More

    ದಂಪತಿಯನ್ನು ಕೊಲೆ ಮಾಡಿದ್ದು ಅವರ ಮಗ ಅಲ್ಲ, ಮತ್ತೆ ಯಾರು?

    ಬೆಂಗಳೂರು: ಜೆಪಿ ನಗರ ಏಳನೇ ಹಂತದ ಕೋಣನಕುಂಟೆ ಬಳಿ ದಂಪತಿಯನ್ನು ಭಾನುವಾರ ರಾತ್ರಿ ಕೊಲೆ ಮಾಡಿದವರು ಯಾರು ಎಂಬುದನ್ನು ಪೊಲೀಸರು ಸೋಮವಾರ ಬೆಳಗಾಗುವುದರಲ್ಲಿ ಪತ್ತೆ ಮಾಡಿದ್ದಾರೆ.

    ನಿವೃತ್ತ ಸರಕಾರಿ ನೌಕರರಾಗಿದ್ದ ಬಿ.ಜಿ. ಗೋವಿಂದಯ್ಯ (65) ಮತ್ತು ಶಾಂತಮ್ಮ (58) ಎಂಬ ವೃದ್ಧ ದಂಪತಿ ಕೊಲೆಯಾಗಿದ್ದರು. ಆರಂಭದಲ್ಲಿ ಪೊಲೀಸರು ದಂಪತಿಯ ಪುತ್ರ ನವೀನ್​ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಆಸ್ತಿ ವಿವಾದ ಅಥವಾ ಕೌಟುಂಬಿಕ ಕಲಹ ಈ ಘಟನೆಗೆ ಕಾರಣ ಆಗಿರಬಹುದು. ಮದ್ಯದ ಅಮಲಿನಲ್ಲಿ ನವೀನ್​ ಈ ಕೃತ್ಯ ಎಸಗಿರಬಹುದು ಎಂಬುದು ಪೊಲೀಸರ ಶಂಕೆಯಾಗಿತ್ತು.

    ಇದನ್ನೂ ಓದಿ: ಭಾರತಕ್ಕೆ ಬುದ್ಧಿ ಕಲಿಸ್ತೇನಂತ ಹೋದ ಪಾಕ್​ಗೆ ಹೀಗೆ ಮುಖಭಂಗ ಆಗೋದಾ…!

    ಆದರೆ ಅಲ್ಲಿ ಆಗಿರುವುದೇ ಬೇರೆ. ನವೀನ್ ಎಂದಿನಂತೆ ಸಂಜೆ ಮನೆಯಿಂದ ಹೊರಹೋಗಿದ್ದ. ಅವನು ರಾತ್ರಿ ಮನೆಗೆ ಮರಳುವಷ್ಟರಲ್ಲಿ ಆತನ ಪಾಲಕರನ್ನು ಕೊಲೆ ಮಾಡಲಾಗಿತ್ತು. ಆದರೆ ಈ ಕೊಲೆಯ ರಹಸ್ಯ ಆತ ಪೊಲೀಸರಿಗೆ ಕೊಟ್ಟಿದ್ದ ದೂರಿನಲ್ಲಿ ಅಡಗಿತ್ತು.

    ನಾನು 2008ರಲ್ಲಿ ಪವಿತ್ರಾ ಎಂಬಾಕೆಯನ್ನು ಮದುವೆಯಾಗಿದ್ದೆ. ಆದರೆ ನಮ್ಮಿಬ್ಬರ ನಡುವೆ ಹೊಂದಾಣಿಕೆ ಇರಲಿಲ್ಲ. ಹಾಗಾಗಿ ಆಕೆ ಕೆಲವು ದಿನಗಳ ಬಳಿಕ ತನ್ನ ತವರಿಗೆ ಮರಳಿದ್ದಳು. ಕೌಟುಂಬಿಕ ನ್ಯಾಯಾಲಯದಲ್ಲಿ ರಾಜಿಯಾದ ಬಳಿಕ ಮತ್ತೆ ನನ್ನೊಂದಿಗೆ ಸಂಸಾರ ಮಾಡಲು ಮುಂದಾಗಿದ್ದಳು. ಆದರೂ ನಮ್ಮಿಬ್ಬರ ನಡುವೆ ಆಗಾಗ ಜಗಳಗಳು ನಡೆಯುತ್ತಲೇ ಇದ್ದವು. ಜಗಳವಾದಾಗಲೆಲ್ಲ ಆಕೆ ತವರಿಗೆ ಹೋಗಿತ್ತಿದ್ದಳು. ಇದರಿಂದಾಗಿ ಆಕೆಯ ತಮ್ಮ ರಾಕೇಶ್‌ಗೆ ನಮ್ಮ ಕುಟುಂಬದ ಮೇಲೆ ದ್ವೇಷ ಮೂಡಿತ್ತು ಎಂದು ದೂರಿನಲ್ಲಿ ಹೇಳಿದ್ದ.

    ಇದನ್ನೂ ಓದಿ: ಮುಂಬೈನಿಂದ ವಿಜಯಪುರಕ್ಕೆ ಸದ್ದಿಲ್ಲದೇ ಕಾಲಿಟ್ಟರು ತಬ್ಲಿಘಿಗಳು- ಜಿಲ್ಲಾಡಳಿತ ಮಾಡಿದ್ದೇನು?

    ಇದೇ ರೀತಿ ಜಗಳವಾಡಿಕೊಂಡು ಪವಿತ್ರಾ ತನ್ನ ತವರಿಗೆ ಹೋಗಿದ್ದಳು. ಈ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ ನಾನು ಪವಿತ್ರಾಳ ಮನೆಗೆ ಫೋನ್ ಮಾಡಿ ಆಕೆಯನ್ನು ಕಳುಹಿಸಿಕೊಡುವಂತೆ ಹೇಳಿದ್ದೆ. ಆಗ ನನ್ನ ಮತ್ತು ರಾಕೇಶ್​ ನಡುವೆ ವಾಗ್ವಾದ ಏರ್ಪಟ್ಟಿತ್ತು. ಆಗ ರಾಕೇಶ್ ‘ನಾನೇ ನಿಮ್ಮ ಮನೆಗೆ ಬರುತ್ತೇನೆ, ಬಂದು ಏನು ಮಾಡುತ್ತೇನೆ ನೋಡು ಎಂದು ಬೆದರಿಕೆ ಹಾಕಿದ್ದ ಎಂದು ತಿಳಿಸಿದ್ದ.

    ‘ನಾನು ಸಂಜೆ 7.30ಕ್ಕೆ ಎಂದಿನಂತೆ ಮನೆಯಿಂದ ಹೊರಗೆ ಹೋದೆ. ರಾತ್ರಿ 8.45ರೊಳಗೆ ನಮ್ಮ ಮನೆಗೆ ಬಂದಿರುವ ರಾಕೇಶ್ ನನ್ನ ತಂದೆ-ತಾಯಿ ಮೇಲೆ ಚೂರಿಯಿಂದ ಹಲ್ಲೆ ಮಾಡಿ ಕೊಲೆ ಮಾಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದ.

    ಇದನ್ನೂ ಓದಿ: ‘ನನ್ನೊಂದಿಗೆ ಎಲ್ಲರೂ ಸಂಪರ್ಕ ಕಳೆದುಕೊಂಡರು, ಯಾರೂ ಮಾತಾಡಲಿಲ್ಲ’: ಕ್ರಿಕೆಟರ್​ ಶ್ರೀಶಾಂತ್​ ನೋವು…

    ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ನವೀನ್, ಮದ್ಯಪಾನ ಮಾಡಿ ರಾತ್ರಿ 10.30ಕ್ಕೆ ಮನೆಗೆ ಮರಳಿದಾದ ಪಾಲಕರ ಹತ್ಯೆಯಾಗಿರುವುದು ಗೊತ್ತಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಬಂದ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಸೆಪಟ್ ಕೋಣನಕುಂಟೆ ಇನ್​ಸ್ಪೆಕ್ಟರ್​ ಧರ್ಮೇಂದ್ರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿದ್ದರು. ಈ ತಂಡ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಕೊಲೆ ರಹಸ್ಯವನ್ನು ಭೇದಿಸಿದೆ.

    ಕೊಲೆಯಾದ ದಂಪತಿಯ ಸೊಸೆಯ ಸೋದರ ಆವಲಹಳ್ಳಿಯ ರಾಕೇಶ್ ಅಲಿಯಾಸ್ ರಾಕ್ಸ್ (25) ಈ ಕೊಲೆ ಮಾಡಿರುವುದು ಖಚಿತವಾಗಿದ್ದು, ಆತನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    2.6 ಲಕ್ಷ ವಿದ್ಯಾರ್ಥಿಗಳಿಂದ 7,255 ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ನಡೀತಿರೋದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts