More

    ಯಾವುದೇ ಪದಾರ್ಥ ಬಳಸದೆ ವೇಗವಾಗಿ, ದಟ್ಟವಾಗಿ ಕೂದಲು ಬೆಳೆಸಲು ಹೀಗೂ ಮಾಡಬಹುದು ನೋಡಿ! ಸರ

    ಬೆಂಗಳೂರು: ಇಂದು ನಮ್ಮಲ್ಲಿ ಕೂದಲಿಗೆ ಹೆಚ್ಚು ಪ್ರಾಶಸ್ತ್ಯ, ಆದ್ಯತೆ, ಕಾಳಜಿ ಸಿಗುತ್ತಿದೆ. ಕಾರಣ ಅನೇಕರಲ್ಲಿ ಬೋಳು ತಲೆ ಆವರಿಸುತ್ತಿರುವುದು, ಕೂದಲು ಸೊಂಪಾಗಿ ಬೆಳಯದೆ, ಚಿಕ್ಕ ವಯಸ್ಸಿನಲ್ಲೇ ಉದುರಿ ಹೋಗುತ್ತಿರುವುದು ಭಾರೀ ತಲೆಬಿಸಿ ತಂದಿಟ್ಟಿದೆ. ಈ ಎಲ್ಲಾ ಕಾರಣಗಳಿಂದ ಜನರು ಕೂದಲಿನ ಆರೈಕೆ ಕುರಿತು ಎಲ್ಲಿಲ್ಲದ ಪ್ರಯತ್ನಗಳನ್ನು ಮಾಡುವಲ್ಲಿ ಸದ್ಯ ಸಿಕ್ಕಾಪಟ್ಟೆ ಬ್ಯುಸಿಯಿದ್ದಾರೆ.

    ಇದನ್ನೂ ಓದಿ: 10 ಲಕ್ಷ ಹುದ್ದೆಗಳು ಖಾಲಿಯಿದ್ದರೂ ಭರ್ತಿಯಿಲ್ಲ

    ಬೊಕ್ಕ ತಲೆ, ಒಟ್ಟಿನ ಸಮಸ್ಯೆ, ಕೂದಲು ಉದುರುವಿಕೆ, ಬಿಳಿ ಕೂದಲಿನ ಸಮಸ್ಯೆ, ಸೊಂಪಾಗಿ, ದಟ್ಟವಾಗಿ ಬೆಳೆಯುತ್ತಿಲ್ಲ ಹೀಗೆ ಹಲವಾರು ತೊಂದರೆಗಳಿಂದ ಜನರು ಬೇಸತ್ತು ಹೋಗಿದ್ದಾರೆ. ಮನುಷ್ಯನ ಮುಖದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವುದೇ ಕೇಶರಾಶಿ. ಕೂದಲಿಲ್ಲದ ಹೋದರೆ ಅದೇನೋ ಸುಂದರ ಅನ್ನೋ ಪದದಿಂದ ದೂರ ಉಳಿದಂತೆ ಭಾಸವಾಗುತ್ತದೆ. ಹೀಗಾಗಿ ಹಲವರು ಮಾರುಕಟ್ಟೆಯಲ್ಲಿ ಸಿಗುವ ಇತರೆ ಪ್ರಾಡೆಕ್ಟ್​ಗಳನ್ನು ಕೂದಲ ಮೇಲೆ ಪ್ರಯೋಗಿಸಿ ಇರುವ ಅಷ್ಟೋ, ಇಷ್ಟೋ ಕೂದಲನ್ನು ಕಳೆದುಕೊಳ್ಳುತ್ತಾರೆ.

    ಕೆಲವರು ಅಡುಗೆ ಮನೆಯಲ್ಲಿ ಅಥವಾ ಮನೆಯ ಹಿತ್ತಲಿನಲ್ಲಿ ಸಿಗುವ ಪದಾರ್ಥಗಳನ್ನು ಬಳಸುವ ಮೂಲಕ ಕೂದಲ ಬೆಳವಣಿಗೆಗೆ ಪರಿಹಾರ ಕಂಡುಕೊಳ್ಳುತ್ತಾರೆ. ಆದರೆ, ಯಾವುದೇ ಪ್ರಾಡೆಕ್ಟ್​​ ಅಥವಾ ಇತರರ ಮಾತುಗಳನ್ನು ಅನುಸರಿಸದೆ ಸುಲಭವಾಗಿ ಈ ವಿಧಾನ ಪ್ರಯೋಗ ಮಾಡುವುದರಿಂದ ಕೂದಲು ಸೊಂಪಾಗಿ, ವೇಗವಾಗಿ, ದಟ್ಟವಾಗಿ ಬೆಳೆಯಲು ಸಹಕಾರಿಯಾಗಿದೆ. ಅದು ಹೇಗೆ ಅಂತೀರಾ? ಇದನ್ನೊಮ್ಮೆ ಓದಿ ನೋಡಿ.

    ಇದನ್ನೂ ಓದಿ: ಮೂಲ ವಿಜ್ಞಾನದಲ್ಲಿ ಸಂಶೋಧನೆ -ಡಾ.ಪ್ರವೀಣ್ ಮಾರ್ಟಿಸ್

    ತಲೆಕೆಳಗಾಗಿ ಕೂದಲನ್ನು ಬುಡದಿಂದ ಮಸಾಜ್ ಮಾಡಿಕೊಳ್ಳುವ ಅಭ್ಯಾಸ ಕೂದಲಿನ ಬೆಳವಣಿಗೆಯನ್ನು ಮತ್ತಷ್ಟು ಉತ್ತೇಜಿಸುತ್ತದೆ ಎಂದು ನಂಬಲಾಗಿದೆ. ಏಕೆಂದರೆ ಇದು ನೆತ್ತಿಯಲ್ಲಿ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಈ ಅಭ್ಯಾಸ ರೂಢಿಸಿಕೊಳ್ಳುವುದರಿಂದ ಕೂದಲು ವೇಗವಾಗಿ ಬೆಳೆಯುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತದೆ.

    ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

    ನೀನೆಂದಿಗೂ ನನ್ನ ಜತೆಯಲ್ಲೇ ಇರ್ತೀಯಾ ಮಗನೇ; ಭಾವುಕರಾದ ಶಿಖರ್ ಧವನ್​ಗೆ ಫ್ಯಾನ್ಸ್​ ಆಸರೆ

    4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts