More

    ವಿಮಾನದಲ್ಲಿ ಕೆನಡಾಕ್ಕೆ ಹಾರಲಿವೆ ಬೀದಿ ನಾಯಿಗಳು, ‘ಬಿಸಿನೆಸ್ ಕ್ಲಾಸ್’ ಟಿಕೆಟ್ ಕೂಡ ರೆಡಿ; ಇದರ ಹಿಂದಿದೆ ಇಂಟ್ರೆಸ್ಟಿಂಗ್​ ಸ್ಟೋರಿ

    ಪಂಜಾಬ್: ಅಮೃತಸರದ ಎರಡು ಬೀದಿ ನಾಯಿಗಳು ಬ್ಯುಸಿನೆಸ್ ಕ್ಲಾಸ್​​​​ನಲ್ಲಿ ಪ್ರಯಾಣಿಸಿದ ನಂತರ ಶೀಘ್ರದಲ್ಲೇ ಕೆನಡಾಕ್ಕೆ ಹಾರಲಿವೆ. ಅನಿಮಲ್ ವೆಲ್ಫೇರ್ ಅಂಡ್ ಕೇರ್ ಸೊಸೈಟಿ (ಎಡಬ್ಲ್ಯುಸಿಎಸ್) ಡಾ. ನವನೀತ್ ಕೌರ್, ಹೆಣ್ಣು ನಾಯಿಗಳಾದ ಲಿಲಿ ಮತ್ತು ಡೈಸಿಯನ್ನು ಅಮೃತಸರದಿಂದ ಕೆನಡಾಕ್ಕೆ ಕರೆದೊಯ್ಯುತ್ತಿದ್ದಾರೆ. ಪೇಪರ್ ವರ್ಕ್​ಪೂರ್ಣಗೊಂಡಿದ್ದು, ಎರಡೂ ನಾಯಿಗಳು ಜುಲೈ 15 ರಂದು ದೆಹಲಿಯಿಂದ ಕೆನಡಾಕ್ಕೆ ತೆರಳಲಿವೆ. ಕೆನಡಾದ ಮಹಿಳೆಯೊಬ್ಬರು ಲಿಲಿ ಮತ್ತು ಡೈಸಿಯನ್ನು ದತ್ತು ತೆಗೆದುಕೊಂಡಿದ್ದಾರೆ ಎಂದು ಡಾ.ನವನೀತ್ ಕೌರ್ ಹೇಳಿದ್ದಾರೆ. ಇಲ್ಲಿಯವರೆಗೆ ಆಕೆ 6 ನಾಯಿಗಳನ್ನು ವಿದೇಶಕ್ಕೆ ಕರೆದೊಯ್ದಿದ್ದು, ಅವುಗಳಲ್ಲಿ ಎರಡು ಅವರೊಂದಿಗೆ ಅಮೆರಿಕದಲ್ಲಿ ವಾಸಿಸುತ್ತಿವೆ. ಡಾ.ನವನೀತ್ ಅವರು ಅಮೆರಿಕಾದಲ್ಲಿ ವಾಸಿಸುತ್ತಿದ್ದಾರೆ. ಆದರೆ ಅಮೃತಸರದವರು.

    2020 ರಲ್ಲಿ, ವಿಶ್ವಾದ್ಯಂತ ಲಾಕ್‌ಡೌನ್ ಇದ್ದಾಗ, ನವನೀತ್ ಕೌರ್ ಎಡಬ್ಲ್ಯುಸಿಎಸ್ ಸಂಸ್ಥೆಯನ್ನು ಸ್ಥಾಪಿಸಿದರು. ಆ ನಂತರ ಸುಖ್ವಿಂದರ್ ಸಿಂಗ್ ಜಾಲಿ ಅವರು ಅಮೃತಸರದಲ್ಲಿ ಸಂಸ್ಥೆಯ ಅಧಿಕಾರ ವಹಿಸಿಕೊಂಡು, ಕೆಲಸವನ್ನು ಮುಂದುವರೆಸಿದರು. ಲಿಲಿ ಮತ್ತು ಡೈಸಿ ಸುಮಾರು ಒಂದು ತಿಂಗಳಿನಿಂದ ಇದೇ ಸಂಸ್ಥೆಯಲ್ಲಿ ವಾಸಿಸುತ್ತಿದ್ದಾರೆ ಎಂದು ಡಾ.ನವನೀತ್ ಹೇಳಿದರು. ಎರಡೂ ಹೆಣ್ಣು ನಾಯಿಗಳು ಚಿಂತಾಜನಕ ಸ್ಥಿತಿಯಲ್ಲಿದ್ದಾಗ ಈ ಸಂಸ್ಥೆಯಿಂದ ಚಿಕಿತ್ಸೆ ಪಡೆದವು.

    ಭಾರತೀಯರಾದ ನಾವು ನಮ್ಮ ಚಿಂತನೆಯನ್ನು ಬದಲಾಯಿಸಿಕೊಳ್ಳಬೇಕು ಎಂದು ಡಾ.ನವನೀತ್ ಹೇಳಿದ್ದಾರೆ. ನಾವು ಬೀದಿ ನಾಯಿಗಳನ್ನು ಸಾಕುವುದಿಲ್ಲ. ಆದರೆ ವಿದೇಶದಲ್ಲಿ ಅವುಗಳನ್ನು ಸಂತೋಷದಿಂದ ಬರಮಾಡಿಕೊಳ್ಳುವ ಜನರಿದ್ದಾರೆ. ಏಕೆಂದರೆ ಭಾರತೀಯ ತಳಿಯ ನಾಯಿಗಳು ಹೆಚ್ಚು ಸ್ನೇಹಪರ ಮತ್ತು ಕಾಳಜಿಯುಳ್ಳವು. ಇದಕ್ಕಾಗಿಯೇ ಕೆನಡಾದ ಮಹಿಳೆಯೊಬ್ಬರು ಈ ನಾಯಿಗಳನ್ನು ದತ್ತು ತೆಗೆದುಕೊಳ್ಳಲು ಬಯಸಿದ್ದಾರೆ. ಈ ನಾಯಿಗಳನ್ನು ಕೆನಡಾಕ್ಕೆ ಕಳುಹಿಸಲಾಗುತ್ತಿದ್ದು, ಅಲ್ಲಿ ಅವುಗಳನ್ನು ಚೆನ್ನಾಗಿ ನೋಡಿಕೊಳ್ಳಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts