More

    ಟರ್ಕಿ ವಿರುದ್ಧ ತಿರುಗಿ ಬಿದ್ದ ವಿಶ್ವ ಕ್ರೈಸ್ತ ಸಮುದಾಯ; ಮಸೀದಿಯಾಗಿ ಮಾರ್ಪಟ್ಟ ಸರ್ವಜನಾಂಗದ ತಾಣ

    ಇಸ್ತಾನ್​ಬುಲ್​: ಜಗತ್ತಿನ ಎಲ್ಲ ದೇಶಗಳಿಂದ ಎಲ್ಲ ಜನಾಂಗದವರು ಅದೊಂದು ತಾಣವನ್ನು ನೋಡಲು ಟರ್ಕಿಗೆ ಆಗಮಿಸುತ್ತಿದ್ದರು. ಆದರೆ, ಅದನ್ನು ಮುಸ್ಲಿಮರ ಪ್ರಾರ್ಥನೆಗೆ ಮೀಸಲಾದ ಮಸೀದಿಯನ್ನಾಗಿ ಮಾಡಿದೆ ಟರ್ಕಿ.

    6ನೇ ಶತಮಾನದಲ್ಲಿ ಬೈಜಂಟೇನ್​ ಆಳ್ವಿಕೆದಾರರು ಅದ್ಭುತವಾಸ್ತುಶಿಲ್ಪದ ಕ್ಯಾಥಡ್ರಲ್​ ನಿರ್ಮಿಸಿದ್ದರು. ಬಳಿಕ ಒಟ್ಟೊಮನ್​ ಆಡಳಿತದಲ್ಲಿ ಅದನ್ನು ಮಸೀದಿಯಾಗಿ ಮಾರ್ಪಡಿಸಲಾಯಿತು. ನೀಲಿ ಮಸೀದಿ ಎಂದೂ ಇದನ್ನು ಕರೆಯಲಾಗುತ್ತಿತ್ತು. 1934ರಲ್ಲಿ ಇದನ್ನು ಸರ್ವಜನಾಂಗದವರು ಭೇಟಿ ನೀಡಲು ಅನುವಾಗುವ ವಸ್ತುಸಂಗ್ರಹಾಲಯವೆಂದು ಘೋಷಿಸಲಾಯಿತು. ಜತೆಗೆ, ವಿಶ್ವ ಪಾರಂಪರಿಕ ತಾಣವೆಂಬ ಮಾನ್ಯತೆಯೂ ದೊರೆಯಿತು.

    ಇದನ್ನೂ ಓದಿ; ಕದ್ದ ಹಣದಿಂದಲೇ ಖರೀದಿಸಿದ್ದ ಖಾಸಗಿ ವಿಮಾನ; ಸೈಬರ್​ ಫ್ರಾಡ್​ನಲ್ಲಿ ಈತನನ್ನು ಮೀರಿಸೋರೆ ಇಲ್ಲ…!

    ಆದರೆ, ಶುಕ್ರವಾರ ಇದನ್ನು ಮಸೀದಿಯನ್ನಾಗಿಸಲು ಎಂದು ಟರ್ಕಿ ನ್ಯಾಯಾಲಯ ಅವಕಾಶ ನೀಡಿದೆ. ಆಸ್ತಿ ದಾಖಲೆಗಳಲ್ಲಿ ಇದನ್ನು ಮಸೀದಿ ಎಂದೇ ಕರೆಯಲಾಗಿದೆ ಎಂದು ಆದೇಶ ನೀಡಿದೆ. 1934ರಲ್ಲಿ ವಸ್ತು ಸಂಗ್ರಹಾಲಯವೆಂದು ಕರೆಯಲಾಗಿದ್ದ ಟರ್ಕಿ ಸಂಪುಟ ಸಭೆಯ ನಿರ್ಣಯವನ್ನು ರದ್ದುಗೊಳಿಸಿದೆ.

    ಸಹಜವಾಗಿಯೇ ಇದು ವಿಶ್ವಾದ್ಯಂತ ಕ್ರೈಸ್ತ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ನೆರೆಯ ಗ್ರೀಸ್​ ದೇಶವಂತೂ ಟರ್ಕಿ ಕ್ರಮವನ್ನು ತೀವ್ರವಾಗಿ ಖಂಡಿಸಿದೆ. ಟರ್ಕಿ ಆರು ಶತಮಾನಗಳಷ್ಟು ಹಿಂದಕ್ಕೆ ಹೋಗಿದೆ ಎಂದು ಹೇಳಿದೆ. ಟರ್ಕಿಯ ಲಕ್ಷಾಂತರ ಕ್ರೈಸ್ತರ ಜನರ ಮನವಿಯನ್ನು ಪರಿಗಣಿಸಿಲ್ಲ ಎಂಬ ಆಕ್ರೋಶ ಸ್ಥಳೀಯವಾಗಿಯೇ ವ್ಯಕ್ತವಾಗಿದೆ.

    ಇದನ್ನೂ ಓದಿ; ಹತ್ಯೆಗೀಡಾದ ಉಗ್ರರ ಬಳಿ ಪಾಕ್​ ನಿರ್ಮಿತ ಗ್ರನೇಡ್​ಗಳು; ಗಡಿ ನಿಯಂತ್ರಣ ರೇಖೆಯ ನೂರು ಮೀಟರ್​ ದೂರದಲ್ಲಿ ಕಾರ್ಯಾಚರಣೆ 

    ವಿಶ್ವ ಪಾರಂಪರಿಕ ತಾಣವಾಗಿದ್ದರೂ, ಈ ವಿಚಾರವಾಗಿ ತನ್ನನ್ನು ಕತ್ತಲಲ್ಲಿ ಇಡಲಾಗಿದೆಂದು ಯುನೆಸ್ಕೋ ಹೇಳಿದೆ. ಅಮೆರಿಕ, ರಷ್ಯಾ ಕೂಡ ಇದನ್ನು ವಿರೋಧಿಸಿವೆ. ಆದರೆ, ಟರ್ಕಿಯಲ್ಲಿ ಬಹುಸಂಖ್ಯಾತರಾಗಿರುವ ಮುಸ್ಲಿಮರು ಇದನ್ನು ಸ್ವಾಗತಿಸಿದ್ದಾರೆ.

    ಸೋಮವಾರದಿಂದ ದೇಶದ 12 ಕಡೆಗಳಲ್ಲಿ ಕೋವಿಡ್​ ರೋಗಿಗಳಿಗೆ ದೇಶೀಯ ಕರೊನಾ ಲಸಿಕೆ ಪ್ರಯೋಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts