More

    ಪಡ್ಡೆ ಹುಡುಗ್ರು ಬ್ಲೂಫಿಲ್ಮ್​ಗೆ ಕಾದು ಕೊನೆಗೆ ಏನಿಲ್ಲ ಎಂಬತಾಯಿತು: ಉಪ್ಪಿ ಫ್ಯಾನ್ಸ್​ ಕಾಲೆಳೆದ ಅನುಪಮಾ!

    ಬೆಂಗಳೂರು: ಕೂಡ್ಲಿಗಿಯ ಮಾಜಿ ಡಿವೈಎಸ್ಪಿ ಹಾಗೂ ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಅನುಪಮಾ ಶೆಣೈ ಅವರು ಅವರು ನಟ, ನಿರ್ದೇಶಕ ಹಾಗೂ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ವಿರುದ್ಧ ಸರಣಿ ಟ್ವೀಟ್​ಗಳ ಮೂಲಕ ಕಿಡಿಕಾರಿದ್ದು, ಅನುಪಮಾ ಹಾಗೂ ಉಪೇಂದ್ರ ಅಭಿಮಾನಿಗಳ ನಡುವಿನ ಟ್ವೀಟ್​ ವಾರ್​ಗೆ ದಾರಿಯಾಗಿದೆ.

    ಮೊದಲು ಆರಂಭವಾಗಿದ್ದು ಹೇಗೆ?
    ಇದು ಶುರುವಾಗಿದ್ದು ಜುಲೈ 6ರಿಂದ. ಅಂದು ಅನುಪಮಾ ಅವರು ತಮ್ಮ ಟ್ವೀಟರ್​ನಲ್ಲಿ ಫೋಟೋವೊಂದನ್ನು ಪೋಸ್ಟ್​ ಮಾಡಿ, ಫೇಸ್​ಬುಕ್​ನಲ್ಲಿ ಈ ಚಿತ್ರ ನೋಡೋಕ್ಕೆ ಸಿಕ್ಕಿತು. ಈ ರೀತಿಯಾಗಿ ಹರಡುತ್ತಿರುವುದು ಕೊರೊನಾ, ಪ್ರಜಾಕೀಯ ಅಲ್ಲ ಎಂದು ವ್ಯಂಗ್ಯವಾಡಿದ್ದರು. ಇದನ್ನು ಕಂಡ ಉಪ್ಪಿ ಅಭಿಮಾನಿಗಳು ಪ್ರಜಾಕೀಯ ಹರಡಿದರೆ ನಿಮಗೇನು ತೊಂದರೆ ಎಂದು ಪ್ರಶ್ನಿಸುವ ಮೂಲಕ ಅನುಪಮಾ ವಿರುದ್ಧ ಟೀಕಾಸ್ತ್ರ ಬಳಿಸಿದ್ದರು.

    ಇದನ್ನೂ ಓದಿ: ಸತ್ತಿದ್ದು ಡಿಸೆಂಬರ್‌ನಲ್ಲಿ ಮೃತದೇಹ ಬಂದಿದ್ದು ಈಗ: ಕೆಲಸಕ್ಕೆಂದು ಮಲೇಷ್ಯಾಗೆ ಹೋಗಿ ಶವವಾದ ಯುವಕ!

    ಇದಕ್ಕೆ ಬಗ್ಗದ ಅನಪಮಾ ಅವರು ಪ್ರತಿಯಾಗಿ ಕೊರೊನಾಗೂ ಪ್ರಜಾಕೀಯಕ್ಕೂ ಇರುವ ವ್ಯತ್ಯಾಸ? ಕೊರೊನಾ ಬರದಂತೆ ತಡೆಗಟ್ಟಲು ಮಾಸ್ಕ್ ಹಾಕಿಕೊಳ್ಳಬೇಕು. ಪ್ರಜಾಕೀಯ ಸಭ್ಯತೆ, ಒಳ್ಳೆಯತನದ ಮಾಸ್ಕ್ (ಮುಖವಾಡ) ಧರಿಸಿಕೊಂಡು ನಮ್ಮ ಹತ್ತಿರ ಬರುತ್ತಿದೆ. ಎರಡೂ ಅಪಾಯ. ಇಬ್ಬರ ಬಗ್ಗೆಯೂ ಎಚ್ಚರಿಕೆಯಿಂದಿರಿ ಎಂದಿದ್ದರು.

    ಕೊರೊನಾ ಹೇಗೆ ಚೀನಾದ ಲ್ಯಾಬ್​ಗಳಲ್ಲಿ ಇತ್ತೋ ಹಾಗೇ ಪ್ರಜಾಕೀಯ ಸಹ ಈಗ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಇದೆ. ಸಮುದಾಯಕ್ಕೆ ಹರಡುವ ಮೊದಲು ಸರಕಾರ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದಲ್ಲಿ ಬಿಜೆಪಿ ಸರಕಾರಕ್ಕೆ ಹೇಗೆ ಕರೊನಾ ತಡೆಗಟ್ಟಲು ಸಾಧ್ಯವಾಗಿಲ್ಲವೋ? ಅದೇ ರೀತಿ ಪ್ರಜಾಕೀಯ ಎಂಬ ವೈರಸ್​ ಅನ್ನು ತಡೆಗಟ್ಟಲು ಸಾಧ್ಯವಾಗುವುದಿಲ್ಲ ಎಂದು ಅಭಿಮಾನಿಗಳ ಟೀಕೆಗೆ ತಮ್ಮ ಟೀಕಾಸ್ತ್ರ ಪ್ರಯೋಗಿಸಿದರು.

    ಇಷ್ಟಕ್ಕೆ ಸುಮ್ಮನಾಗದ ಅನುಪಮಾ ಅವರು ಉಪೇಂದ್ರರ ಸಿನೆಮಾಗಳೇ ಅವರ ಬಂಡವಾಳವನ್ನು ತಿಳಿಸುತ್ತದೆ. ‘ಓಂ’ ಅಂತ ಶಾಂತಿ ಮಂತ್ರದ ಹೆಸರಿಟ್ರು, ಚಿತ್ರದಲ್ಲಿದ್ದಿದ್ದು ಬರೀ ಹಿಂಸೆ. ‘A’ ಅಂತ ಹೆಸರಿಟ್ರು, ಪಡ್ಡೆ ಹುಡುಗರೆಲ್ಲ ಬ್ಲೂಫಿಲ್ಮ್​ಗೆ ಕಾದು ಕೊನೆಗೆ ‘ಏನಿಲ್ಲ ಏನಿಲ್ಲ’ ಅನ್ನುವಂತಾಯಿತು. ಅದೇ ರೀತಿ ‘ಪ್ರಜಾಕೀಯ’. ಅದಕ್ಕಿಂತ ದೊಡ್ಡ ಮೋಸ ಮತ್ತೊಂದಿರೋದಿಲ್ಲ ಕಾದುನೋಡಿ ಎಂದು ಕಿಚಾಯಿಸಿದರು.

    ಇದನ್ನೂ ಓದಿ: ಕಾನ್ಪುರ ಪೊಲೀಸರ​ ಹತ್ಯೆ ಪ್ರಕರಣ: ಆರೋಪಿ​ ವಿಕಾಸ್​ ದುಬೆ ಆಪ್ತ ಅಮರ್​ ದುಬೆ ಎನ್​ಕೌಂಟರ್​ನಲ್ಲಿ ಫಿನಿಶ್​

    ಅನುಪಮಾ ವಿರುದ್ಧ ಮುಗಿಬಿದ್ದ ಉಪ್ಪಿ ಅಭಿಮಾನಿಗಳು
    ಇತ್ತ ಉಪ್ಪಿ ಅಭಿಮಾನಿಗಳೇನು ಸುಮ್ಮನೇ ಇರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಅನುಪಮಾ ಅವರನ್ನು ತರಾಟೆಗೆ ತೆಗೆದುಕೊಂಡರು. ಹರಡಿದವರು ಯಾರು? ಸ್ವಲ್ಪ ಬಿಡಿಸಿ ಹೇಳಿ ದೇಶದಲ್ಲಿ ಹೆಚ್ಚು ಯಾರಿಗೆ ಕರೊನ ಇರುವುದು? ಹರಡದೇನೇ ಪ್ರಜಾಕೀಯ ಇದೆ ಅಂತ ನಿಮಗೆ ಹೇಗೆ ಗೊತ್ತಾಯಿತು ಮೇಡಂ? ನಿಮ್ಮವರಿಗೂ ಹರಡಿದೆ ಅಂತಾಯ್ತಲ್ಲಾ? ಹೀಗೆ ಸಾಲು ಸಾಲು ಪ್ರಶ್ನೆಗಳೊಂದಿಗೆ ಕೆಲವರು ಅನುಪಮಾ ಅವರನ್ನು ನಿಂದಿಸಿದರು.

    ಪ್ರಜಾಕೀಯ ಎಂಬುದು ಹೊಸ ಬಾಟಲಿಯಲ್ಲಿ ಹಳೇ ಮದ್ಯ
    ಇಷ್ಟಕ್ಕೆ ನಿಲ್ಲಿಸದೇ ಪ್ರಜಾಕೀಯ ವಿರುದ್ಧ ಸಮರ ಸಾರಿದ ಅನುಪಮಾ, ಪೊಲೀಸರು ಕಳ್ಳರ ಬಗ್ಗೆ ಎಚ್ಚರಿಕೆ ನೀಡಬಹುದು ಅಷ್ಟೆ. ಮೋಸ ಹೋಗೇ ಹೋಗ್ತಿವಿ ಅನ್ನೋ ಹಠ ನಿಮ್ಮದಾದರೆ ಏನು ಮಾಡಲು ಸಾಧ್ಯವಿಲ್ಲ. ಪ್ರಜಾಕೀಯ ಎಂಬುದು ಹೊಸ ಬಾಟಲಿಯಲ್ಲಿ ಹಳೇ ಮದ್ಯ. ಮುಂದೆ ಅದೇ ರಾಜಕೀಯ. ಪೊಲೀಸ್ ಆಗಿದ್ದೆ, ನಿಮ್ಗಳ ಮೇಲೆ ಪ್ರೀತಿ ಇದೆ. ಅದಕ್ಕೇ ಮುಜಾಂಗ್ರತೆ ಹೇಳ್ತಾ ಇದ್ದೀನಿ. ಎಚ್ಚರಿಕೆ ವಹಿಸಿಕೊಳ್ಳೋದು, ಬಿಡೋದು ನಿಮ್ಮಿಷ್ಟ ಎಂದರು.

    ಪಬ್-ಜಿ, ಪ್ರಜಾಕೀಯ ಜಾಲತಾಣದಲ್ಲಿ ನಡೆಯುತ್ತಿರುವ ಜನಪ್ರಿಯ ಆಟ
    ಪಬ್-ಜಿ ಮತ್ತು ಪ್ರಜಾಕೀಯ ಎರಡೂ ಜಾಲತಾಣದಲ್ಲಿ ನಡೆಯುತ್ತಿರುವ ಜನಪ್ರಿಯ ಆಟಗಳು. ಎರಡರಿಂದಲೂ ಯುವಜನತೆಯ ಟೈಮ್ ವೇಸ್ಟ್. ಉಪೇಂದ್ರ ಸಾಮಾಜಿಕ ಜಾಲತಾಣದಲ್ಲಿ ಬುರುಡೆ ಬಿಡೋದನ್ನು ರಾಜಕೀಯವಾಗಿ ಕಾಂತ್ರಿ ಅಂತ ಭಾವಿಸೋದೂ ಪಬ್-ಜಿಯಲ್ಲಿ ಆಡಿದ್ದೇ ನಿಜವಾದ ಯುದ್ಧ ಅಂತ ಭಾವಿಸೋದು ಎರಡೂ ಒಂದೆ ಎಂದು ಅಭಿಮಾನಿಗಳ ವಿರುದ್ಧ ಅನುಪಮಾ ಕಿಡಿಕಾರಿದ್ದಾರೆ.

    ಇದನ್ನೂ ಓದಿ: ಕರೊನಾ ಕ್ವಾರಂಟೈನ್​ಗೆ ಮನನೊಂದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

    ಇದಕ್ಕೆ ಪ್ರತಿಯಾಗಿ ಉಪ್ಪಿ ಅಭಿಮಾನಿಗಳು ನೀವು ನಟನೆ ಮಾಡಿಲ್ಲ ನಿಜ. ನೀವು ಪೋಲಿಸ್ ಅಧಿಕಾರಿ ಆಗಿದ್ದಾಗ ಜನಕ್ಕೆ ಏನು ಮಾಡಿಲ್ಲ ಅಂತ ಸ್ಪಷ್ಟವಾಗಿ ಗೊತ್ತು. ಏಕೆಂದರೆ ಜನರು ಕೆಲಸ ನಿಮ್ಮಿಂದ ಆಗೇ ಇಲ್ಲಾ. ಆದರೆ ಉಪ್ಪಿ ಅದನ್ನ ಮಾಡಿದ್ದಾರೆ. ನೀವೊಬ್ಬರು ಪೋಲಿಸ್ ಅಧಿಕಾರಿಯಾಗಿದ್ದಾಗ ನಿಮ್ಮ ನಡೆಯ ಬಗ್ಗೆ ಗೌರವ ಇತ್ತು. ಆದರೆ, ಪ್ರಜಾಕೀಯ ಅಂತ ಒಳ್ಳೆಯ ವಿಚಾರ ಇರುವ ಪಕ್ಷದ ಬಗ್ಗೆ ಮಾತಾಡ್ತಿರಾ ಅಂದ್ರೆ, ನಿಮ್ಮ ರಾಜಕೀಯ ಕೊಳಕು ಮನಸ್ಥಿತಿ ಏನೂ ಅಂತ ತೋರಿಸ್ತಿದೆ ಎನ್ನುತ್ತಾ ಹೀಗೆ ಅನೇಕ ಉಪ್ಪಿ ಅಭಿಮಾನಿಗಳು ಅನುಪಮಾ ವಿರುದ್ಧ ಸಾಲು ಸಾಲಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    6ನೇ ತರಗತಿ ವಿದ್ಯಾರ್ಥಿ ರೇಪ್ ಮಾಡಿ ಶಿಕ್ಷೆ ಬಳಿಕ ಮದ್ವೆಯಾಗಿ ಕ್ಯಾನ್ಸರ್​ಗೆ ತುತ್ತಾದ ಶಿಕ್ಷಕಿಯ ದುರಂತ ಕತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts