More

    ಕಾಯಿಲೆ ಗುಣವಾಗುತ್ತೆ ಅಂತ ಪುತ್ರನನ್ನು ಗಂಗಾ ನದಿಯಲ್ಲಿ ಮುಳುಗಿಸಿದ ಪಾಲಕರು: ನಂತ್ರ ನಡೆದಿದ್ದು ಘೋರ ದುರಂತ

    ಡೆಹ್ರಾಡೂನ್​: ಮೂಢನಂಬಿಕೆ ಮತ್ತು ಪವಾಡ ನಡೆಯುತ್ತದೆ ಎಂಬ ಭರವಸೆಯು ಐದು ವರ್ಷದ ಬಾಲಕನ ದುರಂತ ಸಾವಿಗೆ ಕಾರಣವಾಗಿರುವ ಘಟನೆ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದಿದೆ.

    ಮೃತ ಬಾಲಕ ಲುಕೇಮಿಯಾ (ರಕ್ತದ ಕ್ಯಾನ್ಸರ್​) ಕಾಯಿಲೆಯಿಂದ ಬಳಲುತ್ತಿದ್ದ. ಗಂಗಾ ನದಿಯ ನೀರು ರೋಗ ವಾಸಿ ಮಾಡುತ್ತದೆ ಎಂದು ಪಾಲಕರು ನಂಬಿದ್ದರು. ಆದರೆ, ಉತ್ತರ ಭಾರತದಲ್ಲಿ ಚಳಿಯ ಅಬ್ಬರ ಭೀಕರವಾಗಿದ್ದು, ಮಂಜುಗೆಡ್ಡೆಯಷ್ಟು ತಣ್ಣನೆಯ ನೀರಿನಲ್ಲಿ ಮುಳುಗಿಸಿದ ಪರಿಣಾಮ ಬಾಲಕ ಕೊನೆಯುಸಿರೆಳೆದಿದ್ದಾನೆ. ಪ್ರಾಣ ಉಳಿಸುವ ಪಾಲಕರ ಯತ್ನ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬಾಲಕನ ಕುಟುಂಬ ದೆಹಲಿಯಲ್ಲಿ ವಾಸಿಸುತ್ತಿದೆ. ನಿನ್ನೆ 9ಗಂಟೆ ಸುಮಾರಿಗೆ ಹರಿದ್ವಾರಕ್ಕೆ ಹೊರಟರು. ಮಗುವಿನೊಂದಿಗೆ ಪಾಲಕರು ಮತ್ತು ಇನ್ನೊಬ್ಬ ಮಹಿಳಾ ಸಂಬಂಧಿ ಇದ್ದರು. ಬಾಲಕ ಆರಾಮಾಗಿ ಇರಲಿಲ್ಲ.ಆತ ಕ್ಯಾನ್ಸರ್​ನಿಂದ ಬಳಲುತ್ತಿದ್ದಾನೆ ಮತ್ತು ದೆಹಲಿಯ ವೈದ್ಯರು ಸಹ ಆತ ಬದುಕುವುದಿಲ್ಲ ಎಂದು ಹೇಳಿದರು ಎಂದು ಕ್ಯಾಬ್ ಚಾಲಕ ತಿಳಿಸಿದ್ದಾರೆ.

    ಬಾಲಕನ ಪಾಲಕರು ಪ್ರಾರ್ಥನೆಗಳನ್ನು ಪಠಿಸುತ್ತಿರುವಾಗ ಆತನ ಚಿಕ್ಕಮ್ಮ ಅವನನ್ನು ನೀರಿನ ಅಡಿಯಲ್ಲಿ ಮುಳುಗಿಸಿದ್ದಾರೆ. ಬಾಲಕನನ್ನು ನೀರಿನ ಅಡಿಯಲ್ಲಿ ತುಂಬಾ ಹೊತ್ತು ಇರಿಸಿದ್ದನ್ನು ಗಮನಿಸಿ, ಅಲ್ಲಿಯೇ ಇದ್ದ ಕೆಲವರು ಕೂಡಲೇ ಈ ಆಚರಣೆ ನಿಲ್ಲಿಸುವಂತೆ ಕೇಳಿದ್ದಾರೆ. ಆದರೆ, ನೀರಿನಿಂದ ಹೊರ ತೆಗೆಯಲು ಪಾಲಕರು ನಿರಾಕರಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಜಮಾಯಿಸಿದ ಜನರು ಬಲವಂತವಾಗಿ ಬಾಲಕನನ್ನು ಹೊರಗೆ ತೆಗೆದರು. ಈ ವೇಳೆ ಬಾಲಕನ ಚಿಕ್ಕಮ್ಮ ಕೂಗಾಡಿ, ದಾಳಿ ಮಾಡಲು ಯತ್ನಿಸಿದರು. ಆದರೆ, ಬಾಲಕನನ್ನು ಮೇಲೆತ್ತಿ ಆಸ್ಪತ್ರೆಗೆ ಸಾಗಿಸಲಾಯಿತು. ಪರೀಕ್ಷಿಸಿದ ವೈದ್ಯರು ಬಾಲಕ ಮೃತಪಟ್ಟಿರುವುದಾಗಿ ಘೋಷಿಸಿದರು.

    ಇಷ್ಟೆಲ್ಲ ಆದರೂ ಬಾಲಕನ ಚಿಕ್ಕಮ್ಮ ಮೃತದೇಹದ ಪಕ್ಕದಲ್ಲಿ ಕುಳಿತು ಮಗು ಮತ್ತೆ ಬದುಕುವುದು ಖಚಿತ ಎಂದು ಹೇಳುತ್ತಿದ್ದಾರೆ.

    ಬಾಲಕ ದೆಹಲಿಯ ಉನ್ನತ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿದ್ದ ಎಂದು ಹರಿದ್ವಾರ ನಗರ ಪೊಲೀಸ್ ಮುಖ್ಯಸ್ಥ ಸ್ವತಂತ್ರ ಕುಮಾರ್ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪಾಲಕರು ಮತ್ತು ಬಾಲಕನ ಚಿಕ್ಕಮ್ಮನನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆಗೆ ಒಳಪಡಿಸಿದ್ದೇವೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

    ಇನ್ಮುಂದೆ ಸುಮ್ಮನಿರಲ್ಲ… ಪರ್ಸನಲ್​ ಫೋಟೋಗಳನ್ನು ಹರಿಬಿಟ್ಟು ಪವಿತ್ರಾಗೆ ವಿಜಯಲಕ್ಷ್ಮೀ ಖಡಕ್​ ಎಚ್ಚರಿಕೆ!

    ರಸ್ತೆ ಬದಿ ಕಾರಿನೊಳಗೆ ಲವರ್ಸ್ ಕಾಮದಾಟ​: ಬುದ್ಧಿ ಹೇಳಲು ಹೋದ SI ಮೇಲೆ ಕಾರು ಹರಿಸಲು ಯತ್ನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts