟ ಉಂಟು ಮಾಡುವ ನಿರೀಕ್ಷೆಯಿದೆ. (ಏಜೆನ್ಸೀಸ್)

    ಕರಾಚಿಯಲ್ಲಿ ಸ್ಪೋಟಕ್ಕೆ 5 ಬಲಿ: ಸಿವಿಲ್ ವಾರ್ ಸೇರಿ ಹಲವು ಸಂದೇಹ, ವದಂತಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts