More

    ಗಂಗಾನದಿಗೆ ಎಸೆಯಲಾಗುತ್ತಿದೆಯಾ ಕೊವಿಡ್​-19ನಿಂದ ಮೃತಪಟ್ಟವರ ಶವಗಳನ್ನು? ಏನಿದು ಫೋಟೋಗಳು?

    ಕೊವಿಡ್​-19 ಶುರುವಾದಾಗಿನಿಂದ ಸಾಮಾಜಿಕ ಜಾಲತಾಣಗಳಲ್ಲಂತೂ ಯಾವ್ಯಾವುದೋ ವಿಡಿಯೋಗಳು, ಫೋಟೋಗಳು ವೈರಲ್​ ಆಗುತ್ತಿವೆ. ಕೊವಿಡ್​-19 ಸೋಂಕಿತರ ಶವಗಳನ್ನು ಸಂಸ್ಕಾರ ಮಾಡುವ, ಎಲ್ಲೆಂದರಲ್ಲಿ ಬಿಸಾಕುವ ವಿಡಿಯೋಗಳಂತೂ ಸಾಲುಸಾಲುಗಳಷ್ಟು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿವೆ.

    ಈ ಮಧ್ಯ ಒಂದಷ್ಟು ಫೋಟೋಗಳು ವೈರಲ್​ ಆಗಿದ್ದವು. ಪಟನಾ ಬಳಿ ಗಂಗಾನದಿಯಲ್ಲಿ ಕೊವಿಡ್​-19 ನಿಂದ ಮೃತಪಟ್ಟವರ ಶವಗಳನ್ನು ಎಸೆಯಲಾಗುತ್ತಿದೆ ಎಂಬ ಕ್ಯಾಪ್ಷನ್​​ನೊಂದಿಗೆ ಫೋಟೋಗಳು ವೈರಲ್​ ಆಗಿ ತೀವ್ರ ಆತಂಕ ಮೂಡಿಸಿದ್ದವು.
    ದೋಣಿಯೊಂದರಲ್ಲಿ ಇಬ್ಬರು ಪುರುಷರು ನದಿ ಮಧ್ಯ ಹೋಗಿ, ಒಂದು ಹಸಿರು ಬಣ್ಣದ ಬಟ್ಟೆಯಲ್ಲಿ ಸುತ್ತಿರುವ ಏನನ್ನೋ ನದಿಗೆ ಎಸೆಯುವುದನ್ನು ಫೋಟೋದಲ್ಲಿ ನೋಡಬಹುದು. ಇದನ್ನೂ ಓದಿ: ದುಬೆ ಎನ್​​ಕೌಂಟರ್​​ ಮಾಡಿದ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ ಬೆನ್ನಲ್ಲೇ ಮೂರು ಪ್ರಶ್ನೆಗಳನ್ನು ಕೇಳಿದ್ದಾರೆ ಉಮಾಭಾರತಿ

    ಆ ಫೋಟೋಗಳನ್ನು ಶೇರ್​ ಮಾಡಿಕೊಂಡಿರುವ ಫೇಸ್​ಬುಕ್​ ಬಳಕೆದಾರರು, ಕೊವಿಡ್​-19ನಿಂದ ಮೃತಪಟ್ಟವರ ಶವಗಳನ್ನು ಪಟನಾ ಬಳಿ ಗಂಗಾನದಿಗೆ ಎಸೆಯುತ್ತಿರುವ ಫೋಟೋಗಳು ಕ್ಯಾಮರಾದಲ್ಲಿ ಸೆರೆ ಸಿಕ್ಕಿವೆ. ಈ ಬಗ್ಗೆ ಯಾರೂ ಧ್ವನಿ ಎತ್ತುತ್ತಿಲ್ಲ. ಬಿಜಾರದಲ್ಲಿರುವ ಬಿಜೆಪಿ-ಜೆಡಿಯು ಸರ್ಕಾರ ಇದನ್ನು ಗಮನಿಸುತ್ತಿಲ್ಲ ಎಂದು ಕ್ಯಾಪ್ಷನ್​ ಬರೆದಿದ್ದರು.
    ಈ ಬಗ್ಗೆ ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಂ ಫ್ಯಾಕ್ಟ್​ಚೆಕ್​ ನಡೆಸಿದೆ.

    ಈ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್​ ಮಾಡಿದ್ದು ಕಾಂಗ್ರೆಸ್​ ಬಿಹಾರ ಘಟಕದ ಅಧ್ಯಕ್ಷ ಮದನ್​ ಮೋಹನ್​ ಝಾ ಎಂಬುದು ಫ್ಯಾಕ್ಟ್​ಚೆಕ್​ ವೇಳೆ ಗೊತ್ತಾಗಿದೆ.

    ಫೋಟೋಗಳ ಜಾಡು ಹಿಡಿದು ಹೊರಟಾಗ ಅದು ರಾಷ್ಟ್ರೀಯ ಮಾಧ್ಯಮವೊಂದರ ಪಟನಾ ಎಡಿಶನ್​​ನಲ್ಲಿ ಜು.8ರಂದು ಪ್ರಕಟವಾಗಿದ್ದು ಬೆಳಕಿಗೆ ಬಂತು. ಇದು ಕಾಳಿ ಘಾಟ್​​ ಬಳಿ ಇರುವ ಪಟನಾ ಮೆಡಿಕಲ್​ ಕಾಲೇಜ್​ ಮತ್ತು ಆಸ್ಪತ್ರೆ (ಪಿಎಂಸಿಎಚ್​) ಹಿಂಭಾಗದಲ್ಲಿ ತೆಗೆದ ಫೋಟೋ ಎಂದು ಆ ಮಾಧ್ಯಮದಲ್ಲಿ ಬರೆಯಲಾಗಿತ್ತು. ಅಲ್ಲದೆ, ಅಪರಿಚಿತ ಶವವೊಂದನ್ನು ಗಂಗಾನದಿಯಲ್ಲಿ ಎಸೆಯುತ್ತಿರುವ ಫೋಟೋ ಎಂದೂ ಉಲ್ಲೇಖಿಸಲಾಗಿತ್ತು. ಇದನ್ನೂ ಓದಿ: ಕನ್ಯೆಯರ ರಕ್ತವೇ ಬೇಕಾಗಿತ್ತು ಈಕೆಯ ಸ್ನಾನಕ್ಕೆ…; 600 ಹುಡುಗಿಯರನ್ನು ಕೊಂದವಳು ಕಂಡಿದ್ದು ದುರಂತ ಅಂತ್ಯ

    ನಂತರ ಫೋಟೋ ತೆಗೆದ ಫೋಟೋಗ್ರಾಫರ್​ನನ್ನು ಸಂಪರ್ಕಿಸಿದ ಇಂಡಿಯಾ ಟುಡೆ AFWA ಸಮಗ್ರ ಮಾಹಿತಿ ಕಲೆ ಹಾಕಿದೆ.
    ಇದು ಮಳೆಗಾಲ ಆಗಿದ್ದರಿಂದ ಕಾಳಿ ಘಾಟ್​ಗೆ ಹೋಗಿ ಒಂದಷ್ಟು ಫೋಟೋಗಳನ್ನು ಕ್ಲಿಕ್ ಮಾಡುತ್ತಿದ್ದೆ. ಈ ವೇಳೆ ಮೂವರು ದೋಣಿಯಲ್ಲಿ ಆಗಮಿಸಿ ಒಂದು ಶವವನ್ನು ಬಟ್ಟೆಯಲ್ಲಿ ಸುತ್ತಿ ಎಸೆದರು. ಆದರೆ ಇದು ಕೊವಿಡ್​-19 ನಿಂದ ಮೃತಪಟ್ಟವರ ಶವ ಎಂಬುದರ ಬಗ್ಗೆ ಗ್ಯಾರಂಟಿ ಇಲ್ಲ. ಅಲ್ಲಿ ಕೇವಲ ಒಂದು ಶವ ಅಷ್ಟೇ ಇತ್ತು. ತುಂಬ ಹೆಣಗಳು ಇರಲಿಲ್ಲ ಎಂದೂ ಫೋಟೋಗ್ರಾಫರ್​ ತಿಳಿಸಿದ್ದಾರೆ.

    ಅಷ್ಟೇ ಅಲ್ಲ, ಅಲ್ಲಿಯೇ ಇದ್ದ ಪಿಎಂಸಿಎಚ್​ ಆಸ್ಪತ್ರೆಯಲ್ಲಿ ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿಲ್ಲ ಎಂಬುದೂ ಫ್ಯಾಕ್ಟ್​ಚೆಕ್​ ವೇಳೆ ಗೊತ್ತಾಗಿದೆ. ಹಾಗಾಗಿ, ನದಿಯಲ್ಲಿ ಬಿಟ್ಟ ಶವ ಕೊವಿಡ್​-19 ರೋಗಿಯದ್ದು ಎಂಬುದಕ್ಕೆ ಯಾವುದೇ ಸಾಕ್ಷಿಯಿಲ್ಲ ಎಂದು ಸ್ಪಷ್ಟವಾಗಿದೆ. (ಏಜೆನ್ಸೀಸ್​)

    ವೈರಲ್​ ಆಗಿರುವ ಪೋಸ್ಟ್​..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts