More

    ದುಬೆ ಎನ್​​ಕೌಂಟರ್​​ ಮಾಡಿದ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ ಬೆನ್ನಲ್ಲೇ ಮೂರು ಪ್ರಶ್ನೆಗಳನ್ನು ಕೇಳಿದ್ದಾರೆ ಉಮಾಭಾರತಿ

    ಭೋಪಾಲ್: ದೇವೇಂದ್ರ ಮಿಶ್ರಾ ಅವರಂತಹ ಪ್ರಾಮಾಣಿಕ ಪೊಲೀಸ್ ಅಧಿಕಾರಿಯ ಬರ್ಬರ ಹತ್ಯೆ ಮಾಡಿದ ಕೊಲೆಗಾರನನ್ನು ಭಗವಾನ್ ಮಹಾಕಾಲನೇ ಶಿಕ್ಷಿಸಿದ್ದಾನೆ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಶುಕ್ರವಾರ ಅಭಿಪ್ರಾಯಪಟ್ಟಿದ್ದಾರೆ.
    ವಿಕಾಸ್ ದುಬೆ ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾದ ಕೆಲವೇ ಗಂಟೆಗಳ ನಂತರ, ಟ್ವೀಟರ್​​ನಲ್ಲಿ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
    ಡಿಸಿಪಿ ದೇವೇಂದ್ರ ಮಿಶ್ರಾ ಮತ್ತು ಎಂಟು ಜನ ಸಹಚರರನ್ನು ಕ್ರೂರವಾಗಿ ಕೊಂದ ರಾಕ್ಷಸ ವಿಕಾಸ್ ದುಬೆನನ್ನು ಎನ್​​ಕೌಂಟರ್ ಮಾಡಿದ್ದಕ್ಕೆ ಯುಪಿ ಪೊಲೀಸರನ್ನು ಅಭಿನಂದಿಸಿದ್ದಾರೆ. 

    ಇದನ್ನು ಓದಿ: ದುಬೆಯನ್ನು ಆಸ್ಪತ್ರೆಗೆ ಕರೆತಂದಾಗ ಆತ ಅದಾಗಲೇ ಸತ್ತಿದ್ದ

    ಮತ್ತೊಂದು ಟ್ವೀಟ್‌ನಲ್ಲಿ ಅವರು “ಈಗ ಮೂರು ವಿಷಯಗಳನ್ನು ರಹಸ್ಯವಾಗಿರಿಸಲಾಗಿದೆ – (1) ದುಬೆ ಉಜ್ಜಯಿನಿಯನ್ನು ಹೇಗೆ ತಲುಪಿದನು? (2) ಆತ ಮಹಾಕಾಳ ಸಂಕೀರ್ಣದಲ್ಲಿ ಎಷ್ಟು ಸಮಯದ ವರೆಗೆ ಇದ್ದ ? (3) ಟಿವಿ ಚಾನೆಲ್‌ಗಳಲ್ಲಿ ಯಾರಾದರೂ ಅವನನ್ನು ಗುರುತಿಸುವಷ್ಟು ಅವನ ಮುಖ ಸ್ಪಷ್ಟವಾಗಿ ಕಂಡುಬಂತು, ಆದರೆ ಆತನನ್ನು ಬಂಧಿಸಲು ಇಷ್ಟು ಸಮಯ ಏಕೆ ತೆಗೆದುಕೊಳ್ಳಲಾಯಿತು? ”
    ಈ ಬಗ್ಗೆ ಅವರು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ ಮತ್ತು ಗೃಹ ಸಚಿವ ನರೋತ್ತಮ್ ಮಿಶ್ರಾ ಅವರೊಂದಿಗೆ ಚರ್ಚಿಸುವುದಾಗಿ ಹೇಳಿದ್ದಾರೆ. 

    ಇದನ್ನೂ ಓದಿ: ದುಬೆ ಎನ್​​ಕೌಂಟರ್: ಕೋವಿಡ್ ಪರೀಕ್ಷೆ ವರದಿ ಬಂದ ನಂತರವೇ ಮರಣೋತ್ತರ ಪರೀಕ್ಷೆ


    ಉತ್ತರಪ್ರದೇಶದ ಕಾನ್ಪುರ ಬಳಿ ನಡೆದ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ. ಮಧ್ಯಪ್ರದೇಶದ ಉಜ್ಜೈನ್‌ನಲ್ಲಿ ಈತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಉಜ್ಜೈನಿಯ ಮಹಾಕಾಳ ದೇವಾಲಯಕ್ಕೆ ಈತ ಹೋದಾಗ ಬಂಧಿಸಲಾಗಿತ್ತು.
    ಉತ್ತರ ಪ್ರದೇಶದ ಪೊಲೀಸರ ಪ್ರಕಾರ, ಉಜ್ಜೈನ್​​​​ದಿಂದ ಕಾನ್ಪುರಕ್ಕೆ ಆತನನ್ನು ಕರೆದೊಯ್ಯುತ್ತಿದ್ದ ಪೊಲೀಸ್ ವಾಹನವು ಭೌತಿ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದ್ದರಿಂದ ದುಬೆ ಸ್ಥಳದಿಂದ ಪರಾರಿಯಾಗಲು ಯತ್ನಿಸುತ್ತಿದ್ದಾಗ ಸಾವನ್ನಪ್ಪಿದ್ದಾನೆ.
    ಅಪಘಾತದಲ್ಲಿ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಕಾನ್ಪುರ ಶ್ರೇಣಿ ಐಜಿ ಮೋಹಿತ್ ಅಗರ್ವಾಲ್ ತಿಳಿಸಿದ್ದಾರೆ.
    ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಕಾನ್ಪುರ) ದಿನೇಶ್ ಕುಮಾರ್ ಪಿ ಅವರ ಪ್ರಕಾರ, ಅಂದು ಬೆಳಗ್ಗೆ ಭಾರಿ ಮಳೆಯಾಗುತ್ತಿರುವಾಗ ಅಪಘಾತ ಸಂಭವಿಸಿದೆ.
    “ಎನ್​​ಕೌಂಟರ್​​ನಲ್ಲಿ ಗಾಯಗೊಂಡಿದ್ದ ದುಬೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಎಂದು ಘೋಷಿಸಲಾಯಿತು” ಎಂದು ಎಡಿಜಿ ಕಾನ್ಪುರ್ ಶ್ರೇಣಿ ಎಡಿಜಿ ಜೆಎನ್ ಸಿಂಗ್ ಹೇಳಿದ್ದಾರೆ. 

    ವಿಕಾಸ್​ ದುಬೆ ಎನ್​​ಕೌಂಟರ್: ಸತ್ಯಾಸತ್ಯತೆಗಳ ಕುರಿತು ಹುಟ್ಟಿಕೊಂಡ ಪ್ರಶ್ನೆಗಳೇನು?

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts