More

    ಅಜ್ಜಯ್ಯನ‌ ಜಾತ್ರೆಗೆ ಬಂದವ ಅಣ್ಣನ ಕಣ್ಣೆದುರಲ್ಲೇ ಸಾವಿನ ಮನೆಯ ಕದ ತಟ್ಟಿದ..!

    ದಾವಣಗೆರೆ: ಅಜ್ಜಯ್ಯನ ಜಾತ್ರೆಗೆ ಬಂದಿದ್ದ ಬಾಲಕರಿಬ್ಬರು ತುಂಗಭದ್ರಾ ನದಿ ಪಾಲಾಗಿದ್ದು, ಮಕ್ಕಳನ್ನು ಕಳೆದುಕೊಂಡ ಪಾಲಕರ ಆಕ್ರಂದ ಮುಗಿಲು ಮುಟ್ಟಿದೆ.

    ಆಂಧ್ರಪ್ರದೇಶ ಕಲ್ಯಾಣದುರ್ಗದ ನರಸಿಂಹ ಎಂಬುವರ ಪುತ್ರ ನವೀನ್‌ಕುಮಾರ (13) ಮೃತ ದುರ್ದೈವಿ. ಹರಿಹರ ತಾಲೂಕಿನ ಉಕ್ಕಡಗಾತ್ರಿ ಗ್ರಾಮದ ಕರಿಬಸವೇಶ್ವರ ದೇವಸ್ಥಾನಕ್ಕೆ ಪ್ರತಿವರ್ಷ ಕುಟುಂಬ ಸಮೇತ ನರಸಿಂಹ ಬರುತ್ತಿದ್ದರು. ಈ ಬಾರಿಯೂ ಅಜ್ಜಯ್ಯನ ಜಾತ್ರೆಗೆಂದು ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಮಾ.13ರಂದು ಬಂದಿದ್ದರು. ಇದನ್ನೂ ಓದಿರಿ 8ನೇ ತರಗತಿ ವಿದ್ಯಾರ್ಥಿ ಜತೆ ಓಡಿಹೋದ ಮೂರು ಮಕ್ಕಳ ತಾಯಿ! 1 ವರ್ಷದ ರಹಸ್ಯ ಬಿಚ್ಚಿಟ್ಟ ಪಾಲಕರು

    ಅಂದು ಸಂಜೆ ಉಕ್ಕಡಗಾತಿ ಗ್ರಾಮದ ಬಳಿ ತುಂಗಭದ್ರಾ ನದಿ ನೀರಲ್ಲಿ ಸ್ನಾನ ಮಾಡುವಾಗ ಅಣ್ಣ ಬಸವರಾಜನ ಕಣ್ಣೆದುರಲ್ಲೇ ನವೀನ್​ಕುಮಾರ ಮುಳುಗಿದ್ದಾನೆ. ತಮ್ಮನ ರಕ್ಷಣೆಗಾಗಿ ಅಣ್ಣ ಕೂಗಿಕೊಂಡರೂ ಸ್ಥಳಕ್ಕೆ ತಂದೆ ಬರುವಷ್ಟರಲ್ಲಿ ನವೀನ್​ ನೀರಲ್ಲಿ ನಾಪತ್ತೆಯಾಗಿದ್ದ.

    ಮರುದಿನ ಅಂದರೆ ಮಾ.14ರ ಮಧ್ಯಾಹ್ನ ಶವ ಪತ್ತೆಯಾಗಿದೆ. ಬಾಲಕನಿಗೆ ಈಜು ಬರುತ್ತಿರಲಿಲ್ಲ. ಸ್ನಾನ ಮಾಡುವಾಗ ನೀರಲ್ಲಿ ಮುಳುಗಿ ಸತ್ತಿದ್ದಾನೆ ಎಂದು ಮೃತನ ತಂದೆ ನರಸಿಂಹಯ್ಯ ತಿಳಿಸಿದ್ದಾರೆ. ಮಲೇಬೆನ್ನೂರು‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುಷ್ಕರ್ಮಿಗಳು! ಕರುಗೆ ಹಾಲುಣಿಸಲಾಗದೆ ನರಳುತ್ತಿದೆ ಮೂಕಜೀವಿ

    ಶಾಸಕರ ದೌರ್ಜನ್ಯ ಸಹಿಸಲಾಗ್ತಿಲ್ಲ.. ದಯಾಮರಣ ಕೊಡಿ ಎಂದು ಸಿಎಂ ಪುತ್ರನ ಬಳಿ ಕಣ್ಣೀರಿಟ್ಟ ಮಹಿಳೆಯರು

    ಚಿಕ್ಕಪ್ಪನ ಅಂತ್ಯಕ್ರಿಯೆಗೆ ಹೂವು ತರಲು ಹೋದ ಸಹೋದರರು ಮರಳಿದ್ದು ಹೆಣವಾಗಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts