More

    ರನೌಟ್ ಆದ ಬಳಿಕ ಅಜಿಂಕ್ಯ ರಹಾನೆ ತೋರಿದ ವರ್ತನೆಗೆ ಕ್ರಿಕೆಟ್ ಪ್ರೇಮಿಗಳ ಪ್ರಶಂಸೆ

    ಮೆಲ್ಬೋರ್ನ್: ವಿರಾಟ್ ಕೊಹ್ಲಿ ಪಿತೃತ್ವ ರಜೆಯ ಮೇರೆಗೆ ತವರಿಗೆ ಮರಳಿದ ಬಳಿಕ ಅಜಿಂಕ್ಯ ರಹಾನೆ ಭಾರತ ತಂಡವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಈಗಾಗಲೆ ಅತ್ಯುತ್ತಮ ನಾಯಕತ್ವ ಮತ್ತು ಬ್ಯಾಟಿಂಗ್‌ನಿಂದ ಅಜಿಂಕ್ಯ ರಹಾನೆ ಗಮನಸೆಳೆದಿದ್ದಾರೆ. ಈ ನಡುವೆ ಪಂದ್ಯದ 3ನೇ ದಿನದಾಟದಲ್ಲಿ ಅವರು ರನೌಟ್ ಆಗಿ ನಿರಾಸೆ ಅನುಭವಿಸಿದರೂ, ಆ ಬಳಿಕ ಅವರು ತೋರಿದ ಕ್ರೀಡಾಸ್ಫೂರ್ತಿಯ ನಡೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಇದನ್ನೂ ಓದಿ: ಬಂಗಾಳ ರಾಜ್ಯಪಾಲರನ್ನು ಭೇಟಿಯಾದ ಗಂಗೂಲಿ, ರಾಜಕೀಯ ವಲಯದಲ್ಲಿ ಕೌತುಕ

    ಮೊದಲ ಟೆಸ್ಟ್‌ನಲ್ಲಿ ರಹಾನೆ ಮಾಡಿದ ಎಡವಟ್ಟಿನಿಂದ ವಿರಾಟ್ ಕೊಹ್ಲಿ ರನೌಟ್ ಆಗಿದ್ದರು. ಆಗ ರಹಾನೆ ವಿರುದ್ಧ ಅಸಮಾಧಾನಗೊಂಡಿದ್ದ ಕೊಹ್ಲಿ ಸಿಟ್ಟಿನಿಂದ ಕೂಗಾಡುತ್ತಲೇ ಪೆವಿಲಿಯನ್‌ನತ್ತ ಸಾಗಿದ್ದರು. ದಿನದಾಟದ ಬಳಿಕ ರಹಾನೆ ಕ್ಷಮೆಯಾಚಿಸಿ ಪ್ರಕರಣಕ್ಕೆ ತೆರೆ ಎಳೆದಿದ್ದರು. ಮೆಲ್ಬೋರ್ನ್‌ನಲ್ಲಿ ಸೋಮವಾರ ರವೀಂದ್ರ ಜಡೇಜಾರ ಅಂಥದ್ದೇ ಎಡವಟ್ಟಿನಿಂದ ರಹಾನೆ ರನೌಟಾದರು. ಆಗ ರಹಾನೆ ಸಿಟ್ಟಾಗಲಿಲ್ಲ. ಬದಲಾಗಿ ರನೌಟ್‌ಗೆ ಕಾರಣರಾದ ಬೇಸರದಲ್ಲಿದ್ದ ಜಡೇಜಾಗೆ, ‘ಕುಗ್ಗಬೇಡ, ಆಟ ಇನ್ನೂ ಇದೆ’ ಎಂಬ ರೀತಿಯಲ್ಲಿ ಸಮಾಧಾನ ಮಾಡಿ ಹೊರನಡೆದರು. ರಹಾನೆಯ ಈ ಕ್ರೀಡಾಸ್ಫೂರ್ತಿಯ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ ಪಡೆದುಕೊಂಡಿದೆ.

    ಐಸಿಸಿ ಕೂಡ ಇದು ‘ಕ್ರಿಕೆಟ್ ಸ್ಫೂರ್ತಿ’ ಎಂದು ಟ್ವೀಟಿಸುವ ಮೂಲಕ ರಹಾನೆಯನ್ನು ಪ್ರಶಂಸಿಸಿದೆ. ಇನ್ನು ಕೆಲವರು ರನೌಟ್ ಆದ ಬಳಿಕ ರಹಾನೆ ತೋರಿರುವ ವರ್ತನೆ, ಅವರಲ್ಲಿನ ನಾಯಕತ್ವ ಗುಣವನ್ನು ತೋರಿಸುತ್ತಿದೆ. ತಾನು ಔಟಾಗಿದ್ದು ಜಡೇಜಾ ಮೇಲೆ ಮಾನಸಿಕವಾಗಿ ಯಾವುದೇ ಪರಿಣಾಮ ಬೀರದಂತೆ ಅವರು ಎಚ್ಚರಿಕೆ ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಐಪಿಎಲ್ ಆಡಿದಲ್ಲಿಗೆ ಹನಿಮೂನ್‌ಗೆ ಹೋದ ಯಜುವೇಂದ್ರ ಚಾಹಲ್

    199 ರನ್‌ಗೆ ಔಟಾಗಿ ಚೊಚ್ಚಲ ದ್ವಿಶತಕದಿಂದ ವಂಚಿತರಾದ ಫಾಫ್​ ಡು ಪ್ಲೆಸಿಸ್

    ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಜಯದತ್ತ ಟೀಮ್ ಇಂಡಿಯಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts