More

    ತಿಮ್ಮಪ್ಪನ ದರ್ಶನಕ್ಕೆ ಧಾವಂತ ಬೇಡ; ಸದ್ಯಕ್ಕಿಲ್ಲ ಎಲ್ಲರಿಗೂ ಅವಕಾಶ

    ತಿರುಪತಿ: ಜಗದೊಡೆಯ ಶ್ರೀ ವೆಂಕಟೇಶ್ವರ ಸ್ವಾಮಿಯ ದೇಗುಲವನ್ನು ಭಕ್ತರಿಗೆ ಮುಕ್ತವಾಗಿಸಲು ಆಂಧ್ರಪ್ರದೇಶ ಸರ್ಕಾರ ಮಂಗಳವಾರ ಅನುಮತಿ ನೀಡಿದೆ. ಜೂನ್​ 8 ರಂದು ದೇವಾಲಯದ ಬಾಗಿಲುಗಳನ್ನು ಭಕ್ತರಿಗಾಗಿ ತೆರೆಯಲಾಗುತ್ತದೆ.

    ತಿರುಪತಿ ತಿರುಮಲ ದೇವಸ್ವ (ಟಿಟಿಡಿ) ಮಂಡಳಿ ದೇವಾಲಯದ ಆರಂಭಕ್ಕೆ ಅನುಮತಿ ನೀಡುವಂತೆ ಆಂಧ್ರಪ್ರದೇಶ ಸರ್ಕಾರಕ್ಕೆ ಪತ್ರ ಬರೆದಿತ್ತು. ಇದಕ್ಕೆ ಪ್ರತಿಕ್ರಿಯಿಸುವ ಸರ್ಕಾರ ಜೂ.8ರಿಂದ ದೇಗುಲ ತೆರೆಯಲು ಅವಕಾಶ ಕಲ್ಪಿಸಿದೆ.

    ಇದನ್ನೂ ಓದಿ; ಕರೊನಾಗೆ ಒಣ ಗಾಳಿಯೇ ಅಸ್ತ್ರ, ಕೋವಿಡ್​ ಕಾಲವಾಗಬಹುದು ಚಳಿಗಾಲ ಎಚ್ಚರ…! 

    ಹಾಗೆಂದು ಆರಂಭದ ದಿನವೇ ಎಲ್ಲೆಡೆಯ ಭಕ್ತರಿಗೆ ಅವಕಾಶವಿಲ್ಲ. ಟಿಟಿಡಿ ಸಿಬ್ಬಂದಿ ಹಾಗೂ ಸ್ಥಳೀಯರಷ್ಟೇ ಶ್ರೀ ವೆಂಕಟೇಶ್ವರನ ಸನ್ನಿಧಿಗೆ ತೆರಳಬಹುದು. ಮೊದಲಿಗೆ ಪ್ರಾಯೋಗಿಕವಾಗಿ ದರ್ಶನಕ್ಕೆ ಸೌಲಭ್ಯ ಕಲ್ಪಿಸಲಾಗುತ್ತದೆ. ನಂತರ ಹಂತಹಂತವಾಗಿ ಉಳಿದ ರಾಜ್ಯಗಳ ಭಕ್ತರಿಗೆ ಅವಕಾಶ ದೊರೆಯಲಿದೆ.
    ಇದಲ್ಲದೇ, ಟಿಟಿಡಿ ಆನ್​ಲೈನ್​ನಲ್ಲಿ ದರ್ಶನ ಹಾಗೂ ವಸತಿ ಕಾದಿರಿಸುವಿಕೆಗೆ ಇನ್ನೂ ಅವಕಾಶ ಕಲ್ಪಿಸಿಲ್ಲ.

    ಭರದಿಂದ ಸಾಗಿದೆ ಸಿದ್ಧತೆ: ಲಾಕ್​ಡೌನ್​ಗೂ ಮುನ್ನ ದೇವಾಲಯಕ್ಕೆ ಸಾಮಾನ್ಯ ದಿನಗಳಲ್ಲಿ ನಿತ್ಯ ಸರಾಸರಿ 80 ಸಾವಿರದಿಂದ ಒಂದು ಲಕ್ಷ ಭಕ್ತರು ಭೇಟಿ ನೀಡುತ್ತಿದ್ದರು. ಆದರೆ, ಇದನ್ನು ಪ್ರತಿದಿನ 25 ಸಾವಿರದಿಂದ 35 ಸಾವಿರಕ್ಕೆ ಮಿತಿಗೊಳಿಸಲು ಟಿಟಿಡಿ ನಿರ್ಧರಿಸಿದೆ.

    ದರ್ಶನಕ್ಕೆ ಪ್ರತಿ ಗಂಟೆಗೆ ಇಂತಿಷ್ಟು ಭಕ್ತರೆಂದು ವಿಂಗಡಿಸಿ ಅವಕಾಶ ಕಲ್ಪಿಸಲಾಗುತ್ತದೆ. ವ್ಯಕ್ತಿಗತ ಅಂತರ, ಸ್ಯಾನಿಟೈಸರ್​ ಬಳಕೆ, ಥರ್ಮಲ್​ ಸ್ಕ್ರೀನಿಂಗ್​ ಮೊದಲಾದವುಗಳು ಕಡ್ಡಾಯವಾಗಲಿವೆ. ಟಿಟಿಡಿಯಲ್ಲಿ 21 ಸಾವಿರಕ್ಕೂ ಅಧಿಕ ಸಿಬ್ಬಂದಿ ಇದ್ದಾರೆ. ಇವರನ್ನೇ ಭಕ್ತರಂತೆ ಸಾಲಿನಲ್ಲಿ ನಿಲ್ಲಿಸಿ ಭಕ್ತರನ್ನು ನಿರ್ವಹಿಸಲು ಅಗತ್ಯ ತರಬೇತಿಯನ್ನು ನೀಡಲಾಗುತ್ತಿದೆ.

    ಇದನ್ನೂ ಓದಿ; ವಿಶಾಖಪಟ್ಟಣ ವಿಷಾನಿಲ ದುರಂತಕ್ಕೆ ಕಾರಣರಾರು? ವರದಿ ಸಲ್ಲಿಸಿದ ನ್ಯಾಯಾಂಗ ತನಿಖಾ ಸಮಿತಿ

    ಒಂದು ಹಂತದ ಭಕ್ತರ ದರ್ಶನ ಮುಗಿದ ಬಳಿಕ ದೇವಾಲಯವನ್ನು ಸಂಪೂರ್ಣ ಸ್ಯಾನಿಟೈಸ್​ ಮಾಡಲಾಗುತ್ತದೆ. ವೆಂಕಟೇಶ್ವರ ಕೃಪೆಯಿಂದ ತಿರುಪತಿ ಆರಂಭದಿಂದಲೂ ಹಸಿರುವಲಯದಲ್ಲೇ ಇದೆ ಎಂದು ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ ಹೇಳಿದ್ದಾರೆ.

    ಮಾರ್ಚ್​ 20ರಿಂದ ತಿರುಪತಿ ದೇಗುಲದಲ್ಲಿ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ. ಈವರೆಗೆ ಅಂದಾಜು 200 ಕೋಟಿ ರೂ.ಗೂ ಅಧಿಕ ನಷ್ಟವಾಗಿದೆ ಎಂದು ಟಿಟಿಡಿ ತಿಳಿಸಿದೆ.

    ಮಾರಕ ಕರೊನಾಗೆ ನಂಜನಗೂಡಿನಲ್ಲಿ ತಯಾರಾಗುತ್ತಿರುವ ಲಸಿಕೆ ಬಳಕೆಗೆ ಅನುಮತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts