More

    ವಿಶಾಖಪಟ್ಟಣ ವಿಷಾನಿಲ ದುರಂತಕ್ಕೆ ಕಾರಣರಾರು? ವರದಿ ಸಲ್ಲಿಸಿದ ನ್ಯಾಯಾಂಗ ತನಿಖಾ ಸಮಿತಿ

    ವಿಶಾಖಪಟ್ಟಣಂ: ಇಲ್ಲಿನ ಆರ್​.ಆರ್​. ವೆಂಕಟಾಪುರಂನಲ್ಲಿರುವ ದಕ್ಷಿಣ ಕೊರಿಯಾದ ಮೂಲದ ಎಲ್​ಜಿ ಪಾಲಿಮರ್ಸ್​ ಕಾರ್ಖಾನೆಯಲ್ಲಿ ವಿಷಾನಿಲ ದುರಂತಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ಪ್ರಾಧಿಕಾರ ರಚಿಸಿದ್ದ ನ್ಯಾಯಾಂಗ ತನಿಖಾ ಸಮಿತಿ ತನ್ನ ವರದಿಯನ್ನು ಸಲ್ಲಿಸಿದೆ.

    ಆಂಧ್ರಪ್ರದೇಶ ಹೈಕೋರ್ಟ್​ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಬಿ. ಶೇಷಶಯನ ರೆಡ್ಡಿ ನೇತೃತ್ವದ ಸಮಿತಿ ರಚನೆಯಾದ ಮೂರು ವಾರಗಳ ಬಳಿಕ ವರದಿ ಸಲ್ಲಿಸಿದ್ದು, ವಿಷಾನಿಲ ದುರಂತಕ್ಕೆ ಎಲ್​.ಜಿ. ಪಾಲಿಮರ್ಸ್​ ಆಡಳಿತ ಮಂಡಳಿಯಿಂದಾದ ಐದು ಪ್ರಮುಖ ಲೋಪಗಳನ್ನು ಪಟ್ಟಿ ಮಾಡಿದೆ.

    ಇದನ್ನೂ ಓದಿ; ವಿಷಾನಿಲ ದುರಂತ: ಎಫ್​ಐಆರ್​ನಲ್ಲಿ ಯಾರ ಹೆಸರೂ ಇಲ್ಲ…!

    ಸ್ಟೈರಿನ್ ಅನಿಲ ಸಂಗ್ರಹಿಸಿದ್ದ ಟ್ಯಾಂಕ್​ನಲ್ಲಿ ಅನಿಲದ ಪ್ರತಿರೋಧಕ ಶಕ್ತಿಯನ್ನು ನಿಯಂತ್ರಿಸುವ ರಾಸಾಯನಿಕ (4-ಟೆರ್ಟ್​ ಬ್ಯುಟಿಲ್​ಕ್ಯಾಟ್​ಕೋಲ್​ ) ಸೂಕ್ತ ಪ್ರಮಾಣದಲ್ಲಿ ಇರಲಿಲ್ಲ. ಕರಗಿದ ಆಮ್ಲಜನಕ ಪ್ರಮಾಣವನ್ನು ಗುರುತಿಸುವ ನಿಗಾ ವ್ಯವಸ್ಥೆ ಹೊಂದಿರಲಿಲ್ಲ, ಟ್ಯಾಂಕ್​ನ ಮೇಲ್ಪದರದಲ್ಲಿರುವ ತಾಪಮಾನವನ್ನು ಅಳೆಯುವ ವ್ಯವಸ್ಥೆ ಕೂಡ ಇರಲಿಲ್ಲ. ಟ್ಯಾಂಕ್​ಅನ್ನು ಶೀತಲವಾಗಿರಿಸುವ ವ್ಯವಸ್ಥೆಯನ್ನು 24 ತಾಸುಗಳಿಂದ ಸರಿಯಾಗಿ ನೋಡಿಕೊಂಡಿರಲಿಲ್ಲ. ಒಟ್ಟಾರೆ ಮಾನವ ಲೋಪ ಹಾಗೂ ನಿರ್ಲಕ್ಷ್ಯದಿಂದಾಗಿಯೇ ಈ ವಿಷಾನಿಲ ದುರಂತ ಸಂಭವಿಸಿದೆ ಎಂದು ಸಮಿತಿಯ ವರದಿಯಲ್ಲಿ ಹೇಳಲಾಗಿದೆ.

    ಇದಕ್ಕೂ ಮುನ್ನ, ವಿಷಾನಿಲ ದುರಂತದಿಂದ ಸಂಭವಿಸಿರುವ ಹಾನಿಗೆ 50 ಕೋಟಿ ರೂ.ಗಳನ್ನು ಠೇವಣಿಯಾಗಿಬೇಕೆಂಬ ರಾಷ್ಟ್ರೀಯ ಹಸಿರು ಪ್ರಾಧಿಕಾರದ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್​ ನಿರಾಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

    ಇದನ್ನೂ ಓದಿ; ವಿಶಾಖಪಟ್ಟಣದ 13,000 ಟನ್ ವಿಷಾನಿಲ ಎಲ್ಲಿಗೆ ರವಾನೆಯಾಯ್ತು ಗೊತ್ತಾ? 

    ಕಳೆದ ಮೇ 8ರಂದು ಎಲ್.​ಜಿ. ಪಾಲಿಮರ್ಸ್​ ಕಾರ್ಖಾನೆಯಲ್ಲಿ ಸಂಭವಿಸಿದ್ದ ವಿಷಾನಿಲ ದುರಂತದಲ್ಲಿ 11 ಜನರು ಮೃತಪಟ್ಟು, ಸಾವಿರಕ್ಕೂ ಅಧಿಕ ಜನರು ಆಸ್ಪತ್ರೆಗೆ ದಾಖಲಾಗಿದ್ದರು. ಅಂದಾಜು 2,000 ಮೆಟ್ರಿಕ್​ ಟನ್​ ಅನಿಲ ಸೋರಿಕೆಯಾಗಿತ್ತು. ಇದಲ್ಲದೇ, ಸುತ್ತಲಿನ 5 ಹಳ್ಳಿಗಳ ಜನರನ್ನು ಸ್ಥಳಾಂತರ ಮಾಡಲಾಗಿತ್ತು.

    ವಿಷಾನಿಲ ದುರಂತ; ಮೃತರ ಕುಟುಂಬಗಳಿಗೆ ಒಂದು ಕೋಟಿ ರೂ. ಪರಿಹಾರ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts