More

    ಬೋನಿಗೆ ಬಿದ್ದ ಚಿರತೆ ಮರಿಗಳು; ನೋಡಲು ಮುಗಿಬಿದ್ದ ಜನತೆ

    ಮೈಸೂರು: ಇತ್ತೀಚೆಗೆ ಕಾಡುಪ್ರಾಣಿಗಳು ನಾಡಿಗೆ ಬಂದು ಜನರಲ್ಲಿ ದಿಗಿಲು ಮೂಡಿಸುವ ಪ್ರಸಂಗಗಳು ಹೆಚ್ಚಿವೆ. ಹೀಗೆ ಊರಿಗೆ ಬಂದು ತೊಂದರೆ ಕೊಡಬಹುದಾದ ಪ್ರಾಣಿಗಳನ್ನು ಹಿಡಿಯಲು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಎರಡು ಚಿರತೆ ಮರಿಗಳು ಸಿಕ್ಕಿಬಿದ್ದ ಘಟನೆ ಮೈಸೂರಿನಿಂದ ವರದಿಯಾಗಿದೆ.

    ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಬಳಿ ಎರಡು ಚಿರತೆ ಮರಿಗಳು ಬೋನಿಗೆ ಬಿದ್ದಿವೆ. ಬೀಚನಹಳ್ಳಿಯ ಪಾಳು ಬಿದ್ದ ನೀರಾವರಿ ಇಲಾಖೆಯ ವರ್ಕ್ ಶಾಪ್ ಬಳಿ ಸೆರೆಯಾಗಿರುವ ಈ ಚಿರತೆಗಳನ್ನು ನೋಡಲು ಸ್ಥಳೀಯರು ಮುಗಿಬಿದ್ದಿದ್ದರು. ಸುತ್ತುವರಿದ ಜನರನ್ನು ನೋಡಿದ ಮರಿಗಳು ಹೆದರಿಸಬೇಕೋ, ಹೆದರಬೇಕೋ ಎಂಬ ದ್ವಂದ್ವದಲ್ಲಿ ಪುಟಾಣಿ ಘರ್ಜನೆಗಳನ್ನು ಪ್ರದರ್ಶಿಸಿದವು. ಸೆರೆಸಿಕ್ಕ ಈ ಚಿರತೆಮರಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಮರಳಿ ಕಾಡಿಗೆ ಬಿಟ್ಟು ಬಂದಿದ್ದಾರೆ.

    VIDEO| ಬ್ಲೌಸ್​ ಬದ್ಲು ಮೆಹೆಂದಿ ತೊಟ್ಟ ನಾರೀಮಣಿ! ಇನ್ನೂ ಏನೇನು ಮಾಡ್ತಾರೋ ಎಂದ ನೆಟ್ಟಿಗರು

    ಅತಿವೇಗದಲ್ಲಿ ಚಲಿಸಿದ ಸಾರಿಗೆ ಬಸ್​ ಪಲ್ಟಿಯಾಗಿ ನಿಂತಿತು! 15ಕ್ಕೂ ಹೆಚ್ಚು ಜನರಿಗೆ ಗಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts