More

    ಪ್ರಣಾಳಿಕೆ ಪತ್ರದಲ್ಲೇ ಮತದಾರರನ್ನು ಬೆದರಿಸಿದ್ದ ಗಂಡೆದೆ ಗಂಗಮ್ಮನಿಗೆ ಬಿದ್ದ ಮತ ಎಷ್ಟು?

    ತುಮಕೂರು: ಗ್ರಾಮ ಪಂಚಾಯಿತಿ ಚುನಾವಣಾ ಕಣದಲ್ಲಿ ವಿಭಿನ್ನ ಮತಯಾಚನೆ ಪತ್ರದೊಂದಿಗೆ ರಾಜ್ಯದಲ್ಲೇ ಸದ್ದು ಮಾಡಿದ್ದ ಗಂಡೆದೆ ಗಂಗಮ್ಮಗೆ ಬಿದ್ದ ಮತಗಳೆಷ್ಟು ಗೊತ್ತಾ? ಚಪ್ಪಲಿ ಗುರುತಿನೊಂದಿಗೆ ಅಖಾಡಕ್ಕಿಳಿದಿದ್ದ ಇವರು ಪಡೆದ ಮತಗಳ ಸಂಖ್ಯೆ ಕೇಳಿದ್ರೆ ನೀವು ಶಾಕ್​ ಆಗೋದು ಗ್ಯಾರಂಟಿ.

    ತುಮಕೂರು ತಾಲೂಕಿನ ಹೆಬ್ಬೂರು ಗ್ರಾಪಂ ಕಲ್ಕೆರೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಚ್. ಗಂಗಮ್ಮ, ಚುನಾವಣಾ ಪ್ರತಾರಕ್ಕೆ ನೆಗೆಟಿವ್ ಇಮೋಷನ್ ದಾಳವಾಗಿ ಬಳಸಿಕೊಂಡಿದ್ದರು. ಗೆದ್ದರೆ ಏನು ಮಾಡಿವು ಎನ್ನುವುದಕ್ಕಿಂತ ಸೋತರೆ ಏನೇನು ಮಾಡಿಸುತ್ತೇನೆ ಎಂದು ಖಡಕ್​ ವಾರ್ನಿಂಗ್​ ಮಾಡುವ ಮೂಲಕ ಮತದಾರರಲ್ಲಿ ಭೀತಿ ಉಟ್ಟಿಸಿದ್ದರು.

    ಪ್ರಣಾಳಿಕೆ ಪತ್ರದಲ್ಲೇ ಮತದಾರರನ್ನು ಬೆದರಿಸಿದ್ದ ಗಂಡೆದೆ ಗಂಗಮ್ಮನಿಗೆ ಬಿದ್ದ ಮತ ಎಷ್ಟು?ಸೋತರೂ ಕೆಲಸ ಮಾಡುವುದಾಗಿ ಹೇಳಿದ್ದ ಗಂಗಮ್ಮ, ಸೋತರೆ ಸರ್ಕಾರಕ್ಕೆ ಸುಳ್ಳು ಮಾಹಿತಿಕೊಟ್ಟು ಮೈತ್ರಿ, ಮನಸ್ವಿನಿ, ವಿಧವಾ ವೇತನಾ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ 40 ಕುಟುಂಬಗಳ ಹಣವನ್ನು ನಿಲ್ಲಿಸುವೆ. 25 ಕುಟುಂಬಗಳು ಹೊಂಡಿರುವ ಅನರ್ಹ ಪಡಿತರ ಚೀಟಿಗಳ ರದ್ದು, ಒತ್ತುವರಿ ಆಗಿರುವ ಗ್ರಾಮ ಠಾಣಾ ಜಮೀನು ತೆರವು ಮಾಡಿಸುವುದಾಗಿ ಎಚ್ಚರಿಕೆ ನೀಡಿದ್ದರು. ಗೆದ್ದರೆ ರಸ್ತೆ, ಚರಂಡಿ ನಿರ್ಮಾಣ ಸೇರಿದಂತೆ ಸರ್ವೇಸಾಮಾನ್ಯ ಭರವಸೆ ನೀಡಿದ್ದರು. ಈ ಮತಯಾಚನೆ ಪತ್ರ ಸಿಕ್ಕಾಪಟ್ಟೆ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿತ್ತು.

    ಪಾದರಕ್ಷೆ ಗುರುತು ಪಡೆದಿದ್ದ ಗಂಗಮ್ಮಗೆ ಕಲ್ಕೆರೆ ಕ್ಷೇತ್ರದಲ್ಲಿ ಕೇವಲ 6 ಮತ ಬಿದ್ದಿವೆ. ದೊಡ್ಡಗುಣಿ ಕ್ಷೇತ್ರದಲ್ಲಿ ಸಾಮಾನ್ಯ ಮೀಸಲಾಗಿದ್ದ ಕ್ಷೇತ್ರದಿಂದಲೂ ಸ್ಪರ್ಧಿಸಿದ್ದ ಗಂಗಮ್ಮಗೆ 2 ಮತ ಬಂದಿದೆ. ಒಟ್ಟಿನಲ್ಲಿ ಗಂಗಮ್ಮ ಗೆದ್ದು ಮಾಡುವ ಕೆಲಸಕ್ಕಿಂತ ಸೋತು ಮಾಡುವ ಕೆಲಸವೇ ಮುಖ್ಯ ಎಂದು ಮತದಾರರು ಯೋಚಿಸಿರಬೇಕು. ಹಾಗಾಗಿ ಹೀನಾಯವಾಗಿ ಸೋತಿದ್ದಾರೆ.

    ಗ್ರಾಪಂ ಚುನಾವಣೆ: ಈ ಕ್ಷೇತ್ರಕ್ಕೆ 26 ವರ್ಷದ ಬಳಿಕ ಮತದಾನ, ಮಂಗಳಮುಖಿ ಗೆಲುವು

    ಗ್ರಾಪಂ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಕಾಂಗ್ರೆಸ್​​ಗೆ ಶುರುವಾಯ್ತು ಟೆನ್ಷನ್​!

    ಗ್ರಾಪಂ ಚುನಾವಣೆಯಲ್ಲಿ ಗೆದ್ದ 28 ವರ್ಷದ ಇಂಜಿನಿಯರಿಂಗ್​ ಉದ್ಯೋಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts