More

    ಚಿಲ್ಡ್ ಬಿಯರ್ ದಾನ ಮಾಡಿ ಎಂದ ಅಭಿಮಾನಿ; ಬಿಯರ್ ಜತೆ ಮಿಕ್ಸ್​ಚರ್ ಸಾಕಾ ಎಂದ ರಿಯಲ್ ಹೀರೋ!

    ಕರೊನಾ ಸಮಯದಲ್ಲಿ ಮಾತ್ರವಲ್ಲ, ಬದಲಿಗೆ ಅದರ ನಂತರವೂ ಅಂದರೆ ಈಗಲೂ ಯಾವುದೇ ಸಮಸ್ಯೆ ಎಂದರೆ ನಟ ಸೋನು ಸೂದ್ ಅವರನ್ನು ಜನ ನೆನಪಿಸಿಕೊಳ್ಳುತ್ತಿದ್ದಾರೆ. ಹೌದು, ತಮ್ಮ ಸಾಮಾಜಿಕ ಕೆಲಸಗಳ ಮೂಲಕ ಸಖತ್ ಫೇಮಸ್ ಆಗಿರುವ ನಟ ಸೋನು ಸೂದ್ ಸಿನಿಮಾಗಳಲ್ಲಿ ವಿಲನ್ ಆದರೂ ಅವರ ರಿಯಲ್​ ಲೈಫ್​ ವ್ಯಕ್ತಿತ್ವವನ್ನು ಮೆಚ್ಚಿಕೊಂಡ ಜನರು ಹೀರೋ ಎಂದು ಕರೆದಿದ್ದಾರೆ. ಆದರೆ, ಇಲ್ಲೊಬ್ಬರು ಅಭಿಮಾನಿ ನಟ ಸೋನು ಸೂದ್ ಅವರ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ಹೌದು, ಹೇಳಿ ಕೇಳಿ ಇದು ಬೇಸಿಗೆ.
    ಹಾಗಾಗಿ, ”ಚಿಲ್ಡ್ ಬಿಯರ್ ದಾನ ಮಾಡಿಎಂದು ನಟ ಸೋನು ಸೂದ್ ಬಳಿ ಮೀಮ್ ಒಂದರ ಮೂಲಕ ಅಭಿಮಾನಿ ಒಬ್ಬರು ಬೇಡಿಕೆ ಇಟ್ಟಿದ್ದಾರೆ. ಸದ್ಯ, ಅಭಿಮಾನಿಯ ಈ ಬೇಡಿಕೆ ಟ್ವಿಟರ್​ನಲ್ಲಿ ವೈರಲ್ ಸುದ್ದಿಯಾಗಿದೆ. ಆದರೆ, ಇಲ್ಲಿ ಗಮನಿಸುವ ವಿಷಯವೆಂದರೆ ನಟ ಸೋನು ಸೂದ್ ಅವರು ಅಭಿಮಾನಿಯ ಈ ಬೇಡಿಕೆಗೆ ತುಂಬಾ ಜಾಣತನದಿಂದ ಉತ್ತರ ನೀಡಿದ್ದಾರೆ. ಇನ್ನು, ತಮ್ಮ ಅಭಿಮಾನಿಗೆ ನಟ ಸೋನು ಸೂದ್ ಅವರು ಕೊಟ್ಟ ಉತ್ತರವೂ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಂದಹಾಗೆ, ನಟ ಸೋನು ಸೂದ್ ಅವರ ಮೇಲೆ ನಿತ್ಯ ಅನೇಕ ಮೀಮ್ಸ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತವೆ.
    ಆ ಪೈಕಿ ಒಂದು ಮೀಮ್​ನಲ್ಲಿ ಚಳಿಗಾಲದಲ್ಲಿ ಕಂಬಳಿ ವಿತರಿಸುವ ನೀವು, ಈ ಬೇಸಿಗೆಯಲ್ಲಿ ನಮಗೆ ತಂಪಾದ ಬಿಯರ್​ ದಾನ ಮಾಡುವುದಿಲ್ಲವೇಎಂಬ ಮೀಮ್​ಅನ್ನು ನೆಟ್ಟಿಗರೊಬ್ಬರು ಶೇರ್ ಮಾಡಿಕೊಂಡಿದ್ದಾರೆ. ಆ ಮೀಮ್ ಸದ್ಯ ಸೋನು ಸೂದ್ ಅವರ ಗಮನ ಸೆಳೆದಿದ್ದು, ಅದಕ್ಕೆ ತಕ್ಕ ಉತ್ತರ ನೀಡಿದ್ದಾರೆ. ಹೌದು, ”ಬಿಯರ್ ಜೊತೆಗೆ ಸೈಡ್ಸ್​ಗೆ ತಿನ್ನಲು ಖಾರವಾದ ಆಲೂ ಭುಜಿಯಾ ಮಿಕ್ಸ್​ಚರ್ ಕೂಡಾ ಬೇಕಾ (ಅದು ಕೊಟ್ಟರೆ ಸಾಕಾ)’, ಎಂಬ ಫನ್ನಿ ಉತ್ತರ ನೀಡಿದ್ದಾರೆ. ಇನ್ನು, ನಟನು ಟ್ವೀಟ್​ನ ಮೂಲಕ ಕೊಟ್ಟ ಈ ಉತ್ತರ ಕಂಡ ಹಲವು ನೆಟ್ಟಿಗರು ಮಿಕ್ಸ್​ಚರ್ ಜತೆಗೆ ಪಂಜಾಬಿ ತಡ್​ಕಾ ಸ್ನ್ಯಾಕ್ಸ್ ಕೂಡಾ ಬೇಕು” ಎಂದಿದ್ದಾರೆ. ಒಬ್ಬ ನೆಟ್ಟಿಗನಂತೂ ”ಸೋನು ನೀವು ನಿಜಕ್ಕೂ ದೇವರು” ಎಂದು ರೀ-ಟ್ವೀಟ್ ಮಾಡಿದ್ದಾರೆ.  

    ಚಿಲ್ಡ್ ಬಿಯರ್ ದಾನ ಮಾಡಿ ಎಂದ ಅಭಿಮಾನಿ; ಬಿಯರ್ ಜತೆ ಮಿಕ್ಸ್​ಚರ್ ಸಾಕಾ ಎಂದ ರಿಯಲ್ ಹೀರೋ!

    ‘ಭಾರತದ ಕೋಗಿಲೆ’ಯ ಬಗ್ಗೆ ಕನ್ನಡ ನಿರ್ದೇಶಕನ ಬಯೋಪಿಕ್! ಯಾರಾಗಲಿದ್ದಾರೆ ಸರೋಜಿನಿ ನಾಯ್ಡು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts