More

    ನಗುತ್ತಲೇ ಸೆಲ್ಫಿಗೆ ಪೋಸ್​​ ನೀಡಿ ಗರ್ಭಿಣಿ ಪತ್ನಿಯನ್ನು ಬೆಟ್ಟದಿಂದ ನೂಕಿದ ಪತಿಗೆ 30 ವರ್ಷ ಜೈಲು ಶಿಕ್ಷೆ!

    ಅಂಕಾರಾ (ಟರ್ಕಿ): ಶಿಖರದ ತುತ್ತ ತುದಿಯಲ್ಲಿ ಗರ್ಭಿಣಿ ಪತ್ನಿಯೊಂದಿಗೆ ನಗು ನಗುತ್ತಲೇ ರೊಮ್ಯಾಂಟಿಕ್​ ಸೆಲ್ಫಿಗೆ ಪೋಸ್​​ ನೀಡಿದ ಪತಿರಾಯ, ಮರುಕ್ಷಣವೇ ಆಕೆಯನ್ನು ಬೆಟ್ಟದಿಂದ ನೂಕಿ ಕೊಲೆ ಮಾಡಿರುವ ಘಟನೆ ಟರ್ಕಿಯಲ್ಲಿ 2018ರಲ್ಲಿ ನಡೆದಿತ್ತು. ಇದು ಆಕಸ್ಮಿಕ ಘಟನೆಯಲ್ಲಿ ಕೊಲೆ ಎಂಬುದು 2021ರಲ್ಲಿ ಬಯಲಾಗಿತ್ತು. ಇದೀಗ ನ್ಯಾಯಾಲಯ ಆರೋಪಿ ಪತಿಗೆ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ.

    ಸೆಮ್ರಾ ಅಯ್ಸಾಲ್​ (32) ಮೃತ ದುರ್ದೈವಿ. ಆರೋಪಿ ಪತಿ ಹಕನ್​ ಅಯ್ಸಾಲ್​ (40) ಮಾಡಿದ ತಪ್ಪಿಗೆ ಇದೀಗ ಶಿಕ್ಷೆಗೆ ಗುರಿಯಾಗಿದ್ದಾನೆ. ಗರ್ಭಿಣಿ ಪತ್ನಿಯೊಂದಿಗೆ ಆರೋಪಿ ಹಕನ್, ಟರ್ಕಿಯ ಮುಗ್ಲಾ ನಗರದ ಬಟರ್​ಫ್ಲೈ ಕಣಿವೆಗೆ​ ರಜಾ ದಿನದಂದು ತೆರಳಿದ್ದರು. ಈ ವೇಳೆ ಏಳು ತಿಂಗಳ ಗರ್ಭಿಣಿಯಾಗಿದ್ದ ಸೆಮ್ರಾಳನ್ನು ಬೆಟ್ಟದಿಂದ ನೂಕಿ ಕೊಲೆ ಮಾಡಿದ್ದನು. ಅಂದಹಾಗೆ ಈ ಘಟನೆ 2018ರ ಜೂನ್​ ತಿಂಗಳಲ್ಲಿ ನಡೆದಿತ್ತು. ಹೊರಗಿನ ಪ್ರಪಂಚ ನೋಡುವ ತವಕದಲ್ಲಿದ್ದ ಮಗು ಮತ್ತು ಮಗುವನ್ನು ಎದುರು ನೋಡಲು ಕಾದಿದ್ದ ತಾಯಿ ಇಬ್ಬರು ಪ್ರಾಣ ಕಳೆದುಕೊಂಡಿದ್ದರು. ಒಟ್ಟಿಗೆ ಶಿಖರವೇರಿದ್ದ ದಂಪತಿ ಸಾಕಷ್ಟು ಫೋಟೋಗಳನ್ನು ತೆಗೆದುಕೊಂಡಿದ್ದರು. ಇದಾದ ಕೆಲವೇ ಕ್ಷಣಗಳಲ್ಲಿ ಹತ್ಯೆ ಮಾಡಿದ್ದ.

    ಆರಂಭದಲ್ಲಿ ಇದೊಂದು ಅಪಘಾತ ಎಂದು ಬಿಂಬಿಸಲಾಗಿತ್ತು. ಆದರೆ, ವೈಯಕ್ತಿಕ ಅಪಘಾತ ವಿಮೆ ಖಾತರಿಯೊಂದಿಗೆ, ಒಬ್ಬನೇ ಫಲಾನುಭವಿ ಆದ ಕಾರಣ ಇನ್ಶುರೆನ್ಸ್ ಪಡೆದುಕೊಳ್ಳಲು ಪತಿಯೇ ಮಾಡಿದ ಪೂರ್ವ ನಿಯೋಜಿತ ಕೊಲೆ ಎಂಬುದು​ 2021ರಲ್ಲಿ ನ್ಯಾಯಾಲಯದಲ್ಲಿ ಬಯಲಾಯಿತು. ಅದಕ್ಕೆ ಬಲವಾದ ಸಾಕ್ಷಿಗಳು ಸಹ ದೊರೆತಿದೆ. ತನ್ನ ಯೋಜನೆ ಪ್ರಕಾರ ಮೊದಲು ಪತ್ನಿಯನ್ನು ಹೊರಗೆ ಕರೆದುಕೊಂಡು ಹೋದ ಪತಿ, ಪತ್ನಿಯನ್ನು ಶಿಖರದ ತುದಿಗೆ ಕರೆದೊಯ್ದು ಅಲ್ಲಿ ಮೂರು ಗಂಟೆ ಒಟ್ಟಿಗೆ ಸಮಯ ಕಳೆದಿದ್ದಾನೆ. ಬಳಿಕ ಸುತ್ತಮುತ್ತ ಯಾರು ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಆಕೆಯನ್ನು ನೂಕಿ ತನ್ನ ಕೃತ್ಯವನ್ನು ಸಾಧಿಸಿದ್ದಾನೆಂದು ವಕೀಲರು ನ್ಯಾಯಾಲಯದ ಎದುರು ತಿಳಿಸಿದ್ದರು. ಕೊಲೆಗೂ ಮುನ್ನ ಪತ್ನಿಯೊಂದಿಗೆ ನಗುತ್ತಲೇ ಹಕನ್​ ಪೋಸ್​ ನೀಡಿದ್ದ.

    ಕೊಲೆಯಾದ ಕೆಲವೇ ದಿನಗಳಲ್ಲಿ ಪತ್ನಿಯ ಹೆಸರಿನಲ್ಲಿದ್ದ 25 ಸಾವಿರ ಡಾಲರ್​ ( 20,63,820 ರೂಪಾಯಿ) ಇನ್ಶುರೆನ್ಸ್​ ಹಣವನ್ನು ಪಡೆಯಲು ಹಕನ್ ಅರ್ಜಿ ಸಲ್ಲಿಸಿದ್ದ. ಈ ನಡೆಯೇ ಆತನ ಮೇಲೆ ಅನುಮಾನ ಬರಲು ಕಾರಣವಾಗಿತ್ತು. ಅಲ್ಲದೆ, ಪತ್ನಿ ಮೃತಪಟ್ಟ ಬಗ್ಗೆ ಆತನಿಗೂ ಒಂದು ಚೂರು ನೋವು ಇರಲಿಲ್ಲ. ಘಟನೆಯ ಬಳಿಕ ಸೆಮ್ರಾಳ ಮೃತದೇಹವನ್ನು ಸ್ವೀಕರಿಸಲು ಫೋರೆನ್ಸಿಕ್ ಮೆಡಿಸಿನ್ ಇನ್ಸ್ಟಿಟ್ಯೂಟ್​ಗೆ ತೆರಳಿದಾಗ ಹಕನ್​ ಕಾರಿನಲ್ಲಿಯೇ ಕುಳಿತಿದ್ದ. ಸೆಮ್ರಾಳ ಮೃತದೇಹ ನೋಡಿ ಇಡೀ ಕುಟುಂಬವೇ ಆಘಾತಕ್ಕೆ ಒಳಗಾದಾಗ, ಹಕನ್​ ಮುಖದಲ್ಲಿ ಸ್ವಲ್ಪವೂ ನೋವು ಕಾಣಿಸಲಿಲ್ಲ ಎಂದು ಸೆಮ್ರಾಳ ಸಹೋದರ ತಿಳಿಸಿದ್ದ. ಇದರಿಂದ ಅನುಮಾನಗೊಂಡ ಪಾಲಕರು ದೂರು ನೀಡಿದ್ದರು. ಬಳಿಕ ಪೊಲೀಸರು ತನಿಖೆ ಘೋಷಣೆ ಮಾಡಿದಾಗ ಇನ್ಶುರೆನ್ಸ್​ ಹಣ ಪಡೆಯುವ ಅರ್ಜಿಯನ್ನು ತಡೆಹಿಡಿಯಲಾಯಿತು. ಅಂತಿಮವಾಗಿ ಹಕನ್​ ಅಸಲಿಯತ್ತು ತನಿಖೆಯಲ್ಲಿ ಬಯಲಾಯಿತು.

    ಸೆಮ್ರಾ ಹೆಸರಲ್ಲಿ ಅನೇಕ ಇನ್ಶುರೆನ್ಸ್​ಗಳಿದ್ದವು. ಪತಿಯೊಂದಿಗೆ ಮಾತನಾಡಿದ್ದ ಸೆಮ್ರಾ, 2014ರಿಂದಲೂ ನನಗೆ ಕ್ರೀಡೆಯ ಮೇಲೆ ಆಸಕ್ತಿ ಹೊಂದಿದ್ದೇನೆ. ಪ್ಯಾರಾಚೂಟ್​, ಬಂಗೀ ಜಂಪಿಂಗ್​, ರ್ಯಾಪ್ಟಿಂಗ್​ ಮುಂತಾದ ಕ್ರೀಡೆಯ ಮೇಲೆ ಆಸಕ್ತಿ ಇದೆ ಎಂದು ಹೇಳಿದ್ದಳು. ಮದುವೆಗೂ ಮುನ್ನವೇ ಇನ್ಶುರೆನ್ಸ್​ ಹೊಂದಿರುವುದಾಗಿ ಸೆಮ್ರಾ ತಿಳಿಸಿದ್ದಳು. ಈ ಹಿನ್ನೆಲೆಯಲ್ಲಿ ಪೂರ್ವ ನಿಯೋಜಿತವಾಗಿ ಆಕೆಯನ್ನು ಹತ್ಯೆ ಮಾಡಲಾಗಿದೆ. ಇದೀಗ ಆರೋಪ ಸಾಬೀತಾಗಿದ್ದು, ಟರ್ಕಿ ನ್ಯಾಯಾಲಯ 30 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. (ಏಜೆನ್ಸೀಸ್​)

    ವಿಜಯವಾಣಿ ಅಚ್ಚಗನ್ನಡ ಅಭಿಯಾನ: ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ

    ‘ಡ್ರೋನ್​ ಪ್ರತಾಪ್​ ನಾನು ಒಂದೇ ತಾಯಿಯ ಮಕ್ಕಳಿದ್ದಂಗೆ, ನಾನು ಹುಣ್ಣಿಮೇಲಿ ಹುಟ್ಟಿದೆ ಆತ ಹುಟ್ಟಿದಾಗ ಕರೆಂಟ್ ಹೋಗಿತ್ತು’

    ಸಿಎಂ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದ ಮುದ್ದಹನುಮೇಗೌಡ, ಶಶಿಕುಮಾರ್​, ಅನಿಲ್​ಕುಮಾರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts