More

    ಡೊನಾಲ್ಡ್​ ಟ್ರಂಪ್​​ ಟ್ವಿಟರ್​ ಖಾತೆ ಶಾಶ್ವತ ರದ್ದು ಮಾಡಿ ಟ್ವಿಟರ್​ ಕೊಟ್ಟ ಕಾರಣ ಹೀಗಿದೆ…

    ವಾಷಿಂಗ್ಟನ್​: ವಾಷಿಂಗ್ಟನ್​ ಡಿಸಿಯಲ್ಲಿನ ಕ್ಯಾಪಿಟಲ್​ ಹಿಲ್​ನಲ್ಲಿ ಎರಡು ದಿನಗಳ ಹಿಂದೆ ನಡೆದ ನಿರ್ಗಮಿತ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರ ನೂರಾರು ಬೆಂಬಲಿಗರ ಹಿಂಸಾಚಾರಕ್ಕೆ ವ್ಯಾಪಕ ಖಂಡನೆ ವ್ಯಕ್ತವಾದ ಬೆನ್ನಲ್ಲೇ​ ಟ್ವಿಟರ್​ ಶಾಶ್ವತವಾಗಿ ಟ್ರಂಪ್​ ಖಾತೆಯನ್ನು ತೆಗೆದುಹಾಕಿದೆ.

    ಟ್ರಂಪ್​ ಅವರ ಇತ್ತೀಚಿನ ಟ್ವೀಟ್​ಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಈಗಾಗಲೇ ಪೂರ್ಣ ಹತೋಟಿಗೆ ಬಂದಿರುವ ಹಿಂಸಾಚಾರವನ್ನು ಮತ್ತಷ್ಟು ಪ್ರಚೋದಿಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಛರಿಕಾ ಕ್ರಮವಾಗಿ ಟ್ರಂಪ್​ ಖಾತೆಯನ್ನು ಶಾಶ್ವತವಾಗಿ ತೆಗೆದು ಹಾಕಲಾಗಿದೆ ಎಂದು ಟ್ವಿಟರ್ ತಿಳಿಸಿದೆ.

    ಇದನ್ನೂ ಓದಿ: ಸೆಕ್ಸ್​ ಮಾಡುವಾಗ ಉಸಿರುಗಟ್ಟಿ ಸತ್ತೇ ಹೋದಳು… ಬ್ಯಾಚಲರ್​ ಮನೆಯಲ್ಲಿ ವಿವಾಹಿತೆ ಸಾವು!

    ಟ್ರಂಪ್​ ಬೆಂಬಲಿಗರ ಕ್ಯಾಪಿಟಲ್​ ಹಿಲ್​ ಹಿಂಸಾಚಾರದ ನಡುವೆಯೇ ಸಾಮಾಜಿಕ ಜಾಲತಾಣಗಳಲ್ಲಿ ಟ್ರಂಪ್ ವಿರುದ್ಧ ಕ್ರಮಕ್ಕೆ ಭಾರಿ ಒತ್ತಾಯಗಳು ಕೇಳಿಬಂದಿತ್ತು. ಇದರ ನಡುವೆಯೇ 88 ಮಿಲಿಯನ್​ ಫಾಲೋವರ್ಸ್​​ ಹೊಂದಿರುವ ಟ್ರಂಪ್​ ಟ್ವಿಟರ್​ ಖಾತೆಯನ್ನು ಬುಧವಾರ ತಾತ್ಕಾಲಿಕವಾಗಿ ರದ್ದು ಮಾಡಲಾಗಿತ್ತು. ಅಲ್ಲದೆ, ಪ್ರಚೋದನೆಯಿಂದಾಗಿ ಹಿಂಸಾಚಾರ ಮತ್ತಷ್ಟು ಹೆಚ್ಚಾದಲ್ಲಿ ಟ್ವಿಟರ್​ ಖಾತೆಯನ್ನು ಶಾಶ್ವತವಾಗಿ ರದ್ದು ಮಾಡುವ ಎಚ್ಚರಿಕೆಯನ್ನು ನೀಡಲಾಗಿತ್ತು.

    ಗುರುವಾರ ಟ್ರಂಪ್​ ಖಾತೆ ಮತ್ತೆ ಕಾರ್ಯಾರಂಭ ಮಾಡಿತು. ಅಲ್ಲದೆ, ನೀವು ನೀಡುವ ಹೇಳಿಕೆಗಳ ಮೇಲೆ ನಿರಂತರ ನಿಗಾ ಇರಿಸಲಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿತ್ತು. ಆದರೆ, ಇದೀಗ ಟ್ರಂಪ್​ ಖಾತೆಯನ್ನೇ ಶಾಶ್ವತವಾಗಿ ಟ್ವಿಟರ್​ ತೆಗೆದುಹಾಕಿದೆ. ಅಮೆರಿಕ ಜನರೊಂದಿಗೆ ಸಂಭಾಷಣೆ ನಡೆಸಲು ಟ್ರಂಪ್​ ಅವರಿಗೆ ಟ್ವಿಟರ್ ಉತ್ತಮ ವೇದಿಕೆಯಾಗಿತ್ತು. ಆದರೆ, ತಮ್ಮ ಸರ್ಕಾರದ ಉತ್ತಮ ಕಾರ್ಯಗಳ ಪ್ರಚಾರಕ್ಕೆ ಹಾಗೂ ಜನರ ಕಷ್ಟಗಳಿಗೆ ಬಳಸಿಕೊಳ್ಳದೆ, ಬಹುತೇಕ ದ್ವೇಷ ಭಾಷಣ ಮತ್ತು ತಪ್ಪು ಮಾಹಿತಿ ಹರಡಲು ಟ್ರಂಪ್​ ಬಳಸಿಕೊಳ್ಳುತ್ತಿದ್ದರು. ಈ ಹಿಂದೆ ಅನೇಕ ಬಾರಿ ಟ್ವಿಟರ್​ ಎಚ್ಚರಿಕೆಯನ್ನು ನೀಡಿ ಟ್ವೀಟ್​ ಡಿಲೀಟ್​ ಮಾಡಿದ ಪ್ರಸಂಗಗಳು ನಡೆದಿವೆ.

    ಇದನ್ನೂ ಓದಿ: ಮಗನ ವಿರುದ್ಧ ದೂರು ಕೊಡಲು ಬಂದವ ಪೊಲೀಸ್​ ಠಾಣೆ ಮುಂದೆಯೇ ನೇಣುಬಿಗಿದುಕೊಂಡ!

    ಕಳೆದ ಬುಧವಾರ ಡೆಮಾಕ್ರಟಿಕ್​ ಪಕ್ಷದ ಚುನಾಯಿತ ಅಧ್ಯಕ್ಷ ಜೋ ಬೈಡೆನ್ ಚುನಾವಣಾ ವಿಜಯವನ್ನು ಕಾಂಗ್ರೆಸ್​ ಸಭೆ ಪ್ರಮಾಣೀಕರಿಸುವುದನ್ನು ನಿಲ್ಲಿಸುವಂತೆ ಒತ್ತಾಯಿಸಿ ನಿರ್ಗಮಿತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಬೆಂಬಲಿಗರು ಯುಎಸ್​ ಕ್ಯಾಪಿಟಲ್​ ಕಟ್ಟಡ ಎದುರು ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ನಾಲ್ವರು ಸಾವಿಗೀಡಾಗಿದ್ದರು. ಅಲ್ಲದೆ, ಅನೇಕರು ಗಾಯಗೊಂಡಿದ್ದರು. ಸ್ವತಃ ಟ್ರಂಪ್ ಅವರ ರಿಪಬ್ಲಿಕನ್​ ಪಕ್ಷದ ನಾಯಕರೇ ಬೆಂಬಲಿಗರ ನಡೆಯನ್ನು ಕಟುವಾಗಿ ಟೀಕಿಸಿ ರಾಜೀನಾಮೆಗಳನ್ನು ನೀಡಿದ್ದಾರೆ.

    ಪ್ರತಿಭಟನೆ ತಣ್ಣಗಾದ ಬಳಿಕ ಡೆಮಾಕ್ರಟಿಕ್​ ಪಕ್ಷದ ಜೋ ಬೈಡೆನ್​ ಗೆಲವನ್ನು ಪ್ರಮಾಣೀಕರಿಸಲಾಗಿದ್ದು, ಜನವರಿ 20ರಂದು ಬೈಡೆನ್​ ನೂತನ ಅಧ್ಯಕ್ಷರಾಗಿ ಪ್ರಮಾಣ ಸ್ವೀಕಾರ ಮಾಡಲಿದ್ದಾರೆ. ಅದೇ ದಿನ ಭಾರತ ಮೂಲದ ಕಮಲ್ ಹ್ಯಾರಿಸ್ ಉಪಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. (ಏಜೆನ್ಸೀಸ್​)

    ನಾಲ್ವರ ಸಾವಿನ ನಂತರ ಕೊನೆಗೂ ಒಲ್ಲದ ಮನಸ್ಸಿನಿಂದ ಸೋಲೊಪ್ಪಿಕೊಂಡ ಟ್ರಂಪ್!

    ಬೈಡೆನ್​ ಗೆಲುವು ಪ್ರಮಾಣೀಕರಿಸದಂತೆ ಆಗ್ರಹ: ಡೊನಾಲ್ಡ್​ ಟ್ರಂಪ್​ ಬೆಂಬಲಿಗರ ಹಿಂಸಾಚಾರಕ್ಕೆ ನಾಲ್ವರು ಬಲಿ

    ಟ್ರಂಪ್​ ಬೆಂಬಲಿಗರ ಆಕ್ರೋಶ: ಯುಎಸ್ ಕ್ಯಾಪಿಟಲ್​ ಹಿಂಸಾಚಾರಕ್ಕೆ ಓರ್ವ ಬಲಿ, ಪ್ರಧಾನಿ ಮೋದಿ ಬೇಸರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts